Search

SSLC RESULT 2024: ಸರ್ಕಾರಿ ಶಾಲೆಯ ವಿದ್ಯಾರ್ಥಿನಿಗೆ ಎಸ್ಎಸ್ಎಲ್‌ಸಿಯಲ್ಲಿ ಮೊದಲ ಸ್ಥಾನ

ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಒಂದು ವಿಷಯ ಎಲ್ಲರ ಕುತೂಹಲ ಕೆರಳಿಸಿದೆ. ರೈತನ ಮಗಳೊಬ್ಬಳು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಲಕ್ಷ ಲಕ್ಷ ವಿದ್ಯಾರ್ಥಿಗಳ ಪೈಕಿ ಬಾಗಲಕೋಟೆಯ ಅಂಕಿತ ಮೊದಲ ಸ್ಥಾನ ಪಡೆದಿದ್ದಾರೆ.

ಅಂಕಿತಾ ಬಸಪ್ಪ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಗ್ರಾಮದ ಶಾಲೆಯಲ್ಲಿ ಹತ್ತನೇ ತರಗತಿ ಕಲಿತಿದ್ದಾರೆ. 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನಪಡೆದು ದಾಖಲೆ ನಿರ್ಮಿಸಿದ್ದಾರೆ.

ಅಂಕಿತಾ ತಂದೆ ಬಸಪ್ಪ ಕೃಷಿಕರಾಗಿದ್ದಾರೆ. ತಾಯಿ ಗೀತಾ. ಅಂಕಿತಾ ದಂಪತಿಯ ಮೊದಲ ಮಗಳು.
. ಇನ್ನಿಬ್ಬರು ಕಿರಿಯ ಸಹೋದರರು.ತಾಯಿ ಕೃಷಿ ಹಾಗೂ ಮನೆ ಕೆಲಸ ನೋಡಿಕೊಳ್ಳುತ್ತಿದ್ದಾರೆ. ಆರು ಎಕರೆ ನೀರಾವರಿ ಜಮೀನು. ಹೊಂದಿರುವ ಕುಟುಂಬ
ಬೆಳಿಗ್ಗೆ ಐದು ಗಂಟೆ ಯಿಂದ ಎರಡು ತಾಸು ಓದು. ಬಳಿಕ ಸಂಜೆ ಕೂಡ ಅಧ್ಯಯನ. ಇದು ಪರೀಕ್ಷೆಗೆ ಅಂಕಿತಾ ಪರೀಕ್ಷೆಗೆ ತಯಾರಿ ನಡೆಸಿದ ಸಿದ್ಧತೆ

ಇದೇ ವೇಳೆ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶಿರಸಿಯ ಮೂವರಿಗೆ ಎರಡನೇ ಸ್ಥಾನ ದೊರೆತಿದೆ
625ಕ್ಕೆ 624 ಅಂಕ ಗಳಿಸಿದ ಶಿರಸಿಯ ಮೂವರು ವಿದ್ಯಾರ್ಥಿಗಳು

ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ದರ್ಶನ ಸುಬ್ರಾಯ ಭಟ್, ಗೋಳಿ ಪ್ರೌಢಶಾಲೆಯ ಚಿನ್ಮಯ ಹೆಗಡೆ ಹಾಗೂ ಭೈರುಂಬೆ ಶಾಲೆಯಲ್ಲಿ ಶ್ರೀರಾಮ ಕೆ.ಎಂ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಇದೇ ವೇಳೆ ಕಳೆದ ಬಾರಿ ಅಚ್ಚರಿ ಮೂಡಿಸಿದ್ದ ಚಿತ್ರದುರ್ಗ ಜಿಲ್ಲೆ ಫಲಿತಾಂಶದಲ್ಲಿ ಭಾರೀ ನಿರಾಶೆ ಮೂಡಿಸಿದೆ. ಮೊದಲ ಸ್ಥಾನದಿಂದ 21 ನೇ ಸ್ಥಾನಕ್ಕೆ ಕುಸಿದ ಚಿತ್ರದುರ್ಗ ಭಾರೀ ನಿರಾಶೆ ಮೂಡಿಸಿದೆ. ಇದರೊಂದಿಗೆ ಹಲವು ಪ್ರಶ್ನೆಗಳು ಕೂಡ ಮೂಡಿವೆ. ಜಿಲ್ಲೆಯಲ್ಲಿ 72.85% ವಿಧ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. 2022-23ರ ಶೈಕ್ಷಣಿಕ ವರ್ಷದಲ್ಲಿ ಮೊದಲ ಸ್ಥಾನ ಗಳಿಸಿದ್ದ ಚಿತ್ರದುರ್ಗಗಳಿಸಿತ್ತು. ಕಳೆದ ವರ್ಷ 96.8 % ನಷ್ಟು ವಿಧ್ಯಾರ್ಥಿಗಳು ಪಾಸ್ ಆಗಿದ್ದರು.

More News

You cannot copy content of this page