MURUGHA MATA SWAMIJI U-TURN: ಮುರಘಾಮಠ ಶ್ರೀಗಳ ಯೂಟರ್ನ್: ಸಭೆಯ ನಿರ್ಧಾರಕ್ಕೆ ನಾನು ಬದ್ದ : ಒತ್ತಡ ಹಾಕಿಸಿ ಪತ್ರ ಓದಿಸಿದ್ದರು ಎಂಬ ಅಚ್ಚರಿಯ ಹೇಳಿಕೆ!

ಹುಬ್ಬಳ್ಳಿ: ಮುರಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿಗಳು ರಾಜಕೀಯವಾಗಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದು, ಯಾವುದನ್ನು ನಂಬುವುದು ಯಾವುದನ್ನು ಬಿಡುವುದು ಎಂಬ ಗೊಂದಲ ಜನರಲ್ಲಿ ಮೂಡಿದೆ.

ಕಳೆದ ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ನಡೆದ ಚಿಂತನ ಮಂಥನ ಸಭೆಯಲ್ಲಿ ದಿಂಗಾಲೇಶ್ವರ ಶ್ರೀಗಳ ಪರವಾಗಿ ಬ್ಯಾಟಿಂಗ್ ಮಾಡಿದ್ದ ಮುರುಘಾ ಶ್ರೀಗಳು, ನಿನ್ನೆ ತಮ್ಮ ವರಸೆ ಬದಲಿಸಿದ್ದರು. ಸ್ವಾಮಿಗಳ ಸಭೆ ಎಂದು ಕರೆದಿದ್ದರು. ನಾನು ಬಂದಿದ್ದೆ. ಅಲ್ಲಿ ರಾಜಕೀಯ ಚರ್ಚೆ ಆಗುತ್ತೆ ಎಂದು ತಿಳಿದಿರಲಿಲ್ಲ. ಹೀಗಾಗಿ ದಿಂಗಾಲೇಶ್ವರ ಶ್ರೀಗಳ ರಾಜಕೀಯ ನಿರ್ಧಾರ ಅವರ ವೈಯಕ್ತಿಕ ಎಂದಿದ್ದ ಶ್ರೀಗಳು ಇಂದು ಮತ್ತೆ ಯೂಟರ್ನ್ ಹೊಡೆದಿದ್ದಾರೆ

ಇಂದು ಮತ್ತೊಂದು ವೀಡಿಯೊ ಬಿಡುಗಡೆ ಮಾಡಿರುವ ಶ್ರೀಗಳು, ನಿನ್ನೆ ಯಾರೊ ಬಂದು ಬಲವಂತವಾಗಿ ನನ್ನಿಂದ ಹೇಳಿಕೆ ಕೊಡಿಸಿದ್ದಾರೆ. ಆದರೆ, ನಾನು ಅಂದು ಸಭೆಯಲ್ಲಿ ಮಾಡಿದ ನಿರ್ಧಾರಕ್ಕೆ ಬದ್ಧ ಎಂಬ ವೀಡಿಯೋ ಹರಿ ಬಿಟ್ಟಿದ್ದಾರೆ.

ಸ್ವಾಮೀಜಿಗಳು ನಾಡಿನ ಜನರ ಸಂದೇಹ, ಅನುಮಾನ, ಸಮಸ್ಯೆಗಳನ್ನು ಬಗೆ ಹರಿಸಬೇಕೇ ಹೊರತು ಜನರಲ್ಲಿ ವಿನಾಃ ಕಾರಣ ಗೊಂದಲ ಸೃಷ್ಟಿಸಬಾರದು ಎಂದು ಜನ ಮಾತನಾಡುತ್ತಿದ್ದಾರೆ. ದಿನಕ್ಕೊಂದು ಹೇಳಿಕೆ ನೀಡುವ ಮುರುಘಾ ಶ್ರೀಗಳು ನಾಳೆ ಮತ್ತೇನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

More News

You cannot copy content of this page