ಬೆಂಗಳೂರು: ಹಾಸನದ ಅಶ್ಲೀಲ ವಿಡಿಯೋ ಪ್ರಕರಣ ಕಾಂಗ್ರೆಸ್ ಮತ್ತು ಜೆಿಡಿಎಸ್ ಮಧ್ಯೆ ರಾಜಕೀಯ ಕದನಕ್ಕೆ ವೇದಿಕೆ ಕಲ್ಪಿಸಿದೆ. ಕಾಂಗ್ರೆಸ್ ಒಕ್ಕಲಿಗ ನಾಯಕ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ ಬೆನ್ನಲ್ಲೇ. ಸಚಿವ ಕೃಷ್ಣಭೈರೇಗೌಡ ಪ್ರತಿದಾಳಿ ನಡೆಸಿದ್ದಾರೆ. ಜಾತಿ ಹೆಸರು ಹೇಳಿಕೊಂಡು ಪ್ರಕರಣದಿಂದ ನುಣಚಿಕೊಳ್ಳಲು ಯತ್ನ ನಡೆಸುವುದು ಅತ್ಯಂತ ಹೀನಾಯ ಕೃತ್ಯ ಎಂದು ಕೃಷ್ಣಭೈರೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ವಿಶ್ವದಲ್ಲಿ ಅತೀ ದೊಡ್ಡದಾದ ಲೈಂಗಿಕ ಹಗರಣ ಬೆಳಕಿಗೆ ಬಂದಿದೆ. ಇದರಲ್ಲಿ ಸಂತ್ರಸ್ಥೆಯರಿಗೆ ನ್ಯಾಯ ಸಿಗಬೇಕು ಎಂಬುದೇ ನನ್ನ ಗುರಿ ಎಂದು ಕೃಷ್ಣಭೈರೇಗೌಡ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಒಕ್ಕಲಿಗೆ ಸಚಿವರು ಮಾಡಿದ ಟೀಕೆಗಳಿಗೆ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾರಣ ಕೃಷ್ಣ ಭೈರೇಗೌಡ ಈ ಪ್ರತಿಕ್ರಿಯೆ ನೀಡಿದ್ದಾರೆ.
ದೇಶದಲ್ಲಿ ಸಂವಿಧಾನಕ್ಕಿಂತ ಮಿಗಿಲಾದದು ಯಾವುದೂ ಇಲ್ಲ. ಕುಟುಂಬದ ಹೆಸರು ಇಲ್ಲಿ ಅಪ್ರಸ್ತುತ ಎನ್ನುವ ಮೂಲಕ ಕೃಷ್ಣ ಭೈರೇಗೌಡ ಅವರು ಹೆಚ್ ಡಿಕೆ ಕುಟುಂಬಕ್ಕೆ ತಿರುಗೇಟು ನೀಡಿದ್ದಾರೆ.
ನಾವು ಮಾಡಿದ ತಪ್ಪಿಗೆ ಜಾತಿಯನ್ನ ಅಡ್ಡತಂದು ರಕ್ಷಣೆ ಮಾಡಿಕೊಳ್ಳುವುದು ಇಡೀ ಜಾತಿಗೆ ಅವಮಾನ. ಜಾತಿ ಹೆಸರಿನಲ್ಲಿ, ಮನೆಯ ಹೆಸರಿನಲ್ಲಿ ರಕ್ಷಣೆ ಮಾಡಿಕೊಳ್ಳುವುದು ಇನ್ನೂ ಹೀನಾಯ
ಇಡೀ ನಾಗರೀಕ ಸಮಾಜವೇ ತಲೆ ತಗ್ಗಿಸುವ ಪ್ರಕರಣ ಇದಾಗಿದೆ. ಇಂತಹ ಪ್ರಕರಣದಲ್ಲೂ ಹೊಂದಾಣಿಕೆ ಪಾಲಿಟಿಕ್ಸ್‌ಗೆ ಮುಂದಾದರೆ ಅದಕ್ಕಿಂತ ಮನಕಲಕುವ ಘಟನೆ ಇನ್ನೊಂದಿಲ್ಲ ಎಂದು ಕೃಷ್ಣಭೈರೇಗೌಡ ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗದಿಂದ ಸ್ಫೋಟಕ ಹೇಳಿಕೆ
ಇದೇ ವೇಳೆ ಪ್ರಜ್ವಲ್ ರೇವಣ್ಣ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗ ಸ್ಫೋಟಕ ಹೇಳಿಕೆ ಬಿಡುಗಡೆ ಮಾಡಿದೆ. ಮಾಧ್ಯಮ ಪ್ರಕಟಣೆಯಲ್ಲಿ ಆಯೋಗ ಈ ಸಂಬಂಧ ಹಬ್ಬಿರುವ ಹಲವು ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನನಡೆಸಿದೆ.
ಆನ್ಲೈನ್ನಲ್ಲಿ 700 ಮಂದಿ ದೂರು ನೀಡಿದ್ದಾರೆ.700 ಮಂದಿಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ. ಮಹಿಳೆಯೊಬ್ಬರು ಪ್ರಕರಣ ಸಂಬಂಧ ದೂರು ನೀಡಿದ್ದಾರೆ. ಒತ್ತಡದಿಂದ ದೂರು ನೀಡಿರುವುದಾಗಿ ಮಹಿಳೆ ಹೇಳಿದ್ದಾರೆ. ಮಫ್ತಿಯಲ್ಲಿದ್ದ ಮೂವರು ಆ ಸಂತ್ರಸ್ತೆ ಜೊತೆ ಬಂದಿದ್ದರು. ಒತ್ತಡದಿಂದ ದೂರು ನೀಡಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಕುಟುಂಬ ಸದಸ್ಯರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.