ಬೆಂಗಳೂರು : ಮಕ್ಕಳಿಂದ ದೊಡ್ಡವರು ಸೇರಿ ಎಲ್ಲರೂ ಇಷ್ಟಪಟ್ಟು ತಿನ್ನುವ ಗೋಬಿ ಮತ್ತು ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಉಂಟು ಮಾಡುವ ಅಂಶಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇದನ್ನು ನಿಷೇಧಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಗೋಬಿ ಮಂಚೂರಿಯನ್ ಮತ್ತು ಕಾಟನ್ ಕ್ಯಾಂಡಿ ಮಾದರಿಯು ಆರೋಗ್ಯಕ್ಕೆ ಮಾರಕ ಮತ್ತು ಬಣ್ಣಗಳ ಬಳಕೆ ಮತ್ತು ರಾಸಾಯನಿಕಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇವು ಅರಸುರಕ್ಷಿತ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಇವುಗಳನ್ನು ರಾಜ್ಯದಲ್ಲಿ ಮಾರಾಟವನ್ನು ನಿಷೇಧಿಸಲು ಆರೋಗ್ಯ ಇಲಾಖೆ ಮುಂಂದಾಗಿದೆ. ಈ ಸಂಬಂಧ ಆರೋಗೇ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಹತ್ವದ ಘೋಷಣೆ ಮಾಡುವ ಸಾಧ್ಯತೆಗಳಿವೆ.

ತಜ್ಞರು ರಾಜ್ಯದಲ್ಲಿನ ಸುಮಾರು 170 ಕಡೆಗಳಲ್ಲಿ ಗೋಬಿ ಮಂಚೂರಿ ಮಾದರಿಗಳ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 100 ಕ್ಕೂ ಹೆಚ್ಚು ಅಸುರಕ್ಷಿತ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಆದ್ದರಿಂದ ತಜ್ಞರು ಕೂಡ ಇದು ಅಸುರಕ್ಷಿತ ಎಂದು ತಿಳಿಸಿದ್ದಾರೆ.ಗೋಬಿ ಮಂಚೂರಿಯಲ್ಲಿ ಸನ್ ಸೆಟ್ ಯೆಲ್ಲೋ ಬಣ್ಣ ಮತ್ತು ಟಾಟ್ರಾಜಿನ್ ರಾಸಾಯನಿಕ ಅಂಶ ಮತ್ತು ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ರೋಡಮೈನ್ ಬಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇವುಗಳನ್ನು ಆರೋಗ್ಯ ಇಲಾಖೆ ನಿಷೇಧಿಸಲು ಮುಂದಾಗಿದೆ. ಈಗಾಗಲೇ ಪುದುಚೇರಿ ಮತ್ತು ತಮಿಳುನಾಡು ಸರ್ಕಾರ ಅಸುರಕ್ಷಿತ ಗೋಬಿ ಮತ್ತು ಕಾಟನ್ ಕ್ಯಾಂಡಿಯನ್ನು ನಿಷೇಧಿಸಿವೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲೂ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ ಎಂದು ತಿಳಿದುಬಂದಿದೆ.