ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮಹಾನಗರದಲ್ಲಿ ಭಾರೀ ಮಳೆ ಸುರಿಯುತ್ತಿದೆ , ಮುಂಗಾರು ಪೂರ್ವದ ಮೊದಲ ಮಳೆಗೆ ಮುಂಬೈ ತತ್ತರಿಸಿ ಹೋಗಿದೆ. ಮಳೆಯ ಜೊತೆ ಜೊತೆಗೆ ಭಾರೀ ಗಾಳಿ ಅಪ್ಪಳಿಸಿದೆ.
ಮುಂಬೈ ಮಹಾನಗರದಲ್ಲಿ ಧೂಳು ಮಿಶ್ರಿತ ಸುಂಟರಗಾಳಿ ಅಪ್ಪಳಿಸಿದೆ. ಧೂಳು ಮಿಶ್ರಿತ ಸುಂಟರಗಾಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ.
ಘಾಟ್‌ಕೋಪರ್‌ನಲ್ಲಿ ಬೀಸಿದ ಶಕ್ತಿಶಾಲಿ ಗಾಳಿಯಿಂದ ಬೃಹತ್ ಹೋರ್ಡಿಂಗ್ ಪೆಟ್ರೋಲ್ ಬಂಕ್ ಮೇಲೆ ಕುಸಿದು ಬಿದ್ದಿದೆ. ಹೋರ್ಡಿಂಗ್ ಅಡಿಯಲ್ಲಿ ಸಿಲುಕಿದ್ದ 7 ಮಂದಿಯನ್ನು ರಕ್ಷಿಸಲಾಗಿದೆ.
ಮಹಾರಾಷ್ಟ್ರದ ಇತರೆಡೆ ಕೂಡ ಮಳೆಯ ಆಗಮನವಾಗಿದೆ. ದೇಶದ ವಾಣಿಜ್ಯ ರಾಜಧಾನಿಯಲ್ಲಿ ಮಳೆಯ ಆಗಮನವನ್ನು ಜನು ತಮ್ಮದೇ ರೀತಿಯಲ್ಲಿ ಸ್ವಾಗತಿಸುತ್ತಾರೆ.
ಮಳೆಗಾಲದಲ್ಲಿ ಅಬ್ಬರದ ಮಳೆಯಿಂದಾಗಿ ಲೋಕಲ್ ಟ್ರೈನ್ ಸ್ಥಗಿತಗೊಂಡರೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತದೆ.
ಮಳೆಗಾಲದಲ್ಲಿ ಭಿಕ್ಷುಕರು ಸೇರಿದಂತೆ ನಿರಾಶ್ರಿತರಿಗೆ ಹಲವು ಸಂಘ ಸಂಸ್ಥೆಗಳು ನೆರವಿನ ಹಸ್ತ ಚಾಚುತ್ತವೆ. ಈ ದೃಶ್ಯ ಮುಂಬೈಯಲ್ಲಿ ಮಾತ್ರ ಕಾಣಲು ಸಾಧ್ಯ