ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದ್ದು, ಅವರ ಮಾಜಿ ಚಾಲಕ ಕಾರ್ತೀಕ್ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಸುದೀರ್ಘ ಆರು ನಿಮಿಷಗಳ ವಿಡಿಯೋ ಮಾಡಿ ಸ್ಪಷ್ಟನೆ ನೀಡಿರುವ ಕಾರ್ತಿಕ್, ಇದರಲ್ಲಿ ತಮ್ಮ ಕೈವಾಡವಿಲ್ಲ, ಈ ವಿಡಿಯೋಗಳನ್ನು ನನ್ನ ಹೊರತಾಗಿ ಅದನ್ನು ಬಿಜೆಪಿ ಮುಖಂಡ ದೇವರಾಜೇಗೌಡ ಅವರಿಗೆ ನೀಡಿದ್ದೇ ಎಂದು ಹೇಳಿಕೆ ನೀಡಿದ್ದಾರೆ.
ಪ್ರಜ್ವಲ್‌ರೇವಣ್ಣ ಅವರ ಮಾಜಿ ಕಾರ್ ಡ್ರೈವರ್ ಕಾರ್ತಿಕಗೌಡ, ನಾನು ಹದಿನೈದು ವರ್ಷದಿಂದ ಪ್ರಜ್ವಲ್‌ರೇವಣ್ಣ ಹಾಗೂ ಅವರ ಫ್ಯಾಮಿಲಿಗೆ ಕಾರು ಡ್ರೈವರ್ ಆಗಿ ಕೆಲಸ ಮಾಡಿದ್ದೀನಿ, ಕಳೆದ ಒಂದು ವರ್ಷದಿಂದ ಕೆಲಸ ಬಿಟ್ಟಿದ್ದೀನಿ, ನನ್ನ ಜಮೀನು ಬರೆಸಿಕೊಂಡು ನನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದರು. ಹಿಂಸೆ ಕೊಟ್ಟರು. ಇದರ ಪ್ರಕರಣದ ನ್ಯಾಯಕ್ಕಾಗಿ ನಾನು ಅಲವರ ಮನೆಪಬಿಟ್ಟು ಹೊರಗೆ ಬಂದಿದ್ದೆ ಎಂದು ತಿಳಿಸಿದ್ದಾರೆ.
ದೇವರಾಜೇಗೌಡ ಇವರ ಫ್ಯಾಮಿಲಿ ವಿರುದ್ಧ ಸಾಕಷ್ಟು ವಿಚಾರಗಳ ಸಂಬಂಧ ಹೋರಾಟ ನಡೆಯುತ್ತಿತ್ತು. ಯಾರಿಂದಲೂ ನ್ಯಾಯ ಸಿಗಲ್ಲ ಅಂತ ನಾನು ದೇವರಾಜೇಗೌಡ ಬಳಿ ಹೋಗಿದ್ದೆ, ಯಾವುದೇ ಅಶ್ಲೀಲ ವಿಡಿಯೋ ರಿಲೀಸ್ ಮಾಡಬಾರದು ಎಂದು ನನ್ನ ವಿರುದ್ದ ಪ್ರಜ್ವಲ್‌ರೇವಣ್ಣ ಮೊದಲೇ ಸ್ಟೇ ತಂದಿದ್ದರು. ಈ ವಿಚಾರ ತಿಳಿದ ದೇವೇರಾಜೇಗೌಡರು ನನ್ನ ಬಳಿ ಇರುವ ವಿಡಿಯೋ, ಫೋಟೋಸ್ ಪಡೆದುಕೊಂಡಿದ್ದರು. ಇದನ್ನು ನಾನು ಯಾರಿಗೂ ತೋರಿಸಲ್ಲ ಕೊಡು ಎಂದು ದೇವರಾಜೇಗೌಡ ಪಡೆದುಕೊಂಡಿದ್ದರು.
ಅವರನ್ನು ನಾನು ಸಂಪೂರ್ಣವಾಗಿ ನಂಬಿದ್ದರಿಂದ ನನ್ನ ಬಳಿಯಿದ್ದ ವಿಡಿಯೋವನ್ನು ಅವರಿಗೆ ಕೊಟ್ಟಿದ್ದೆ ಎಂದು ಹೇಳಿಕೆ ನೀಡಿರುವ ಕಾರ್ತೀಕ್ ಅವರು ಅದನ್ನು ಸ್ವಾರ್ಥಕ್ಕೆ ಉಪಯೋಗಿಸಿಕೊಂಡರೋದು ನನಗೆ ಗೊತ್ತಿಲ್ಲ ಎಂದಿದ್ದಾರೆ.
ದೇವರಾಜೇಗೌಡರನ್ನು ಬಿಟ್ಟರೆ ಬೇರೆ ಯಾರಿಗೂ ಕೊಟ್ಟಿಲ್ಲ, ಪೆನ್‌ಡ್ರೈವ್ ಯಾರು ಹಂಚಿದರೂ ಗೊತ್ತಿಲ್ಲ, ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ, ನಾನು ಕಾಂಗ್ರೆಸ್ ಅವರಿಗೆ ಕೊಡುವುದಿದ್ದರೆ ದೇವರಾಜೇಗೌಡ ಹೋಗುತ್ತಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದೀಗ ಎಸ್ಐಟಿಗೆ ತೆರಳಿ ಸಂಪೂರ್ಣ ಮಾಹಿತಿ ನೀಡುವುದಾಗಿ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.