ಬೆಂಗಳೂರು: ರಾಜ್ಯದಲ್ಲಿ 2ನೇ ಹಂತದ ಮತದಾನ ನಡೆದ ಲೋಕಸಭಾ ಕ್ಷೇತ್ರಗಳಲ್ಲಿ ಮತದಾರ ಉತ್ತಮ ಪ್ರತಿಕ್ರಿಯೆ ನೀಡಿದ್ದಾನೆ. ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಸಂಜೆ 5ಗಂಟೆಗೆ ಶೇಕಡ 66.05ರಷ್ಟು ಮತದಾನವಾಗಿದೆ. ಮತದಾನ ಪ್ರಮಾಣದಲ್ಲಿ ಚಿಕ್ಕೋಡಿ ಮೊದಲಸ್ಥಾನದಲ್ಲಿದೆ. ಸಂಜೆ 5ಗಂಟೆ ಹೊತ್ತಿಗೆ ಚಿಕ್ಕೋಡಿಯಲ್ಲಿ ಅತ್ಯಧಿಕ ಪ್ರಮಾಣದ ಮತದಾನವಾಗಿದೆ.
ಸಂಜೆ ಐದು ಗಂಟೆ ತನಕ ರಾಜ್ಯದ ಮತದಾನ ಪ್ರಮಾಣದ ಮಾಹಿತಿ ಇಂತಿದೆ
ಬಾಗಲಕೋಟೆ 65.55 ಶೇಕಡ, ಬೆಳಗಾವಿ 65.67 ಶೇ. ಬಳ್ಳಾರಿ 68.94 ಶೇ, ಬೀದರ್ ಶೇ,60.17, ವಿಜಯಪುರ ಶೇ 60.95, ಚಿಕ್ಕೋಡಿ 72.75 ಶೇ, ದಾವಣಗೆರೆ 70.90 ಶೇ, ಧಾರವಾಡ 67.15 ಶೇ , ಕಲಬುರಗಿ 57.20 ಶೇ. ಹಾವೇರಿ 71.90 ಶೇ, ಕೊಪ್ಪಳ 66.05 ಶೇ, ರಾಯಚೂರು 59.48 ಶೇ, ಶಿವಮೊಗ್ಗ 72.07 ಶೇ , ಉತ್ತರ ಕನ್ನಡ 69.57 ಶೇಕಡ ಮತದಾನವಾಗಿದೆ.
ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ಕೆಲವು ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಸುಡು ಬಿಸಿಲಿನ ಮಧ್ಯೆ ಮತದಾರರು ಆಸಕ್ತಿಯಿಂದ ಮತ ಚಲಾಯಿಸಿದ್ದಾರೆ