ಬೆಂಗಳೂರು : ಬೆಂಗಳೂರು ಗ್ರಾಮಾಂತರ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಮನೆಗೆ ರಾತ್ರೋ ರಾತ್ರಿ ಸಂಸದ ಡಿ ಕೆ ಸುರೇಶ್ ಹೋಗಿ ಅವರನ್ನು ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಮುನಿರತ್ನ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರ ಮನೆಗೆ ಹೋಗಿ ಸುಮಾರು 20 ಲಕ್ಷ ಹಣ ಕೊಟ್ಟು ಅವರಿಗೆ ಕಾಂಗ್ರೆಸ್ ಶಲ್ಯ ಹಾಕುತ್ತಿದ್ದಾರೆ ಎಂದರಲ್ಲದೆ, ಹಣ ಬೇಡ ಅಂತ ಹೇಳಿದ್ರೂ ಹಣ ಇಟ್ಟು ಬರುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹಣ ಕೊಟ್ಟ ನಂತರ ನೀವು ನಾಳೆಯಿಂದ ನಮ್ಮ ಪರವಾಗಿ ಓಡಾಟ ಮಾಡಬೇಕು ಅಂತ ಹೇಳ್ತಾರೆ ಎಂದು ಹೇಳಿದ ಅವರು, ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾರರಿಗೆ ಹಂಚಲು ಕುಕ್ಕರ್ ಶೇಖರಣೆ ಮಾಡಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರು ಗ್ರಾಮಾಂತರಕ್ಕೆ ಪ್ಯಾರಾ ಮಿಲಿಟರಿ ಬರಬೇಕು ಹಾಗಾದರೆ ಮಾತ್ರ ಇಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಯೊದು ಎಂದು ಮುನಿರತ್ನ ಹೇಳಿದರು.
ಆಸ್ಪತ್ರೆ ರಸ್ತೆ ಒಡೆದುಹಾಕಿದ್ದಾರೆ
ಯಶವಂತಪುರ ರೈಲ್ವೆ ನಿಲ್ದಾಣ ಯಾರಿಗೂ ತೊಂದರೆ ಆಗದಂತೆ ಒಂದು ರಸ್ತೆ ನಿರ್ಮಾಣ ಮಾಡಲಾಗಿತ್ತು. ಅದರ ಪಕ್ಕ ಹೆರಿಗೆ ಆಸ್ಪತ್ರೆ ಮತ್ತು ಕೋವಿಡ್ ಆಸ್ಪತ್ರೆ ನಿರ್ಮಾಣ ಮಾಡಲಾಗಿತ್ತು, ಯಾರಿಗೂ ಯಾವುದೇ ಸಮಸ್ಯೆ ಆಗಿರಲಿಲ್ಲ. ಇದೀಗ ಅಲ್ಲಿ ಬೀಫ್ ಮಾರ್ಕೆಟ್ ಬಂದಿದೆ.
ಆ ಬೀಫ್ ಮಾರ್ಕೆಟ್ ನವರು ಡಿಕೆಶಿ ಸುರೇಶ್ ರನ್ನ ಭೇಟಿ ಮಾಡಿ ರಸ್ತೆ ತೆರುವು ಮಾಡಿ ಎಂದು ಮನವಿ ಕೊಟ್ಟಿದ್ದಾರೆ, ಅದಕ್ಕೆ ಡಿಕೆ ಸುರೇಶ್ ಹೋಗಿ ಪರಿಶೀಲನೆ ಮಾಡಿದ್ದಾರೆ, ದನದ ಮಾಂಸ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಿ ಎಂದು ಡಿಕೆ ಸುರೇಶ್ ಮೌಖಿಕ ಆದೇಶ ಮಾಡಿದ್ದಾರೆ.
ಆದರೆ, ಇಂದು ನೀತಿ ಸಂಹಿತೆ ಜಾರಿಯಾದ ಬಳಿಕ, ದನದ ಮಾಂಸ ವ್ಯಾಪಾರಸ್ಥರು ಜೆಸಿಬಿ ತಗೆದುಕೊಂಡು ಯಾವ ಅಧಿಕಾರಿಗಳು ಇಲ್ಲದೆ ಆ ರಸ್ತೆಯನ್ನ ಒಡೆದು ಹಾಕಿದ್ದಾರೆ ಎಂದು ಆರೋಪಿಸಿದರಲ್ಲದೆ, ಕೆಲವು ಫೋಟೋಗಳನ್ನು ಲೀಸ್ ಮಾಡಿದರು.
ಈ ಚುನಾವಣೆ ಪಾರದರ್ಶಕವಾಗಿ ನಡೆಯಬೇಕು ಅಂದರೆ, ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದ ಅವರು, ಇಲ್ಲವಾದ್ದಲ್ಲಿ ಆರ್ ಆರ್ನಗರ ಕ್ಷೇತ್ರವನ್ನು ಡಿಜೆ ಹಳ್ಳಿ – ಕೆಜೆ ಹಳ್ಳಿ ಪ್ರಕರಣದಂತೆ ಎಷ್ಟು ಹೆಣಗಳನ್ನು ಬೀಳುತ್ತವೋ ಗೊತ್ತಿಲ್ಲ ಎಂದರು.
ಸದಾನಂದಗೌಡರನ್ನು ಯಾರಿಂದಲೂ ಖರೀದಿ ಸಾಧ್ಯವಿಲ್ಲ
ಸದಾನಂದಗೌಡ ರನ್ನು ಯಾರಿಂದಲೂ ಖರೀದಿ ಮಾಡೋಕೆ ಸಾಧ್ಯವಿಲ್ಲ ಎಂದು ಹೇಳಿದ ಮುನಿರತ್ನ, ಕಾರ್ಯಕರ್ತರನ್ನು ಖರೀದಿ ಮಾಡಿದಂತೆ, ಡಿವಿಎಸ್ ರನ್ನು ಖರೀದಿ ಮಾಡ್ತೀನಿ ಅಂದರೆ ಅವರ ಕನಸ್ಸು ಅಷ್ಟೇ ಎಂದರು.