ಚೆನ್ನೈ : ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಮಿದುಳು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನುವುದು ಶುದ್ಧ ಸುಳ್ಳು ಸುದ್ದಿ, ಅವರಿಗೆ ಯಾವುದೇ ರೀತಿಯ ಸರ್ಜರಿಯಾಗಿಲ್ಲ, ಮಿದುಳಿನಲ್ಲಿ ಯಾವುದೇ ರೀತಿಯ ಗುಳ್ಳೆಗಳಾಗಿಲ್ಲ ಎಂದು ಅವರ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಅಜಿತ್ ಅವರು ಸಮಾನ್ಯ ಪರೀಕ್ಷೆಗಾಗಿ ಗುರುವಾರ ಆಸ್ಪತ್ರೆಗೆ ತೆರಳಿದ್ದರು. ಮಿದುಳು ಮತ್ತು ಕಿವಿಗೆ ಕನೆಕ್ಟ್ ಆಗುವ ನರದಲ್ಲಿ ಸಣ್ಣ ಊತ ಕಾಣಿಸಿಕೊಂಡಿತ್ತು. ಅದನ್ನು ಸಾಮಾನ್ಯ ವೈದ್ಯಕೀಯ ತಪಾಸಣೆ ಮೂಲಕ ಸರಿಪಡಿಸಲಾಗಿದೆ. ಯಾವುದೇ ರೀತಿಯಲ್ಲಿ ಅವರು ಸರ್ಜರಿಗೆ ಒಳಗಾಗಿಲ್ಲ, ಅಜಿತ್ ಇದೀಗ ಆರೋಗ್ಯವಾಗಿದ್ದು, ಮನೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಅಜಿತ್ ಅವರು ವಿದಾ ಮುಯರಾಚಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಇದರ ಶೂಟಿಂಗ್ ವಿದೇಶದಲ್ಲಿ ನಡೆಯುತ್ತಿದೆ. ಕುಟುಂಬದ ಜತೆ ಸಮಯ ಕಳೆಯಲು ಅವರು ಭಾರತಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವಿದಾ ಮುಯರಾಚಿ ಸಿನಿಮಾದಲ್ಲಿ ತ್ರಿಶಾ, ಅರ್ಜುನ್ ಸರ್ಜಾ ಸೇರಿದಂತೆ ಅನೇಕ ಖ್ಯಾತ ನಾಮರು ನಟಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ ನಿನಿಮಾ ನಿರ್ಮಾಣ ಮಾಡುತ್ತಿದ್ದು, ಮುಗಿಳ್ ತುರುಮೇನಿ ಅವರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.