ಬೆಳಗಾವಿ: ರಾಜ್ಯದಲ್ಲಿ ಎರಡನೆ ಹಂತದ ಮತದಾನಕ್ಕೆ ಸರ್ವ ಸಿದ್ಧತೆ ಕೈಗೊಳ್ಳಲಾಗಿದೆ. ಬೆಳಗಾವಿ ಸೇರಿದಂತೆ 14 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದೆ. ಮತದಾನ ಹೆಚ್ಚಳಕ್ಕೆ ಜಿಲ್ಲಾಡಳಿತಗಳು ಎಲ್ಲ ಸಿದ್ಧತೆ ಮಾಡಿವೆ. ಈ ಮಧ್ಯೆ ರಾಜ್ಯದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿರುವ ಸವದತ್ತಿಯ ಎಲ್ಮಮ್ಮ ದೇವಿಯ ದರ್ಶನಕ್ಕೆ ನಾಳೆ ಭಕ್ತರಿಗೆ ಅವಕಾಶ ಸಿಗದು. ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಪ್ರತಿ ಮಂಗಳವಾರ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಜನರು ಮತಕೇಂದ್ರಗಳಿಗೆ ತೆರಳದೆ ನೇರವಾಗಿ ದೇವಸ್ಥಾನಕ್ಕೆ ಬರುವುದನ್ನು ತಪ್ಪಿಸಲು ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.
ದೇವಸ್ಥಾನದ ಸುತ್ತಮುತ್ತ ಬ್ಯಾರಿಕೇಡ್ ಹಾಕಲಾಗಿದ್ದು, ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಭಕ್ತರ ಪ್ರವೇಶ ನಿರಾಕರಿಸಲಾಗಿದ್ದರೂ ರೇಣುಕಾ ಯಲ್ಲಮ್ಮ ದೇವಿಗೆ ದಿನ ನಿತ್ಯದ ಪೂಜೆ ಎಂದಿನಂತೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಭಕ್ತರಿಗೆ ಗೊಂದಲ ಬೇಡ ಎಂದು ಕಾರ್ಯನಿರ್ವಾಹಕ ಅಧಿಕಾರಿ ಎಸ್ ಬಿ ಮಹೇಶ್ ಸ್ಪಷ್ಟಪಡಿಸಿದ್ದಾರೆ.
ಉತ್ತರ ಕರ್ನಾಟಕದ ಬಹುತೇಕ ಮಂದಿ ರೇಣುಕಾ ಯಲ್ಮಮ್ಮ ದೇವಿಯ ಭಕ್ತರಾಗಿದ್ದಾರೆ. ಸುಡು ಬಿಸಿಲಿನಲ್ಲಿ ಕೂಡ ದೇವಸ್ಥಾನಕ್ಕೆ ಪ್ರತಿದಿನ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುತ್ತಿದ್ದಾರೆ.
ಶಕ್ತಿ ದೇವತೆ ಮಂದಿರದಲ್ಲಿ ತಪ್ಪಿದ ಭಾರೀ ಅನಾಹುತ
ಇನ್ನೊಂದೆಡೆ ಮಂಡ್ಯ ಜಿಲ್ಲೆಯ ಪಾಂಡವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾರೀ ಅನಾಹುತ ತಪ್ಪಿದೆ. ಪಾಂಡವಪುರದ ಡಿಂಕಾ ಗ್ರಾಮದ ಅಧಿದೇವತೆ ಪೂಜೆಗೆ ಬಂದ ಭಕ್ತರ ಹಲವು ವಾಹನ ಮರ ಬಿದ್ದ ಪರಿಣಾಮ ಜಖಂಗೊಂಡಿದೆ.
ಪೂಜೆ ಮಾಡಲು ತಂದ ಹೊಸ ವಾಹನಕ್ಕೆ ಹಾನಿಯಾಗಿದೆ. ಮರ ಬಿದ್ದ ಕಾರಣ 5ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಡಿಂಕಾ ಗ್ರಾಮದ ಶಕ್ತಿ ದೇವತೆ ದರ್ಶನ ವೇಳೆ ದುರಂತ ಸಂಭವಿಸಿದೆ. ಶಕ್ತಿ ದೇವತೆ ದರ್ಶನಕ್ಕೆ ಬಂದಿದ್ದ ಭಕ್ತರ ವಾಹನ ಜಖಂಗೊಂಡಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ವಾಹನದ ಮೇಲೆ ಮರ ಬಿದ್ದು ಜಖಂಗೊಂಡಿದ್ದರೂ ಯಾವುದೇ ಪ್ರಾಣಾಪ್ರಾಯ ಸಂಭವಿಸಿಲ್ಲ. ಇದು ಶಕ್ತಿ ದೇವತೆಯ ಮಹಿಮೆ ಎಂದು ಹೇಳುತ್ತಿದ್ದಾರೆ.