ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅಲೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಚಂದ್ರಚೂಡ್ ಅವರಿಂದ ಪಂಚರ್ ಆಗೋಗಿದೆ, ಚುನಾವಣಾ ಬಾಂಡ್ ಮೂಲಕ ಅವರ ಬಂಡವಾಳ ಬಯಲಾಗಿದೆ ಎಂದು ಸಚಿವ ಎಂ ಬಿ ಪಾಟೀಲ್ ಆರೋಪಿಸಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದರು. ನಾ ಕಾವೂಂಗಾ ನಾ ಕಾನೇದೂಂಗಾ ಅಂತಿದ್ರು, ಈಗ ಎಲ್ಲಾ ಬಯಲಾಗಿದೆ ಎಂದು ವ್ಯಂಗ್ಯವಾಡಿದ ಅವರು, ಎಲೆಕ್ಟ್ರೋರಲ್ ಬಾಂಡ್ ಇಲ್ಲಿಗೆ ನಿಲ್ಲಲ್ಲ, ಇನ್ನೂ ಮುಂದುವರೆಯುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಟ್ರಾಕ್ಟ್ ಕೊಟ್ಟು ಹಣ ವಸೂಲಿ ಮಾಡಿದ್ದಾರೆ, ಹೆದುರಿಸಿ ಬೆದರಿಸಿ ದುಡ್ಡು ತಗೊಂಡಿದ್ದಾರೆ, ಬಹಳ ಸ್ಪಷ್ಟ ಇದೆ ಅವ್ಯವಹಾರ ಆಗಿರೋದು, ಬಹಳ ಸ್ಪಷ್ಟ ಇದೆ, ಬಾಂಡ್ ಅವ್ಯವಹಾರದ ಬಗ್ಗೆ ದಾಖಲೆಗಳಿವೆ, ಮೋದಿ ತಮ್ಮದೇ ಆದ ಇಮೇಜ್ ಫೋಸ್ ಮಾಡ್ತಿದ್ರು , ಆ ಮುಖವಾಡ ಕಳಚಿ ಬಿದ್ದಿದೆ ಎಂದು ಟಿಕೀಸಿದರು.

ಜನ ಇದನ್ನು ಅರ್ಥ ಮಾಡ್ಕೊಂಡಿದ್ದಾರೆ, ಅರ್ಥ ಮಾಡಿಕೊಳ್ಳಬೇಕು ಅಂತ ನಾವು ಬಯಸಿದ್ದೀವಿ, ನಮ್ಮ ಪಾರ್ಟಿಗೂ ದೇಣಿಗೆ ಬಂದಿದೆ, ನಮ್ಮ ಬಳಿ IT- ED ಇಲ್ಲ, ಸ್ವಾಭಾವಿಕವಾಗಿ ಕೊಟ್ಟಿದ್ದಾರೆ, ಎಲ್ಲರದ್ದು ಇನ್ವೆಸ್ಟಿಗೇಶನ್ ಆಗಲಿ, ಎಲ್ಲರದ್ದು ಮಾಡಲಿ, ಅವರದ್ದು ಬ್ಯಾಂಕ್ ಖಾತೆ ಸೀಜ್ ಮಾಡಲಿ, ಎಲ್ಲರದ್ದು ವಸೂಲಿ ಮಾಡಲಿ ಎಂದು ಆಗ್ರಹಿಸಿದರಲ್ಲದೆ, ಎಲೆಕ್ಟ್ರೋರಲ್ ಬಾಂಡ್ ಪಾರದರ್ಶಕತೆ ಇಲ್ಲ, ಈ ಬಾಂಡ್ ಗಳು ದುರುಪಯೋಗ ಆಗಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ವಿರುದ್ಧ ಈಶ್ವರಪ್ಪ ಬಂಡಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಈಶ್ವರಪ್ಪನವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ, ಹಿರಿಯರು ಅವರಿಗೆ ಅನ್ಯಾಯವಾಗಿದೆ, ಬರಗಾಲ ಬಂದಾಗ ಮೋದಿ ಬರಲಿಲ್ಲ ಚುನಾವಣಾ ಪ್ರಚಾರಕ್ಕೆ ಬಂದಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಅವರು ಯಾವಾಗ್ಲೂ ಬಂದಿಲ್ಲ, ಮನಮೋಹನ್ ಸಿಂಗ್ ಅವರು ಬರಗಾಲ, ಪ್ರವಾಹ ಇದ್ದಾಗ ಬಂದು ಹೋಗುವ ಸೌಜನ್ಯ, ಕಳಕಳಿ ಇತ್ತು, ಆ ಸೌಜನ್ಯ, ಕಳಕಳಿ ಮೋದಿ ಅವರತ್ರ ಕಾಣೋಕೆ ಆಗಲ್ಲ ಎಂದರು.
ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಲೇಟ್
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೇಟ್ ಪೆಂಡಿಂಗ್ ಿರುವ ವಿಚಾರವಾಗಿ ಮಾತನಾಡಿದ ಅವರು, ನಾಳೆ ಬಹುಶಃ ಮೀಟಿಂಗ್ ಆಗುತ್ತೆ, ನಾಡಿದ್ದು ಒಳಗೆ ಕ್ಲಾರಿಟಿ ಬರುತ್ತೆ, ನಾವು ಅಳೆದು ತೂಗಿ ಅಭ್ಯರ್ಥಿ ಆಯ್ಕೆ ಮಾಡಬೇಕಾಗುತ್ತೆ, ಒಂದೊಂದು ಕ್ಷೇತ್ರದಲ್ಲಿ 4-5 ಜನ ಅಭ್ಯರ್ಥಿಗಳು ಇದ್ದಾರೆ, ನಾಳೆ ಅಥವಾ ನಾಡಿದ್ದು ಫೈನಲ್ ಆಗುತ್ತೆ ಎಂದರು.
ಮೋದಿ ಅಲೆಯಲ್ಲಿ ಯಾರು ಕ್ಯಾಂಡಿಡೇಟ್ ಆಗಲು ಒಪ್ತಿಲ್ಲ ಎಂಬ ಬಿಜೆಪಿ ಟೀಕೆ ವಿಚಾರವಾಗಿ ಮಾತನಾಡಿದ ಅವರು, ಮೋದಿ ಅಲೆ ಪಂಚರ್ ಆಗೋಗಿದೆ ಎಂದು ವ್ಯಂಗ್ಯವಾಡಿದರು.