Uttarakaanda Audition: ಹೊಸ‌ ಪ್ರತಿಭೆಗಳಿಗೆ ನೀಡುವ ಉದ್ದೇಶದಿಂದ “ಉತ್ತರಕಾಂಡ” ಚಿತ್ರ ತಂಡ ಆಡಿಷನ್

ಬೆಂಗಳೂರು: “ಉತ್ತರಕಾಂಡ” ಚಿತ್ರ ತಂಡ ಹೊಸ‌ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಆಡಿಷನ್ ಕಾರ್ಯಕ್ರಮವನ್ನು ಉತ್ತರಕರ್ನಾಟಕದ ಭಾಗಗಳಲ್ಲಿ ಹಮ್ಮಿಕೊಂಡಿದೆ. ಇದೇ ಮಾರ್ಚ್ 27ರಂದು ವಿಜಯಪುರದ ವಚನ ಪಿತಾಮಹ ಡಾ. ಫ.ಗು ಹಳಕಟ್ಟಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಾಗೂ ಮಾರ್ಚ್ 28ರಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ರಂಗಮಂದಿರದಲ್ಲಿ ಆಡಿಷನ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎರಡೂ ಸ್ಥಳಗಳಲ್ಲೂ ನೊಂದಣಿ‌ ಪ್ರಕ್ರಿಯೆ ಬೆಳಗ್ಗೆ 9 ಗಂಟೆಗೆ ಆರಂಭಗೊಳ್ಳಲಿದೆ. ಆಡಿಷನ್‌ ಕುರಿತಾಗಿ‌ ಹೆಚ್ಚಿನ‌ ಮಾಹಿತಿ‌ ನೀಡಲು ಒಂದು ಪ್ರೋಮೋ ವೀಡಿಯೋ ಬಿಡುಗಡೆ ಆಗಿದೆ. ಕಲೆಗೆ ಯಾವುದೇ ರೀತಿಯ ಅಡೆತಡೆ ಇರುವುದಿಲ್ಲ ‌, ಆಸಕ್ತಿ ಒಂದಿದ್ದರೆ ಎತ್ತರಕ್ಕೆ ಬೆಳೆಯಬಹುದು ಎಂಬ ಸಂದೇಶವನ್ನು ಈ‌ ಪ್ರೋಮೋ‌ ನೀಡಲಿದೆ. “ಉತ್ತರ ಕಾಂಡ” ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು ಇದನ್ನು ರೋಹಿತ್ ಪದಕಿ ನಿರ್ದೇಶಿಸಲಿದ್ದಾರೆ. ಕೆ.ಆರ್.ಜಿ. ಸ್ಟೂಡಿಯೋಸ್‌ ಬ್ಯಾನರ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ‌ ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More News

You cannot copy content of this page