PRAJWAL REVANNA PENDRIVE CASE: ಪೆನ್‌ಡ್ರೈವ್ ಕೇಸ್ : ಕುಟುಂಬ ಬೇರೆ ಎಂದು ನಿಮ್ಮ ಭಿನ್ನ ನಿಲುವೇಕೆ…?: ಹೆಚ್‌ಡಿಕೆಗೆ ಡಿಕೆಶಿ ಪ್ರಶ್ನೆ ..?

ಬೆಂಗಳೂರು : ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಉಪ್ಪು ತಿಂದವರು ನೀರು‌ ಕುಡಿಯಲು ಎಂದು ಎಚ್‌ಡಿ ಕುಮಾರಸ್ವಾಮಿ ಹೇಳಿದ್ದರು, ತಪ್ಪು ಮಾಡಿದ್ದೇವೆ ಕ್ಷಮಿಸಿ ಅಂತಾನೂ ಹೇಳಿದ್ದರು. ಅಲ್ಲದೆ ಎಚ್‌ಡಿ ರೇವಣ್ಣ ಕುಟುಂಬ ಮತ್ತು ನಮ್ಮ ಕುಟುಂಬ ಬೇರೆ ಬೇರೆ ಎಂದೂ ಹೇಳಿದ್ದರು. ಆದರೆ ಇವಾಗ ಏಕೆ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿದ್ದೀರಿ? ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರಲ್ಲಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಅವರು,ಏಳನೇ ತಾರೀಖು ಬಳಿಕ ದಾಖಲೆ ಬಿಡುಗಡೆ ಮಾಡುತ್ತೇವೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ, ಸಮಯ ಬಂದಾಗ ಎಲ್ಲವನ್ನೂ ತೆರೆದಿಡುತ್ತೇನೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಸಮಯವನ್ನು ಯಾಕಾಗಿ ವೇಸ್ಟ್ ಮಾಡುತ್ತೀರಿ, ಏಳನೇ ತಾರೀಕಿನವರೆಗೆ ಕಾಯುವುದು ಬೇಡ. ಅದೇನು ಇದೆ ಅಂತ ಈಗಲೇ ಹೇಳಿ ಎಂದು ಸವಾಲು ಹಾಕಿದರು.

ನಾವು ಬಿಚ್ಚಬೇಕಾ..? ಇದಕ್ಕೆ ಕಾರಣ ಯಾರು? ಹಿಂದೆ ಯಾರಿದ್ದಾರೆ,ಮುಂದೆ ಯಾರಿದ್ದಾರೆ. ಎಲ್ಲವೂ ಕೂಡ ಗೊತ್ತಾಗುತ್ತೆ. ಇದೊಂದು ಕುಟುಂಬ ಕಲಹ ಅಂತ ಗೊತ್ತಾಗಿದೆ ಎಂದು ಹೇಳಿದರು. ಇನ್ನು ಇದೇ ಸಂದರ್ಭದಲ್ಲಿ ಜೆಡಿಎಸ್ ಶಾಸಕರು ನನ್ನ ಸಂಪರ್ಕದಲ್ಲಿ ಇಲ್ಲ. ಇದೆಲ್ಲಾ ಊಹಾಪೋಹಗಳ ಸುದ್ದಿ. ಪ್ರಜ್ವಲ್ ಕೇಸ್ ವಿಚಾರವಾಗಿ ಅವರು ಬೇಜಾರಾಗಿದ್ದಾರೆ ಎಂದು ಹೇಳಿದರು.

ಒಕ್ಕಲಿಗ ನಾಯಕತ್ವ ಬೇಡ

ನನಗೆ ಯಾವ ನಾಯಕತ್ವ ಬೇಡ.ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ. ನನಗೆ ಯಾವುದೇ ನಾಯಕತ್ವ ಬೇಡ. ನಾನು ಒಕ್ಕಲಿಗ ನಾಯಕ ಅಂತ ಅನಿಸಿಕೊಳ್ಳಲು ಇಷ್ಟ ಇಲ್ಲ. ನಾನು ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿದ್ದೇನೆ. ಆದರೆ ಒಕ್ಕಲಿಗ ಸಮುದಾಯದ ನಾಯಕತ್ವ ನನಗೆ ಬೇಡ ಎಂದರು.

ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ರಾಜಕೀಯ ಆರೋಪ ಪ್ರತ್ಯಾರೋಪಗಳು ತೀವ್ರಗೊಳ್ಳುತ್ತಿವೆ. ಸದ್ಯ ಎಸ್‌ಐಟಿ ತನ್ನ ತನಿಖೆಯನ್ನು ಚುರುಕುಗೊಳಿಸಿದೆ. ಎಚ್‌ಡಿ ರೇವಣ್ಣ ಅವರಿಗೆ ಸಂಬಂಧಿಸಿದ ನಿವಾಸಗಳಿಗೆ ತೆರಳಿ ಪರಿಶೀಲನೆ ನಡೆಸಲಾಗುತ್ತಿದೆ.

ಇನ್ನು ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ಮತ್ತೊಂದು ದಾಖಲಾಗಿದೆ. ಗನ್ ಹಿಡಿದುಕೊಂಡು ಬೆದರಿಸಿ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಕೆಆರ್‌ ನಗರದಲ್ಲಿ ಕಿಡ್ನಾಪ್ ಪ್ರಕರಣವೊಂದು ದಾಖಲಾಗಿದ್ದು, ವಿಡಿಯೋದಲ್ಲಿ ಕಂಡ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇನ್ನು ಎಚ್‌ಡಿ ರೇವಣ್ಣ ನಾಪತ್ತೆ ವಿಚಾರವಾಗಿ ಮಾತನಾಡಿ, ಹೋಮ್‌ ಮಿನಿಸ್ಟರ್ ಇದ್ದಾರೆ, ಎಸ್.ಐಟಿ ಇದ್ದಾರೆ.ಅದಕ್ಕೆ ಅವರು ಉತ್ತರ ಕೊಡುತ್ತಾರೆ. ನಾನು ಎಲೆಕ್ಷನ್ ಮೂಡ್ ನಲ್ಲಿ ಇದ್ದೇನೆ, ಯಾರ ಹತ್ರನೂ ಮಾತಾಡಲು ಟೈಮ್ ಸಿಕ್ಕಿಲ್ಲ. ಮಾಹಿತಿ ಸಿಕ್ಕ ಮೇಲೆ ಮಾತಾಡುತ್ತೇನೆ ಎಂದರು.

More News

You cannot copy content of this page