ಹುಬ್ಬಳ್ಳಿ: ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಅಂಜಲಿ ನಿವಾಸಕ್ಕೆ ಅಂಜುಮನ್ ಇಸ್ಲಾಂ ಪದಾಧಿಕಾರಿಗಳ ಭೇಟಿ ನೀಡಿ ಸಾಂತ್ವನ ಹೇಳಿದರು.
ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ ನೇತೃತ್ವದಲ್ಲಿ ಭೇಟಿ ನೀಡಿ ಅಂಜಲಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಘಟನೆ ಕುರಿತು ಮಾಹಿತಿ ಪಡೆದುಕೊಂಡ ಮಾಜಿ ಸಚಿವರು,ಸಮಿತಿ ಪದಾಧಿಕಾರಿಗಳು, ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಇನ್ನೂ ಆರ್ಥಿಕ ಸಹಾಯ ಮಾಡಿದ ಅಂಜುಮನ್ ಪದಾಧಿಕಾರಿಗಳು, ನಾವು ಮಾಡಿದ ಸಹಾಯ ಬಲಗೈಯಲ್ಲಿ ಕೊಟ್ಟಿದ್ದು ಎಡಗೈ ಗೆ ಗೊತ್ತಾಗಬಾರದು ಇದು ನಮ್ಮ ಕಿರುಸಹಾಯ ಅಂಜಲಿ ಸಹೋದರಿಯರಿಗೆ ಆರ್ಥಿಕ ಸಹಾಯದ ಭರವಸೆ ಜೊತೆಗೆ ಅಂಜಲಿ ಸಹೋದರಿಯರಿಗೆ ನಮ್ಮ ಸಂಸ್ಥೆಯು ವಿದ್ಯಾಭ್ಯಾಸ ಜವಾಬ್ದಾರಿಯನ್ನು ಹೊರಲು ಸಿದ್ದವಿದೆ ಮತ್ತು ಈ ಕುಟುಂಬಕ್ಕೆ ಮನೆಯ ಕೊರತೆಯಿದ್ದು ಸರ್ಕಾರಕ್ಕೆ ನಾವು ಒತ್ತಾಯವನ್ನು ಮಾಡಿ ಒಂದು ಸೂರು ಕಲ್ಪಿಸುವ ವ್ಯವಸ್ಥೆಗೆ ಎಲ್ಲ ಬಗೆಯ ಪ್ರಯತ್ನ ವನ್ನು ಮಾಡುತ್ತೆವೆ ಅನ್ನೊ ಭರವಸೆ ನೀಡಿದರು.

ಇನ್ನು ಅಂಜುಮನ್ ಸಂಸ್ಥೆಯು ನೇಹಾ ಹತ್ಯೆಯನ್ನು ಯಾವ ತರ ಖಂಡನೆ ಮಾಡಿತ್ತು ಅದೆ ತರಹ ಈ ಪ್ರಕರಣವನ್ನು ಖಂಡಿಸುತ್ತದೆ ಇದರಲ್ಲಿ ಯಾರು ಜಾತಿಯನ್ನ ಎಳೆದು ತರಬಾರದು ಇಂತಹ ವಿಕೃತ ಮನಸ್ಸಿನ ಪೈಶಾಚಿಕ ಕೃತ್ಯಕ್ಕೆ ನಮ್ಮ ನೆಲದ ಕಾನೂನಿನ ಪ್ರಕಾರ ಗರಿಷ್ಠ ಶಿಕ್ಷೆಗೆ ಆಗ್ರಹ ಪಡಿಸುವದರ ಮುಖಾಂತರ ಅಂಜಲಿ ಕುಟುಂಬದ ಜೊತೆ ಅಂಜುಮನ್ ಸಂಸ್ಥೆ ಇದೆ ಅನ್ನೊ ಭರವಸೆ ತುಂಬಿದರು.