ಬೆಂಗಳೂರು, ಮೇ 15: ಕೆಪಿಸಿಸಿ ಅಧ್ಯಕ್ಷರು ಹಾಗು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಭಾರತದ ಉಪರಾಷ್ಟ್ರಪತಿಗಳಾದ ಜಗದೀಪ್ ಧನ್ಕರ್ ಅವರು ಜನ್ಮದಿನದ ಶುಭಾಶಯ ಕೋರಿದ್ದಾರೆ.
ಉಪರಾಷ್ಟ್ರಪತಿಗಳು ಬುಧವಾರ ಡಿ ಕೆ ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿ ಶುಭಾಶಯ ಕೋರಿದರು. ಜತೆಗೆ ಅವರಿಗೆ ಶುಭಾಶಯ ಪತ್ರವನ್ನೂ ಬರೆದಿದ್ದಾರೆ.
“ಡಿ.ಕೆ. ಶಿವಗುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳು. ದೇಶದ ಸೇವೆಗೆ ಜೀವನವನ್ನು ಮುಡಿಪಾಗಿಟ್ಟಿರುವ ತಮಗೆ ದೇವರು ಸಂತೋಷ, ಆರೋಗ್ಯ ಹಾಗೂ ಸುದೀರ್ಘ ಫಲಪ್ರದಾಯಕ ಜೀವನವನ್ನು ನೀಡಲಿ” ಎಂದು ಜಗದೀಪ್ ಧನ್ಕರ್ ಅವರು ಪತ್ರದ ಮೂಲಕ ಹಾರೈಸಿದ್ದಾರೆ.
ಉಪರಾಷ್ಟ್ರಪತಿಗಳ ಶುಭಕಾಮನೆಗೆ ಧನ್ಯವಾದ ತಿಳಿಸಿ ಶಿವಕುಮಾರ್ ಅವರು ಕೂಡ ಪತ್ರ ಬರೆದಿದ್ದು, “ನನ್ನ ಜನ್ಮದಿನದ ಅಂಗವಾಗಿ ನಿಮ್ಮ ಶುಭಾಶಯ ಪಡೆದು ಸಂತೋಷವಾಗಿದೆ. ನಿಮ್ಮ ಬಿಡುವಿಲ್ಲದ ವೇಳಾಪಟ್ಟಿ ನಡುವೆ ನೀವು ನನ್ನನ್ನು ನೆನಪಿಸಿಕೊಂಡು ಶುಭಾಶಯ ಕೋರಿದ್ದೀರಿ. ನಿಮ್ಮ ನಿರೀಕ್ಷೆಯಂತೆ ನನ್ನ ಜೀವನವನ್ನು ಜನ ಸೇವೆಗೆ ಮುಡುಪಿಡುತ್ತೇನೆ. ಇದಕ್ಕೆ ನಿಮ್ಮ ಆಶೀರ್ವಾದವನ್ನು ಬಯಸುತ್ತೇನೆ” ಎಂದು ಶಿವಕುಮಾರ್ ಅವರು ತಿಳಿಸಿದ್ದಾರೆ.