KUMARSWAMY WITH CONGRESS DIFFERENT WHITE PAPER..?: ಕುಮಾರಸ್ವಾಮಿ ಅವರು ಯಾವ ಪಕ್ಷದಲ್ಲಿ ಇರ್ತಾರೆ ಎಂಬುದರ ಕುರಿತು ಶ್ವೇತಪತ್ರ ಹೊರಡಿಸಲಿ: ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ

ಬೆಂಗಳೂರು : ರೈತರಿಗೆ ನೀಡಿದ ಹಣದ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಿ ಎಂಬ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಒತ್ತಾಯಕ್ಕೆ ತಿರುಗೇಟು ನೀಡಿದ ಸಚಿವ ಎಂ ಬಿ ಪಾಟೀಲ್, ಕುಮಾರಸ್ವಾಮಿ ಯಾವ ಪಕ್ಷದಲ್ಲಿ ಇರ್ತಾರೆ ಎಂಬುದರ ಶ್ವೇತಪತ್ರ ಹೊರಡಿಸಲಿ ಎಂದು ವ್ಯಂಗ್ಯವಾಡಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಜೊತೆ ಇದ್ದಾಗ ಬೇರೆ ಶ್ವೇತಪತ್ರ, ಬೇರೆಯವರ ಜೊತೆ ಇದ್ದಾಗ ಬೇರೆ ಶ್ವೇತಪತ್ರನಾ ಎಂದು ಪ್ರಶ್ನಿಸಿದರು.
ಜೆಡಿಎಸ್ ಗೆ ಕೇವಲ 2 ಕ್ಷೇತ್ರ ಮಾತ್ರ ಸಿಗುತ್ತಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು, 2ಕ್ಷೇತ್ರ ತಗೊಂಡು ಅವರು ಸಮಾಧಾನ ಅಗೋದಾದ್ರೆ ಅವರು ಯಾವ ಪರಿಸ್ಥಿತಿಯಲ್ಲಿ ಇದ್ದಾರೆ ಎನ್ನುವುದ ಅರ್ಥವಾಗುತ್ತೆ ಎಂದರು.
ಬಿಜೆಪಿಯ ಸಂಸದರು ಕೆಲಸ ಮಾಡಿಲ್ಲ ಅನ್ನೋದಾದ್ರೆ ಎಲ್ಲರನ್ನು ಬದಲಿಸಬೇಕು

ಬಿಜೆಪಿಯ 12 ಜನ ಸಂಸದರಿಗೆ ಟಿಕೆಟ್ ಮಿಸ್ ವಿಚಾರವಾಗಿ ಮಾತನಾಡಿದ ಅವರು, ಕೇವಲ 12 ಏಕೆ ಎಲ್ಲಾ ಸಂಸದರನ್ನು ಬದಲು ಮಾಡಬೇಕು ಎಂದು ಆಗ್ರಹಿಸಿದರು. ಕೆಲಸ ಮಾಡಿಲ್ಲ ಅನ್ನೋ ಮಾನದಂಡ ಇದ್ರೆ ಎಲ್ಲರನ್ನು ಬದಲು ಮಾಡಬೇಕು ಎಂದರು.
ಅವರೇ ಫ್ರೂ ಮಾಡಿದ್ದಾರಲ್ಲಾ ಕೆಲಸ ಮಾಡಿಲ್ಲ ಅಂತ ಸಂಸದರ ಬದಲಾವಣೆಯಿಂದ ಕಾಂಗ್ರೆಸ್ ಗೆ ಲಾಭವಾಗುತ್ತಾ ಎಂಬ ವಿಚಾರವಾಗಿ ಮಾತನಾಡಿದ ಅವರು, ಯಾರೇ ಅಭ್ಯರ್ಥಿಗಳಾದ್ರು ನಾವು ನಮ್ಮ ಕ್ಯಾಂಡಿಡೇಟ್ ಹಾಕುತ್ತೇವೆ, ಸಮರ್ಥವಾಗಿ ಚುನಾವಣೆ ಎದುರಿಸುತ್ತೇವೆ, ಗೆಲ್ಲುತ್ತೇವೆ ಎಂಬ ಆಶಾವಾದ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಲ್ಲಿ 6 ಅಭ್ಯರ್ಥಿಗಳ ಕೊರತೆ ವಿಚಾರವಾಗಿ ಮಾತನಾಡಿದ ಅವರು, ಇಲ್ಲ, ಎಲ್ಲಿಯೂ ಅಭ್ಯರ್ಥಿಗಳ ಕೊರತೆ ಇಲ್ಲ, ಸೂಕ್ತವಾದವರು ಇದ್ದಾರೆ, ಬೆಂಗಳೂರಿನ 3 ಕ್ಷೇತ್ರಗಳಿಗೂ ಅಭ್ಯರ್ಥಿಗಳು ಇದ್ದಾರೆ ಎಂದರು.
AICC ಅಧ್ಯಕ್ಷರು ಚುನಾವಣೆಗೆ ನಿಲ್ತಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು,. ಮಲ್ಲಿಕಾರ್ಜುನ ಖರ್ಗೆ ಅವರು ನಿಲ್ಲಬೇಕು, ಈ ಬಗ್ಗೆ ನಾವೆಲ್ಲರು ಒತ್ತಾಯ ಮಾಡಿದ್ದೀವಿ, ಅವರು AICC ಅಧ್ಯಕ್ಷರಿದ್ದಾರೆ, ದೇಶಾದ್ಯಂತ ಪ್ರಚಾರಕ್ಕೆ ಹೋಗಬೇಕು, ಹೀಗಾಗಿ ಅವರು ಚುನಾವಣೆಗೆ ನಿಲ್ಲಬೇಕಾ ಬೇಡ್ವಾ ಅಂತ ಪಕ್ಷ ತೀರ್ಮಾನ ಮಾಡುತ್ತೆ ಎಂದರು.

More News

You cannot copy content of this page