ಹುಬ್ಬಳ್ಳಿ: ಮುರುಘಾಮಠದ ಶ್ರೀಗಳ ಹೇಳಿಕೆಯನ್ನು ನೋಡಿದ್ದೇನೆ. ಈ ಬಗ್ಗೆ ನಾನು ಏನನ್ನು ಮಾತನಾಡುವುದಿಲ್ಲ. ಯಾವ ಸ್ವಾಮೀಜಿಯನ್ನು ಕೂಡ ಮೊರೆ ಹೋಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಮುರಾಘಮಠ ಸ್ವಾಮೀಜಿ ತಮ್ಮ ಹೇಳಿಕೆ ಬದಲಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಎಂದ ಅವರು, ನಾನು ಯಾವುದೇ ಸ್ವಾಮೀಜಿಗಳನ್ನು ಕೂಡ ಮೊರೆ ಹೋಗಿಲ್ಲ ಎಂದರು.
ಮುರುಘಾಮಠದ ಸ್ವಾಮೀಜಿಯವರ ಮೊದಲ ಹೇಳಿಕೆಯನ್ನು ಓದಿದ್ದೇನೆ. ಅಲ್ಲದೇ ಮತ್ತೊಂದು ಹೇಳಿಕೆ ನೀಡಿರುವುದನ್ನು ನೋಡಿದ್ದೇನೆ. ಇದರಲ್ಲಿ ಮಾಜಿ ಮೇಯರ್ ಈರೇಶ ಅಂಚಟಗೇರಿ ಕೈವಾಡದ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ನಾನು ಏನು ಮಾತನಾಡುವುದಿಲ್ಲ ಎಂದು ಅವರು ಹೇಳಿದರು.