ಹಾಸನ : ನಾನು ಮಂತ್ರಿ ಆಗೋದನ್ನ ತಪ್ಪಿಸಲು ನಿಮ್ಮ ಅಪ್ಪ, ಮಕ್ಕಳಿಂದ ಸಾಧ್ಯವಿಲ್ಲ, ಸಿಎಂ ಸಿದ್ದರಾಮಯ್ಯ ಅವರು ನನಗೆ ಮಾತು ಕೊಟ್ಟಿದಾರೆ, ನಾನು ಮಂತ್ರಿ ಆಗ್ತೇನೆ ನೀವು ಚಿಂತೆ ಮಾಡಬೇಡಿ ಕ್ಷೇತ್ರದ ಇನ್ನಷ್ಟು ಅಭಿವೃದ್ದಿ ಮಾಡುತ್ತೇನೆ ಎಂದು ಶಾಸಕ ಶಿವಲಿಂಗೇಗೌಡ ತಿಳಿಸಿದ್ದಾರೆ.
ಹಾಸನದ ಅರಸೀಕೆರೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿದ್ದರಾಮಯ್ಯ ಆಡಿದ ಮಾತಿಗೆ ತಪ್ಪಿ ನಡೆಯೋರಲ್ಲ, ಸಿದ್ದರಾಮಯ್ಯ ಅಧಿಕಾರದಲ್ಲಿ ಇರೋವರೆಗೆ, ಕಾಂಗ್ರೆಸ್ ಸರ್ಕಾರ ಇರೋವರೆಗೆ ಈ ಗ್ಯಾರಂಟಿ ನಿಲ್ಲೋದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಜ್ವಲ್ ರೇವಣ್ಣ ಅರಸೀಕೆರೆಗೆ ಒಂದು ರುಪಾಯಿ ಅನುದಾನ ಕೊಟ್ಟಿಲ್ಲ, ಅವರ ಮಾತು ನಂಬಬೇಡಿ, ಶ್ರೇಯಸ್ ಪಟೇಲ್ ಗೆಲ್ಲಿಸಿ ಎಂದು ಶಿವಲಿಂಗೇಗೌಡ ಮತದಾರರಿಗೆ ಮನವಿ ಮಾಡಿದರು.
ಶ್ರೇಯಸ್ ಪಟೇಲ್ ತಬ್ಬಲಿ ಮಗ, ಅವನನ್ನು ಕೈ ಬಿಡಬೇಡಿ, ಅವರ ತಾಯಿ ಸೆರಗೊಡ್ಡಿ ಬೇಡುತ್ತಿದ್ದಾರೆ.
ಶ್ರೇಯಸ್ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದ ಶಿವಲಿಂಗೇಗೌಡರು, ಹಾಸನದ ಅರಸೀಕೆರೆಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್ ರೋಡ್ ಶೋ ನಡೆಸಿದರು. 2018 ರಲ್ಲಿ ಸಿದ್ದರಾಮಯ್ಯ ಸಿಎಂ ಆದ ನಂತರ 575 ಕೋಟಿ ಹಣ ಕೊಟ್ಟಿದ್ದಾರೆ. ನಮ್ಮಲ್ಲಿ ಫ್ಲೋರೈಡ್ ನೀರಿತ್ತು ಹಾಗಾಗಿ ಪರಿಹಾರವಾಗಿ ಯೋಜನೆ ನೀಡಿದ್ರು ಎಂದು ತಿಳಿಸಿದರು.
ಅಪ್ಪ ಮಕ್ಕಳು ಹೇಳ್ತಾರೆ ಶಿವಲಿಂಗೇಗೌಡ ಕೊಡುಗೆ ಏನಿಲ್ಲ ಅಂತಾರೆ, ಯಾರಿಗೆ ಅನುದಾನ ಕೊಡ್ತಿದ್ದರೊ ಬಿಡ್ತಿದ್ದರೊ ನನಗೆ ಕೊಡೋರು, ಸಿದ್ದರಾಮಯ್ಯ ಹಾಗು ತಮ್ಮ ಸಂಬಂಧದ ಬಗ್ಗೆ ವಿವರಿಸಿದ ಶಿವಲಿಂಗೇಗೌಡ, ಇದೇ ಅರಸೀಕೆರೆಯಲ್ಲಿ ಬಂದು ಎದೆ ಬಡಿಸಿಕೊಂಡು ಹೇಳಿದ್ರು ಶಿವಲಿಂಗೇಗೌಡ ನನ್ನ ಸೋಲಿಸಿ ಅಂತಾ, ಆದರೆ ಮತದಾರರು ಕೇಳಲಿಲ್ಲ ಎಂದು ಪರೋಕ್ಷವಾಗಿ ಮಾಜಿ ಪ್ರದಾನಿ ದೇವೇಗೌಡ ರ ವಿರುದ್ದ ಹರಿಹಾಯ್ದರು.