ತಮಿಳಿನ ‘ಅರ್ಧ ಕುದಿಸಿ’ ವೆಬ್ ಸರಣಿಯ ಮೂಲಕ 2017ರಲ್ಲಿ ಬಣ್ಣದ ಲೋಕಕ್ಕೆ ಸ್ವಾತಿಷ್ಟ ಪಾದಾರ್ಪಣೆ ಮಾಡಿದರು. ನಂತರ ಅವರು 2018ರಲ್ಲಿ ‘ಸವರಕತಿ’ ಎಂಬ ತಮಿಳು ಚಿತ್ರದಲ್ಲಿ ನಟಿಸುವುದರ ಮೂಲಕ ಬಿಗ್ ಸ್ಕ್ರೀನ್ ಗೆ ಎಂಟ್ರಿಕೊಟ್ಟರು.


ನಂತರ ತಮಿಳಿನ ಅನೇಕ ಚಿತ್ರಗಳಲ್ಲಿ ನಡೆಸಿದ ಅವರು, ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದು ಒಂದು ಸರಳ ಪ್ರೇಮ ಕಥೆ ಮೂಲಕ. ಇದರಲ್ಲಿ ವಿನಯ್ ರಾಜ್ ಕುಮಾರ್ ಅವರ ಜತೆ ನಟಿಸಿ, ಕನ್ನಡದಲ್ಲೂ ಸೈ ಎನಿಸಿಕೊಂಡಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ಅವರು, ಅಪ್ ಲೋಡ್ ಮಾಡಿರುವ ಫೋಟೋಗಳ ಒಂದು ಝಲಕ್ ಇಲ್ಲಿದೆ.
