I AM HASSAN CANDIDATE TOLD H D DEVEGOWDA: ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಹೆಚ್ ಡಿ ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ರೇವಣ್ಣ

ಬೆಂಗಳೂರು : ದೇಶದಲ್ಲಿ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡುವ ಉದ್ದೇಶದಿಂದ ನಾವು ಬಿಜೆಪಿ ಜತೆ ಕೈಜೋಡಿಸಿದ್ದೇವೆ ಎಂದು ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಸ್ಪಷ್ಟಪಡಿಸಿದರು.
ಅವರು ಇಂದು ತಮ್ಮ ಪುತ್ರ ಹಾಸನ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಜತೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರದಾನಿ ಮೋದಿ ವಿಶ್ವಕ್ಕೆ ದೊಡ್ಡಣ್ಣ ಆಗುವ ಹಂತಕ್ಕಿದ್ದಾರೆ ಆದ್ದರಿಂದ ಮೈತ್ರಿ ಮಾಡಿಕೊಂಡಿದ್ದೇವೆ ಎಂದರು.

ಪ್ರಜ್ವಲ್ ಯುವ ಮುಖಂಡ ಅವರಿಗೆ ಸಂಪೂರ್ಣ ಆಶಿರ್ವಾದ ಮಾಡಿದ್ದಾರೆ, ರಾಜ್ಯದಲ್ಲಿ 28ಕ್ಕೆ 28ಸೀಟ್ ಗೆಲ್ಲುವ ಭಾವನ ಇದೆ, ಕುಮಾರಣ್ಣಗೆ ಚಿಕಿತ್ಸೆ ಮುಗಿದಿದೆ, ನಾಡಿದ್ದು ಬರಬಹುದು ಎಂದು ತಿಳಿಸಿದರು.
ಮೋದಿ ಮತ್ತು ಯಡಿಯೂರಪ್ಪನವರಿಗೆ ಧಕ್ಕೆ ಬರದಂತೆ ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು, ಚಿಕ್ಕ ಪುಟ್ಟ ಸಮಸ್ಯೆಗಳನ್ನ ಬದಿಗಿಟ್ಟು ಕೆಲಸ ಮಾಡಬೇಕಿದೆ ಎಂದರು.

ಡಿಎಂಕೆ ಮೇಕೆ ದಾಟಿಗೆ ಅವಕಾಶ ಕೊಡಲ್ಲ
ಡಿಎಂಕೆ ಮೇಕೆ ದಾಟಿಗೆ ಅವಕಾಶ ಕೊಡಲ್ಲ ಎನ್ನೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡಿಎಂಕೆಯ ಪ್ರಣಾಳಿಕೆಗೆ ಕಾಂಗ್ರೆಸ್ ಉತ್ತರ ಕೊಡಬೇಕು, ಕಾಂಗ್ರೆಸ್‌ನವರು ಪಾದಯಾತ್ರೆ ಮಾಡದ್ದರು ಈ ಹಿನ್ನೆಲೆಯಲ್ಲಿ ಅವರೇ ಉತ್ತರಿಸಬೇಕು ಎಂದರು.,

ಹಾಸನದ ಅಭ್ಯರ್ಥಿ ಅಂತ ದೇವೇಗೌಡರು ಹೇಳಿದ್ದಾರೆ
ಹಾಸನದ ಅಭ್ಯರ್ಥಿ ಅಂತ ದೇವೇಗೌಡರು ಹೇಳಿದ್ದಾರೆ, ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಅರ್ಶಿವಾದ ಪಡೆಯಲು ಬಂದಿದ್ದೆ ಎಂದು ತಿಳಿಸಿದ ಪ್ರಜ್ವಲ್ ರೇವಣ್ಣ, ಖುದ್ದು ನನ್ನ ಚುನಾವಣೆ ಆ ರೀತಿಯಲ್ಲಿ ಕೆಲಸ ಮಾಡ್ತೀವಿ ಎಂದು ಯಡಿಯೂರಪ್ಪ ಸಾಹೇಬ್ರು ಹೇಳಿದ್ದಾರೆ ಎಂದರು.
ಯಡಿಯೂರಪ್ಪ ಅವರು ನನ್ನ ಸ್ವಂತ ಮಗನ ಚುನಾವಣೆ ರೀತಿಯಲ್ಲಿ ಕೆಲಸ ಮಾಡ್ತೀನಿ ಎಂದು ಹೇಳಿದ್ದಾರೆ, ಎರಡೆರಡು ಬಾರಿ ಬಂದು ಕೆಲಸ ಮಾಡ್ತೀವಿ ಎಂದು ಹೇಳಿದ್ದಾರೆ, ಪ್ರೀತಂಗೌಡರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿಲ್ಲ, ಅವರನ್ನ ಸಹ ಸಮಾಧಾನ ಮಾಡುವ ಕೆಲಸ ಮಾಡ್ತಿದ್ದೇವೆ ಎಂದರು.

More News

You cannot copy content of this page