ಬೆಂಗಳೂರು : ಈಗ ಸ್ಥಿರವಾದ ಸರ್ಕಾರ ಇದೆ, ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ, ದಲಿತ ಸಿಎಂ ವಿಚಾರ ಇದೀಗ ಅಪ್ರಸ್ತುತ, ಸದ್ಯಕ್ಕೆ ಇದರ ಬಗ್ಗೆ ಚರ್ಚೆ ಮಾಡದೇ ಇರೋದೇ ಸೂಕ್ತ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ದಲಿತ ಸಿಎಂ ಆಗಬೇಕೆಂಬ ಕೂಗು ಎದ್ದಿರುವ ಹಿನ್ನೆಲೆಯಲ್ಲಿ ಪರಮೇಶ್ವರ್ ಈ ಸ್ಪಷ್ಟನೆ ನೀಡುವುದರ ಮೂಲಕ ಸಚಿಲವ ಮಹದೇವಪ್ಪ ಅವರಿಗೆ ಟಾಂಗ್ ನೀಡಿದರು.
ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸೀಟು ಗೆಲ್ಲೋಕೆ ನಾವು ಪ್ರಯತ್ನ ಮಾಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸೀಟು ಬರುತ್ತೆ, ಆಡಳಿತ ನಡೆಸಲು ಸುಗಮವಾಗುತ್ತೆ, ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಣೆ ಮಾಡ್ತಾರೆ, ಮತ ಹಾಕಿಸಿಕೊಳ್ಳಲು ಮನವೊಲಿಕೆ ಮಾಡ್ತಾರೆ ಅಂತಾ ಒಬ್ರು ಹೇಳ್ತಾರೆ…ಇನ್ನೊಬ್ರು ಈಗ್ಯಾಕೆ ಅದೆಲ್ಲಾ ಅಂತಾರೆ, ಚರ್ಚೆಗೆ ಬಿಟ್ಟರೆ ಒಬ್ಬೊಬ್ಬರು ಒಂದೊಂದು ಹೇಳ್ತಾರೆ, ಈಗ ದಲಿತ ಸಿಎಂ ಅಪ್ರಸ್ತುತ ಅನ್ನೋದು ನನ್ನ ಅನಿಸಿಕೆ ಎಂದರು.

ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು, ತುಮಕೂರು ಗೆಲ್ಲೋ ಸೀಟು, ಗೆಲ್ಲುವ ಸಾಧ್ಯತೆ ಇದೆ, ಎಲ್ಲಾರು ಪ್ರಯತ್ನ ಮಾಡಬೇಕು, ಕೆಲವರು ನಮಗೆ ಬೇಕು ಅಂತಾ ಕೇಳಿದ್ರು, ಕೆಲವರಲ್ಲಿ ಸ್ವಲ್ಪ ಅಸಮಾಧಾನ ಇರುತ್ತೆ, ಅದೆಲ್ಲಾ ಸರಿಮಾಡಿಕೊಂಡು ಹೋಗಬೇಕು.ಬಾಕಿ ಕ್ಷೇತ್ರಗಳ ಪ್ರೊಸೆಸ್ ನಡೀತಾ ಇದೆ ಎಂದರು.
ಇದೇ ತಿಂಗಳ 11ರಂದು ಎಲ್ಲಾವೂ ಕ್ಲಿಯರ್ ಮಾಡ್ತೀವಿ ಅಂತಾ ಅಧ್ಯಕ್ಷರೇ ಹೇಳಿದ್ದಾರೆ, ಅಸಮಾಧಾನಿತರನ್ನ ಕೂರಿಸಿಕೊಂಡು ಮನವೊಲಿಸ್ತೀವಿ, ಬಹಳ ಜನ ಆಕಾಂಕ್ಷಿಗಳು ಇದ್ರು, ಸ್ಕ್ರೀನಿಂಗ್ ಮಾಡಿ ಲಿಸ್ಟ್ ತೆಗೆದುಕೊಂಡು ಹೋಗಿದ್ರು, ಹೈಕಮಾಂಡ್ ರೆಕಮಂಡ್ ಮಾಡಿ ಟಿಕೆಟ್ ಕೊಟ್ಟಿದ್ದಾರೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಅನುಮಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮಲ್ಲಿಕಾರ್ಜುನ್ ಖರ್ಗೆಯವರ ಸ್ಪರ್ಧೆ ನನಗೆ ಗೊತ್ತಿಲ್ಲ.. ಅಂತಿಮವಾಗಿ ಅವ್ರೇ ತೀರ್ಮಾನ ಮಾಡಬೇಕು, ಅವ್ರು ಎಐಸಿಸಿ ಅಧ್ಯಕ್ಷರಿದ್ದಾರೆ ತೀರ್ಮಾನ ಮಾಡ್ತಾರೆ, ಅವರ ಸ್ಪರ್ಧೆ ಬಗ್ಗೆ ನಾವು ಹೇಳೋಕೆ ಆಗಲ್ಲ ಎಂದು ವಿವರಿಸಿದರು.
ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ವಿಚಾರ
ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ವಿಚಾರವಾಗಿ ಮಾತನಾಡಿದ ಅವರು, ಒಂದೊಂದು ರೀತಿಯಲ್ಲಿ ಮಾಹಿತಿಗಳು ಸಿಕ್ತಾ ಇವೆ, ಎನ್ ಐಎ ತನಿಖೆ ತೀವ್ರ ಗತಿಯಲ್ಲಿ ನಡೀತಾ ಇದೆ, ನಮ್ಮ ಸಿಸಿಬಿಯವ್ರು ಕೂಡ ಸಪೋರ್ಟ್ ಮಾಡ್ತಿದ್ದಾರೆ, ಜೈಲಿನಲ್ಲಿ ವಿಚಾರಣೆ ಬಗ್ಗೆ ಎನ್ ಐಎ ಗಮನಿಸಿದ್ದಾರೆ, ಬಹಳ ಸೀರಿಯಸ್ ಆಗಿ ತೆಗೆದುಕೊಂಡಿದ್ದೇವೆ ಎಂದು ವಿವರಿಸಿದರು.