ಬೆಂಗಳೂರು : ಹಾವೇರಿಯ ಬ್ಯಾಡಗಿಯಲ್ಲಿ ನಡೆದ ಗಲಾಟೆಯಲ್ಲಿ ಸುಮಾರು 6-7 ವಾಹನಗಳು ಸುಟ್ಟುಹೋಗಿವೆ. ಕೆಲವರು ಗಾಯಗೊಂಡಿದ್ದಾರೆ. ಇದಕ್ಕೆ ಕಾರಣ ಕೇವಲ ಮೆಣಸಿಗೆ ರೇಟು ಕುಸಿದಿದೆ ಅನ್ನೋದು ಅಥವಾ ಬೇರೆ ಕಾರಣವಿದೆಯಾ ಅನ್ನೋದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಡಗಿ ಮಾರುಕಟ್ಟೆಗೆ ಕೇವಲ ಕರ್ನಾಟಕದವರೇ ಮಾತ್ರವಲ್ಲ, ಆಂಧ್ರಪ್ರದೇಶದಿಂದಲೂ ಮಾರ್ಕೆಟ್ ಗೆ ಬರುತ್ತಾರೆ, ಗಲಾಟೆ ಯಾರು ಮಾಡಿದ್ರು ಅಂತ ವಿಚಾರಣೆ ಮಾಡ್ತಾ ಇದ್ದೇವೆ ಎಂದರು.
ಒಂದೇ ದಿನ ರೇಟು ಅಷ್ಟು ಯಾಕೆ ಕುಸಿದಿದೆ ಅಂತ ಗೊತ್ತಿಲ್ಲ, ಒಂದೇ ದಿನದಲ್ಲಿ 20 ಸಾವಿರ ಇರೋ ರೇಟು 8 ಸಾವಿರಕ್ಕೆ ಬಂದಿದೆ, ಇದಕ್ಕೆ ರೈತರು ರಿಯಾಕ್ಟ್ ಮಾಡಿದ್ದಾರೆ, ಯಾರು ಕಾರಣ ಅಂತ ತನಿಖೆಯಿಂದ ಗೊತ್ತಾಗಲಿದೆ ಎಂದರು.
ಎಷ್ಯಾದಲ್ಲೇ ಅತೀ ದೊಡ್ಡದಾದ ಎಪಿಎಂಸಿ ಮೆಣಸಿನಕಾಯಿ ಮಾರ್ಕೆಟ್ ಇದಾಗಿದೆ. ಘಟನೆಯಿಂದ ನಮಗೂ ಬೇಸರ ಆಗಿದೆ, ಫೈರ್ ಇಂಜಿನ್ ಗೂ ಕೂಡ ಬೆಂಕಿ ಹಾಕಿದ್ದಾರೆ, ರೇಟ್ ಕಡಿಮೆ ಮಾಡೋಕೆ ಕಾರಣ ಯಾರು ಅಂತ ತನಿಖೆ ಮಾಡ್ತಾ ಇದ್ದಾರೆ, ಈಗಾಗಲೇ 40-45 ಜನರನ್ನ ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.
ಯಾರು ಬೆಂಕಿ ಹಾಕಿದ್ದು, ಯಾರು ಆಪೀಸ್ ಗೆ ನುಗ್ಗಿದ್ದು ಎಲ್ಲವನ್ನು ತನಿಖೆ ಮಾಡ್ತಿದ್ದಾರೆ, ನಾಶಿಪುಡಿಗೂ ಘಟನೆಗೂ ಲಿಂಕ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅದಕ್ಕೂ ಇದಕ್ಕೆ ಸಂಬಂಧ ಇಲ್ಲ ಎಂದ ಪರಮೇಶ್ವರ್ ಸ್ಪಷ್ಟಪಡಿಸಿದರು.
ಬಾಂಬ್ ಬ್ಲ್ಯಾಸ್ಟ್ ಆರೋಪಿ ಮಲೆನಾಡಿನ ವ್ಯಕ್ತಿ ಶಂಕೆ
ಬಾಂಬ್ ಬ್ಲ್ಯಾಸ್ಟ್ ಆರೋಪಿ ಮಲೆನಾಡಿನ ವ್ಯಕ್ತಿ ಎಂಬ ಶಂಕೆ ವಿಚಾರವಾಗಿ ಮಾತನಾಡಿದ ಅವರು, ನಾನು ಮೀಡಿಯಾದಲ್ಲಿ ನೀಡಿದ್ದೇನೆ, ಅದೆಲ್ಲ ಗ್ಯಾರಂಟಿ ಆಗಬೇಕು ಅಲ್ಲ, ಸಾಕಷ್ಟು ಊಹಾಪೋಹಗಳು ಬರ್ತಿದೆ, ಕರ್ನಾಟಕದವನು ಅಲ್ಲಿಯವನು ಅಂತ ಊಹಾಪೋಹಗಳು ಬರ್ತಾ ಇದ್ದಾವೆ, ಆದ್ರೆ ಹಿಡಿದು ತನಿಖೆ ನಡೆಸಿದಾಗ ಇದು ಗೊತ್ತಾಗುತ್ತದೆ ಎಂದರು.
ಬ್ಯಾಡಗಿ ಘಟನೆ
ಹಾವೇರಿಯ ಬ್ಯಾಡಗಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರ ಏಕಾಏಕಿ ಕುಸಿತದ ಹಿನ್ನಲೆಯಲ್ಲಿ ನಿನ್ನೆ ಆಕ್ರೋಶಗೊಂಡ ರೈತರು ಬ್ಯಾಡಗಿ ಎಪಿಎಂಸಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಕೆಲವು ಕಿಡಿಗೇಡಿಗಳು ಎಪಿಎಂಸಿ ಆಡಳಿತ ಕಚೇರಿಗೆ ಕಲ್ಲು ತೂರಾಟ ಮಾಡಿದ್ದಾರೆ, ಆಡಳಿತ ಕಚೇರಿಯ ಗ್ಲಾಸ್ ಪೀಸ್ ಪೀಸ್ ಮಾಡಿದ್ದಾರೆ, ಅಧ್ಯಕ್ಷರ ಕಾರ್ ಗೆ ಬೆಂಕಿ ಹಚ್ಚಿ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.
ಬ್ಯಾಡಗಿಯಲ್ಲಿ ಗಲಾಟೆ ಪ್ರಕರಣ ಜಿಲ್ಲಾಧಿಕಾರಿ ರಘನಂಧನಮೂರ್ತಿ ಹೇಳಿಕೆ ನೀಡಿದ್ದು, ಪ್ರತಿವಾರ ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಹರಾಜಾಗುತ್ತದೆ, ಬಳಿಕ ದರ ಫಿಕ್ಸ್ ಆಗುತ್ತದೆ, ಕಳೆದ ವಾರಕ್ಕೂ ಈ ವಾರಕ್ಕೆ ಎರಡು ಮೂರು ಸಾವಿರ ದರ ಕುಸಿತವಾಗಿತ್ತು, ದರ ಕುಸಿತವಾಗಿದ್ದರಿಂದ ಎಪಿಎಂಸಿ ಕಚೇರಿಗೆ ಬೆಂಕಿ ಹಚ್ಚಿದ್ದಾರೆ, ಎಪಿಎಂಸಿಯ ನಾಲ್ಕು ವಾಹನ, ಖಾಸಗಿ ಎರಡು ಕಾರು, ಅಗ್ನಿಶಾಮಕ ಇಲಾಖೆ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿಸಿದರು. ಈ ಸಂಬಂಧ ಇಂದು ಮತ್ತೊಮ್ಮೆ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದ್ದಾರೆ.
ಬ್ಯಾಡಗಿಯಲ್ಲಿ ಎಸ್ಪಿ ಅಂಶುಕುಮಾರ್, ಮೂವರು ಪೊಲೀಸ್ ಸ್ಟಾಪ್ ಗೆ ಗಾಯ ಆಗಿದೆ, ಓರ್ವ ಖಾಸಗಿ ವಾಹಿನಿಯ ಪತ್ರಕರ್ತರಿಗೆ ಗಾಯ ಆಗಿದೆ, ಇದರಲ್ಲಿ ಯಾರಾರು ಇನ್ವಾಲ್ವ್ ಆಗಿದಾರೆ ತನಿಖೆ ಮಾಡ್ತಾ ಇದ್ದೇವೆ, ಈಗಾಗಲೇ ಹಲವು ಜನರನ್ನು ಬಂದಿಸಿದ್ದೇವೆ ಎಂದರು.