DRIVERLESS METRO TRAIN TRAIL RUN: ಚಾಲಕ ರಹಿತ ಮೆಟ್ರೋ ರೈಲು ಟ್ರಯಲ್ ರನ್ ಆರಂಭ: ಆರ್ ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗ ಚಲಿಸುವ ರೈಲು

ಬೆಂಗಳೂರು : ಬೆಂಗಳೂರು ಮೆಟ್ರೋ ರೈಲ್ ನಿಗಮದ(BMRCL) ಬಹು ನಿರೀಕ್ಷಿತ ಚಾಲಕ ರಹಿತ ಮೆಟ್ರೋ ರೈಲಿನ ಪ್ರಯೋಗಾರ್ಥ ಸಂಚಾರ ಗುರುವಾರ ಸಂಜೆಯಿಂದ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಆರ್ ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗವಾಗಿ ಚಲಿಸುವ ಈ ರೈಲು ಪರಿಕ್ಷಾರ್ಥ ಸಂಚಾರ ಯಶಸ್ಸಿಯಾಗಿದೆ.
ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಒಟ್ಟು 18.82 ಕಿ. ಮೀ ಇರುವ ಈ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಸಂಚಾರದಲ್ಲಿ ಇನ್ನು ಹಲವು ರೀತಿಯ ಪ್ರಯೋಗಗಳನ್ನು ಮಾಡಲಿದೆ. ಈ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳು ಬರಲಿದ್ದು, ಎಲ್ಲಾವೂ ಎತ್ತರಿಸಿದ ಮಾರ್ಗಗಳಾಗಿವೆ.

ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆಯಿಂದ ಆರಂಭವಾದ ಪ್ರಯೋಗಾರ್ಥ ಸಂಚಾರ ಇನ್ನೂ ಮೂರು ದಿನಗಳ ಕಾಲ ಚಾಲಕ ರಹಿತ ಮೆಟ್ರೋ ಸಂಚಾರ ಟ್ರಯಲ್ ರನ್ ನಡೆಯಲಿದೆ. ಬಿಎಂಆರ್ ಸಿಎಲ್ ಒಟ್ಟು 37 ಪರೀಕ್ಷೆಗಳನ್ನು ಮಾಡಲಿದ್ದು, ಈ ಪರೀಕ್ಷೆ ಯಶಸ್ವಿಯಾದ ಬಳಿಕವೇ ಸಾರ್ವಜನಿಕರ ಪ್ರಯಾಣಕ್ಕೆ ಮೆಟ್ರೋ ಸೇವೆ ಲಭ್ಯವಾಗಲಿದೆ.

More News

You cannot copy content of this page