ಹುಬ್ಬಳ್ಳಿ : ಪಾಕಿಸ್ತಾನ, ಅಪಘಾನಿಸ್ತಾನ, ಮುಸಲ್ಮಾನ, ಹಿಂದು, ಹಿಂದುತ್ವ ಈ ರೀತಿಯ ಶಬ್ದಗಳ ಮೇಲೆ ಬಿಜೆಪಿಯವರು ಲೋಕಸಭಾ ಚುನಾವಣೆ ಮಾಡ್ತಾರೇ ವಿನಹ ಅವರು ಅಭಿವೃದ್ಧಿ ಮೇಲೆ ಚುನಾವಣೆ ಮಾಡುವುದಿಲ್ಲ ಎಂದು ಬಿಜೆಪಿ ವಿರುದ್ಧ ಸಚಿವ ಸಂತೋಷ ಲಾಡ್ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014 ರಲ್ಲಿನ ಡಾಲರ್ ಬೆಲೆಗೂ ಈಗಿನ ಡಾಲರ್‌ಗೆ ಬೆಲೆಗೂ ವ್ಯತ್ಯಾಸ ಇದೆ, ಅದರ ಬಗ್ಗೆ ಬಿಜೆಪಿಯವರು ಉತ್ತರ ನೀಡಲಿ ಎಂದು ಸವಾಲು ಹಾಕಿದರು.
ನಮ್ಮ ಸರ್ಕಾರದ ಐದು ಗ್ಯಾರಂಟಿಗಳು ಮತ್ತು ಬಿಜೆಪಿ ಸುಳ್ಳು ಹೇಳಿರುವುದನ್ನ ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತೇವೆ, ಯುಪಿಎ-1, ಯುಪಿಎ-2 ನಲ್ಲಿ ಮಾಡಿದ ಕಾರ್ಯಕ್ರಮಗಳನ್ನಿಟ್ಟುಕೊಂಡು ಲೋಕಸಭಾ ಚುನಾವಣೆಗೆ ಹೋಗ್ತಾ ಇದೇವಿ ಎಂದರು.
ಪಾಕಿಸ್ತಾನ ಪರ ಜೈಘೋಷ ಹಾಕಿದ್ರೆ ಸಿಎಮ್ ಮತ್ತು ಡಿಸಿಎಮ್ ಏಕೆ ರಾಜೀನಾಮೆ ನೀಡಬೇಕು. ಮಂಡ್ಯದಲ್ಲಿ ಘೋಷಣೆ ಹಾಕಿದ್ದಾರಲ್ಲ, ಮೋದಿ, ಗೃಹ ಸಚಿವರು ರಾಜೀನಾಮೆ ಕೋಡ್ತಾರಾ..? ಎಂದು ಪ್ರಶ್ನಿಸಿದರು.
ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿ ಕಾಲದಲ್ಲಿ ಬಾಂಬ್ ಬ್ಲಾಸ್ಟ್ ಆಗಿಲ್ಲವೇ..? ಎಂದು ಪ್ರಶ್ನಿಸಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗಲೂ ರಾಜ್ಯದಲ್ಲಿ ಬಾಂಬ್ ಬ್ಲಾಸ್ಟ್ ಗಳಾಗಿವೆ. ಆಗ ಬಿಜೆಪಿಗೆ ನೈತಿಕತೆ ಇರಲಿಲ್ಲವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು.
ಇಂತಹ ಚಟುವಟಿಕೆಗಳಿಗೆ ಯಾವುದೇ ಪಕ್ಷ ಬೆಂಬಲ ಕೊಡಲ್ಲ, ಚುನಾವಣೆ ಬಂದಿರೋದ್ರಿಂದ ಪಾಕಿಸ್ತಾನ್, ಬ್ಲಾಸ್ಟ್ ಇತ್ಯಾದಿ ಬರ್ತಿವೆ. ಕಳೆದ ಹತ್ತು ವರ್ಷದಿಂದಲೂ ಅವರು ಅದನ್ನೇ ಮಾಡಿದ್ದಾರೆ. ಎಂದು ಆರೋಪಿಸಿದರು.
ಮಂಡ್ಯದಲ್ಲಿ ಕೇಸರಿ ಶಾಲು ಹಾಕಿಕೊಂಡು ಪಾಕ್ ಪರ ಘೋಷಣೆ ಕೂಗಿದ್ದಾರೆ. ಈ ಘಟನೆಯ ನೈತಿಕ ಹೊಣೆ ಹೊತ್ತು ಪ್ರಧಾನಿ ರಾಜೀನಾಮೆ ನೀಡಬೇಕಾ..? ಶೆಟ್ಟರ್ ಅವರು ಇದ್ರ ಬಗ್ಗೆ ಏನ್ ಹೇಳ್ತಾರೆ. ಎಲ್ಲ ಉತ್ತರಗಳೂ ಅವರ ಬಳಿಯೇ ಇವೆ, ಜಗದೀಶ್ ಶೆಟ್ಟರ್ ಅವರು ಸದ್ಯ ಬಹಳ ಸ್ಪೀಡ್ ನಲ್ಲಿದ್ದಾರೆ. ನರೇಗಾ ಯೋಜನೆ ಕೂಲಿ ಹಣ ಬಿಡುಗಡೆಯಾಗದೇ ಇರೋದಕ್ಕೆ ಕಿಡಿಕಾರಿದರು.
ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಆದ್ರೆ ಕೂಲಿ ಮಾಡಿ ನಾಲ್ಕೈದು ತಿಂಗಳಾದ್ರೂ ಹಣ ಬಿಡುಗಡೆಯಾಗಿಲ್ಲ. ರಾಜ್ಯಕ್ಕೆ 1400 ಕೋಟಿ ರೂಪಾಯಿ ಬಾಕಿ ಬರಬೇಕಾಗಿದೆ, ಬರ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 50 ದಿನಕ್ಕೆ ಹೆಚ್ಚಿನ ಕೆಲಸ ಕೇಳಿದ್ದೇವೆ. ಆದರೆ ಇದುವರೆಗೂ ಕೇಂದ್ರ ಒಪ್ಪಿಗೆ ಸೂಚಿಸಿಲ್ಲ. ಬರಗಾಲದ ಪರಿಹಾರವಾಗಿ ನಾವು ಕೈಲಾದಷ್ಟು ಕೊಟ್ಟಿದ್ದೇವೆ. ಆದ್ರೆ ಕೇಂದ್ರ ಸರ್ಕಾರ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು. .
ಕಾರ್ಮಿಕ ಇಲಾಖೆಯಲ್ಲಿ ಲ್ಯಾಪ್ ಟಾಪ್ ಖರೀದಿಯಲ್ಲಿ ಅವ್ಯವಹಾರ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ರೀತಿಯಲ್ಲಿ ಅಕ್ರಮ ನಡೆದಿಲ್ಲ. ಲೋಕಸಭಾ ಚುನಾವಣೆಗೆ ಸ್ಪರ್ಧಿಸೋ ಕುರಿತು ಪ್ರತಿಕ್ರಿಯಿಸಲು ಲಾಡ್ ನಿರಾಕರಿಸಿದರು.
ಹಾಲಿ ಸಚಿವರು, ಮಾಜಿ ಸಚಿವರು ಕೆಲವೆಡೆ ಸ್ಪರ್ಧಿಸುತ್ತಾರೆ, ಗಂಗೂಬಾಯಿ ಹಾನಗಲ್ ಗುರುಕುಲ ಸಮಸ್ಯೆ ಬಗೆಹರಿಸ್ತೇವೆ. ಶೆಟ್ಟರ್ ಹೇಳಿದಂತೆ ಫ್ಲಡ್ ಗೇಟ್ ಆದ್ರೂ ಓಪನ್ ಆಗ್ಲಿ. ನಮ್ಮಲ್ಲಿರೋ ಬರಗಾಲನಾದ್ರೂ ನಿವಾರಣೆಯಾಗುತ್ತೆ. ಜಗದೀಶ್ ಶೆಟ್ಟರ್ ರ ಫ್ಲಡ್ ಗೇಟ್ ಓಪನ್ ಹೇಳಿಕೆಗೆ ಸಂತೋಷ್ ಲಾಡ್ ಟಾಂಗ್ ನೀಡಿದರ