DINGALESHWARA SWAMIJI: ನನ್ನನ್ನು ಚುನಾವಣೆಯಿಂದ ಹಿಂದೆ ಸರಿಸೋ ವ್ಯಕ್ತಿ ಭೂಮಿ ಮೇಲೆ ಹುಟ್ಟಿಲ್ಲ- ದಿಂಗಾಲೇಶ್ವರ ಸ್ವಾಮೀಜಿ…

ಹುಬ್ಬಳ್ಳಿ: ನನ್ನನ್ನು ಚುನಾವಣೆಯಿಂದ ಹಿಂದೆ ಸರಿಸೋ ವ್ಯಕ್ತಿ ಭೂಮಿ ಮೇಲೆ ಹುಟ್ಟಿಲ್ಲ. ಹಿಂದೆ ಸರಿಸೋ ಉಹಾಪೋಹ ಎಲ್ಲ ಸುಳ್ಳು
ಎಲ್ಲ ಪಕ್ಷಗಳೂ ನಮಗೆ ಸಮಾನ ಎಂದು ಶಿರಹಟ್ಟಿಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನಗರದ ನೆಹರೂ ಮೈದಾನದಲ್ಲಿ ಮಾತನಾಡಿದ ಅವರು, ಯಾವದೇ ಪಕ್ಷಗಳ ವಿಚಾರ ಮಾಧ್ಯಮಗಳ ಮೂಲಕ ತಿಳಿದಿದೆ..
ನಾವ ಯಾವುದೇ ಪಕ್ಷಗಳ ತೀರ್ಮಾನ ನಾನು ಸ್ವತಂತ್ರವಾಗಿ ಹೇಳಲ್ಲ. ಅಕಸ್ಮಾತ್ ಅಂತಹ ತೀರ್ಮಾನ ಬಂದ್ರೆ ನಾನು ಮತ್ತೆ ಚರ್ಚೆ ಮಾಡ್ತೀನಿ. ನನ್ನನ್ನು ಬಹುಸಂಖ್ಯಾತರು ಸಂಪರ್ಕ ‌ಮಾಡಿದ್ದಾರೆ. ಪರೋಕ್ಷವಾಗಿ ಕಾಂಗ್ರೆಸ್ ನವರು ಸಂಪರ್ಕ ಮಾಡಿದ್ದಾರೆ ಅನ್ನೋದನ್ನ ಸ್ವಾಮೀಜಿ ಒಪ್ಪಿಕೊಂಡಿದ್ದಾರೆ.‌ ಎಲ್ಲ ವಿಚಾರಗಳು ತಲೇಲಿ ಇವೆ. ನಾನು ಸಾರ್ವಜನಿಕರ ಮುಂದಿಟ್ಟು ನಿರ್ಧಾರ ತಗೆದುಕೊಳ್ಳುತ್ತೇನೆ.
ಜನ ಬಯಸಿರಿವದರಿಂದ ರಾಜಕೀಯಕ್ಕೆ ಬಂದಿದ್ದೇನೆ.
ನಾನು ಪಕ್ಷೇತರ ಅಂತಾ ಘೋಷಣೆ ‌ಮಾಡಿದ್ದೇನೆ. ಯಡಿಯೂರಪ್ಪನವರು ನನಗೆ ಭೇಟಿಯಾಗಿಲ್ಲ.
18 ರಂದು ನಾಮ ಪತ್ರ ಸಲ್ಲಿಸುವ ತೀರ್ಮಾನ ಮ ಮಾಡಿದ್ದೇನೆ ಎಂದರು.

ಸ್ವಾಮೀಜಿ ಮೆರವಣಿಗೆ…
ಬೆಂಗಳೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಬಳಿಕ ಇದೇ ಮೊದಲ ವಾರೊಗೆ ನಗರಕ್ಕೆ ಆಗಮಿಸಿದ ಅವರನ್ನು ಭಕ್ತರು ಅದ್ದೂರಿಯಾಗಿ ಸ್ವಾಗತಿಸಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ನಗರದ ನೆಹರೂ ಮೈದಾನದಿಂದ ಮೂರುಸಾವಿರ ಮಠದವರೆಗೆ ಮೆರವಣಿಗೆ ನಡೆಸಿದರು.

More News

You cannot copy content of this page