POWER TARIFF REDUCED: ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆ: ಪ್ರತಿ ಯುನಿಟ್ ಗೆ 1.10 ರೂ ಇಳಿಕೆ: ಇಂದಿನಿಂದಲೇ ಆದೇಶ ಜಾರಿ

ಬೆಂಗಳೂರು : ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿದ್ಯುತ್ ಬಳಕೆದಾರರಿಗೆ ಕೆಇಆರ್ ಸಿ ಗುಡ್ ನ್ಯೂಸ್ ನೀಡಿದ್ದು. ರಾಜ್ಯದ ಎಲ್ಲಾ ವರ್ಗದ ವಿದ್ಯುತ್ ಬಳಕೆದಾರರಿಗೆ ಇದು ಅನ್ವಯವಾಗಲಿದೆ.
ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗ (ಕೆಐಆರ್ ಸಿ) ಈ ಆದೇಶ ಹೊರಡಿಸಿದ್ದು, ಪ್ರತಿ 100 ಯೂನಿಟ್ ಗಿಂತ ಹೆಚ್ಚು ಬಳಸುವವರಿಗೆ ಪ್ರತಿ ಯೂನಿಟ್ ಗೆ 1.10 ರೂಪಾಯಿ ಕಡಿಮೆ ಮಾಡಲಾಗಿದೆ.
ಕೆಇಆರ್ ಸಿಯ ಈ ನಿರ್ಧಾರದಿಂದ ಕಳೆದ 15 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ವಿದ್ಯುತ್ ದರದಲ್ಲಿ ಇಳಿಕೆಯಾಗಿದೆ. ಈ ಆದೇಶ ಇಂದಿನಿಂದಲೇ ಅಂದರೆ ಏಪ್ರಿಲ್ 1 ರಿಂದಲೇ ಜಾರಿಯಾಗಲಿದೆ.
ಕೆಇಆರ್ ಸಿಯ ಈ ನಿರ್ಧಾರದಿಂದ ಎಲ್ಲಾ ಏಸ್ಕಾಂಗಳಿಗೂ ಏಕರೂಪದ ಗೃಹ ಬಳಕೆ ವಿದ್ಯುತ್ ದರ ನಿಗಧಿಯಾದಂತಾಗಿದೆ.
ರಾಜ್ಯ ಸರ್ಕಾರ 200 ಯೂನಿಟ್ ಒಳಗೆ ಬಳಸುವವರಿಗೆ ಗೃಹಜ್ಯೋತಿಯ ಉಚಿತ ಗ್ಯಾರಂಟಿ ಯೋಜನೆಯಿಂದ ಉಚಿತ ವಿದ್ಯುತ್ ನೀಡುವುದರಿಂದ ಈ ಸೌಲಭ್ಯವನ್ನು ಪಡೆಯುವವರಿಗೆ ಈ ದರ ಇಳಿಕೆ ಪ್ರಯೋಜನ ಸಿಗುವುದಿಲ್ಲ.

More News

You cannot copy content of this page