ಹುಬ್ಬಳ್ಳಿ: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರದಲ್ಲಿ
ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ. ಮೋದಿಯವರ ಹೆಸರನ್ನು ಇದರಲ್ಲಿ ಏಕೆ ಎಳೆಯುತ್ತಿದ್ದೀರಿ. ಮಹಾನ್ ನಾಯಕ, ಡಿಸಿಎಮ್ ಮನೆ ಎದುರು ಪ್ರತಿಭಟನೆ ಮಾಡಿ ಎಂದು
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಜೆಡಿಎಸ್ ಕೊರಕಮಿಟಿ ಸಭೆಗೂ ಮುನ್ನ ಮಾತನಾಡಿದ ಅವರು,
ಉಪ್ಪು ತಿಂದವನು ನೀರು ಕುಡಿಯಲೇಬೇಕು. ತಪ್ಪು ಮಾಡಿವರಿಗೆ ಶಿಕ್ಷೆ ಆಗುತ್ತೆ.
ಮುಂದಿನ ರಾಜಕೀಯದ ಬಗ್ಗೆ ಚರ್ಚೆ ಮಾಡುತ್ತೇವೆ. ಹದಿನಾಲ್ಕು ಕ್ಷೇತ್ರಗಳಲ್ಲಿ ಗೆಲ್ಲುತ್ತೆವೆ.
ನಮ್ಮ ಪಕ್ಷದ ಇಮೇಜ್ ಹಾಳಾಗಬಾರದು ಅನ್ನೋ ಕನ್ಸರ್ನ್ ಇದೆ. ಕಾಂಗ್ರೆಸ್‌ನ ಮಹಾನಾಯಕರು ಪ್ರತಿಭಟನೆ ಮಾಡಿಸಿದ್ರು.
ಮಹಿಳೆಯರ ಬದುಕನ್ನು ಬೀದಿಗೆ ತಂದಿದ್ದಾರೆ. ಪ್ರಮುಖ ಆರೋಪಿಯ ತನಿಖೆ ಆಗುತ್ತೆ. ಅದರ ಜೊತೆಗೆ ಪೆನ್‌ಡ್ರೈವ್ ಬಹಿರಂಗ ಪಡಿಸಿದ್ದು ಚರ್ಚೆ ಆಗುತ್ತೆ. ಮಹನಾ್ ನಾಯಕ ಡಿಸಿಎಮ್ ಪ್ರತಿಭಟನೆ ಮಾಡಿಸಿದ್ದಾರೆ. ನಮ್ಮ ಮನೆಯ ಎದುರು ಏಕೆ ಪ್ರತಿಭಟನೆ ಮಾಡುತ್ತೀರಿ. ಇದನ್ನು ಇಷ್ಟಕ್ಕೆ ಬಿಡಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಪ್ರಕರಣದಲ್ಲಿ ಪ್ರಜ್ವಲ ರೇವಣ್ಣ ಆರೋಪಿ ಸ್ಥಾನದಲ್ಲಿ ಇದ್ದಾರೆ. ಇದರಲ್ಲಿ ಸತ್ಯಾಸತ್ಯತೆ ಹೊರಬರುವುದು ಒಂದು ಭಾಗವಾದರೆ, ಯಾವ ಕಾರಣಕ್ಕಾಗಿ ಪೆನ್ ಡ್ರೈವ್ ಸರಕ್ಯೂಲೇಟ್ ಮಾಡಿದರೂ ಎಂಬುದು ರಾಜ್ಯದ ಜನತೆಗೆ ತಿಳಿಯಬೇಕಿದೆ ಎಂದರು.
ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾರ್ಯಕರ್ತರ ಪೆನ್ ಡ್ರೈವ್ ಹಂಚಿ ನೂರಾರು ಮಹಿಳೆಯರ ಮಾನವನ್ನು ಬೀದಿಗೆ ತಂದಿದ್ದಾರೆ. ಮಹಿಳೆಯರ ಮಾನ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿ ಅಲ್ಲವೇ ಎಂದು ಪ್ರಶ್ನಿಸಿದರು.
ನಮ್ಮ ಶಕ್ತಿ ಸಣ್ಣದಿರಬಹುದು ಅಥವಾ ದೊಡ್ಡದಿರಬಹುದು. ಎಲ್ಲ 14 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲುವ ಬಗ್ಗೆ ಕೋರ್ ಕಮಿಟಿ ಸಭೆ ನಡೆಸುತ್ತಿದ್ದೇವೆ ಎಂದರು.