ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಆರಂಭಗೊಂಡಿದ್ದು, ಈ ನಿಟ್ಟಿನಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿರುವ ಮತಗಟ್ಟಗೆ ಆಗಮಿಸಿದ ಸಭಾಪತಿ ಬಸವರಾಜ ಹೊರಟ್ಟಿ ಮತದಾನ ಮಾಡಿದರು.
ಹೌದು.. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು, ಕುಟುಂಬ ಸಮೇತವಾಗಿ ಆಗಮಿಸಿ ಮತದಾನ ಮಾಡಿದ್ದಾರೆ. ಪುತ್ರ, ಸೊಸೆ, ಮೊಮ್ಮಗಳೊಂದಿಗೆ ಆಗಮಿಸಿದ ಹೊರಟ್ಟಿ, ಮತಗಟ್ಟೆ ಸಂಖ್ಯೆ 191ರಲ್ಲಿ ಮತದಾನ ಮಾಡಿದ್ದಾರೆ.