Skeletons found Case: ಚಿತ್ರದುರ್ಗದಲ್ಲಿ ಐವರ ಮೃತದೇಹ ಪತ್ತೆ ಪ್ರಕರಣ, ಸಾಮೂಹಿಕ ಆತ್ಮಹತ್ಯೆ ದೃಢ

ಬೆಂಗಳೂರು: ಚಿತ್ರದುರ್ಗದ ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಅಸ್ಥಿಪಂಜರ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಎಸ್ಎಲ್ ವರದಿ ಇದೀಗ ತನಿಖಾಧಿಕಾರಿಗಳ ಕೈ ಸೇರಿದೆ. ವರದಿಯಲ್ಲಿ ಸಾವಿನ ಕುರಿತು ಸ್ಫೋಟಕ ಮಾಹಿತಿ ಇದೆ ಎಂದು ವರದಿಯಾಗಿದೆ. ಚಿತ್ರದುರ್ಗದ ಮನೆಯಲ್ಲಿ ಒಂದೇ ಕುಟುಂಬದ ಐದು ಅಸ್ತಿಪಂಜರ ಪತ್ತೆಯಾಗಿತ್ತು. ಜಗನ್ನಾಥರೆಡ್ಡಿ ಕುಟುಂಬದ ಐವರ ಮೃತದೇಹಗಳ ಅಸ್ಥಿಪಂಜರ ಪತ್ತೆಯಾಗಿತ್ತು ಇದು ರಾಜ್ಯದಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.
ಮನೆಯಲ್ಲಿ ದೊರೆತ ಮೃತದೇಹ ಸತ್ತು 4ರಿಂದ5 ವರ್ಷಗಳ ಹಿಂದಿನದ್ದು ಎಂದು ಹೇಳಲಾಗುತ್ತಿದೆ. ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿಯ ಹಳೆ ಬೆಂಗಳೂರು ರಸ್ತೆಯಲ್ಲಿರುವ ಮನೆಯಲ್ಲಿ ಮೃತದೇಹಗಳು ಪತ್ತೆಯಾಗಿತ್ತು.

ನಿದ್ದೆ ಮಾತ್ರೆ ಅಂಶ ಪತ್ತೆ
ಇದೀಗ ಎಫ್ಎಸ್ಎಲ್ ಪರೀಕ್ಷಾ ವರದಿಯಲ್ಲಿ ಸಾವಿನ ಅಂಶ ಬೆಳಕಿಗೆ ಬಂದಿದೆ. ಐವರ ಮೃತದೇಹಗಳಲ್ಲಿ ನಿದ್ದೆ ಮಾತ್ರೆಯ ಅಂಶ ಬಯಲಾಗಿದೆ. ಎಫ್ಎಸ್ಎಲ್ ವರದಿಯಲ್ಲಿ ನಿದ್ದೆ ಮಾತ್ರೆ ಸೇವಿಸಿ ಸಾವು ಎಂಬುದು ದೃಢಪಟ್ಟಿದೆ ಎಂದು ಹೇಳಲಾಗುತ್ತಿದೆ.
ನಿವೃತ್ತ ಇಇ ಜಗನ್ನಾಥರೆಡ್ಡಿ, ಪತ್ನಿ ಪ್ರೇಮಲೀಲ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣ, ನರೇಂದ್ರ ಅವರ ಮೃತದೇಹ ಮನೆಯಲ್ಲಿ ಪತ್ತೆಯಾಗಿತ್ತು. ಚಿತ್ರದುರ್ಗ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಒಂದೇ ಮನೆಯಲ್ಲಿ ಐವರ ಅಸ್ಥಿಪಂಜರ ಪತ್ತೆ ರಾಜ್ಯದಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಜಗನ್ನಾಥ ರೆಡ್ಡಿ ಕುಟುಂಬ ಸಾರ್ವಜನಿಕವಾಗಿ ಯ.ಾರ ಜೊತೆ ಹೆಚ್ಚು ಆತ್ಮೀಯತೆ ಹೊಂದಿರಲಿಲ್ಲ ಎಂದು ಕೂಡ ವರದಿಯಾಗಿತ್ತು. ಆರ್ಥಿಕವಾಗಿ ಅತ್ಯಂತ ಸುಭದ್ರರಾಗಿದ್ದ ಕುಟುಂಬದ ಸದಸ್ಯರು ನಿಗೂಢವಾಗಿ ಸಾವನ್ನಪ್ಪಿದ್ದು ಜನರಲ್ಲಿ ನಾನಾ ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು.
ಕೆರೆಯಲ್ಲಿ ಮುಳುಗಿ ನಾಲ್ಕು ಮಕ್ಕಳ ಸಾವು
ರಾಜ್ಯದಲ್ಲಿ ಮಕ್ಕಳು ಬೇಸಿಗೆ ರಜೆಯ ಸಂಭ್ರಮದಲ್ಲಿದ್ದರೇ ಜೊತೆಗೆ ದುರಂತ ಕೂಡ ಮುಂದುವರಿದಿದೆ. ಹಾಸನ ಜಿಲ್ಲೆಯಲ್ಲಿ ಕೆರೆಯಲ್ಲಿ ಈಜಲು ತೆರಳಿದ್ದ ಐವರು ಮಕ್ಕಳ ಪೈಕಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ.ಹಾಸನ ಜಿಲ್ಲೆಯ
ಆಲೂರು ತಾಲೂಕಿನ ಕದಾಳು ಸಮೀಪದ ಮುತ್ತಿಗೆಯಲ್ಲಿ ಈ ದುರಂತ ಸಂಭವಿಸಿದೆ. ಮೃತಪಟ್ಟವರನ್ನು ಜೀವನ್, ಸಾತ್ವಿಕ್, ವಿಶ್ವ,ಪೃಥ್ವಿ ಎಂದು ಗುರುತಿಸಲಾಗಿದೆ. ಐವರು ಮಕ್ಕಳು ಈಜಲು ತೆರಳಿದ್ದಾಗ ಈ ದುರಂತ ಸಂಭವಿಸಿದೆ. ಶಾಲೆಗೆ ರಜೆ ಇದ್ದ ಕಾರಣ ಮಕ್ಕಳು ಈಜಲು ಕೆರೆಗೆ ತೆರಳಿದ್ದರು.
ಕಳೆದ ವಾರ ವಿಜಯಪುರ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಒಂಟೆ ಹಿಂಬಾಲಿಸಿಕೊಂಡು ಹೋಗಿದ್ದ ಮಕ್ಕಳು ತಾಜ್ಯ ಸಂಸ್ಕರಣಾ ಘಟಕದ ನೀರಿನಲ್ಲಿ ಬಿದ್ದ ಪರಿಣಾಮ ಮೂವರು ಮಕ್ಕಳು ಮೃತಪಟ್ಟಿದ್ದರು. ಬೇಸಿಗೆ ರಜೆ ಕಾರಣ ಪೋಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಮಕ್ಕಳು ಎಲ್ಲಿಗೆ ತೆರಳುತ್ತಾರೆ . ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನಿಗಾ ಇರಿಸಬೇಕಾಗಿದೆ.

More News

You cannot copy content of this page