ಹುಬ್ಬಳ್ಳಿ: ನೇಹಾ ಹಾಗೂ ಅಂಜಲಿ ಹತ್ಯೆ ಸಮಾಜಕ್ಕೆ ಒಳ್ಳೆಯ ವಿಚಾರವಲ್ಲ ಈ ಕುರಿತಾಗಿ ಸಿಎಂ, ಗೃಹ ಸಚಿವರಿಗೆ ವಿಶೇಷ ನ್ಯಾಯಾಲಯ ಮಾಡಲು ಹಾಗೂ ಸಿಐಡಿ ಗೆ ವಹಿಸಲು ಆಗ್ರಹಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಹೇಳಿದರು.
ನಗರದ ವೀರಾಪೂರ ಓಣಿಯಲ್ಲಿರುವ ಹತ್ಯೆಯಾದ ಅಂಜಲಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಎರಡು ಲಕ್ಷ ರೂ. ಚೆಕ್ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜಘಾತುಕ ಕೆಲಸ ಮಾಡುವ ಇಂತಹ ಯುವಕರ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸವಾಗಬೇಕಿದೆ. ಮೊದಲೇ ದೂರು ಕೊಟ್ಟಿದ್ದರೂ ಕೂಡಾ ಕ್ರಮ ಕೈಗೊಂಡಿಲ್ಲ ಎಂದು ಎಂದು ಅಂಜಲಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ವಿಚಾರವಾಗಿ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಕರಣದಲ್ಲಿ ಯಾವ ಅಧಿಕಾರಿಯನ್ನೂ ರಕ್ಷಿಸುವುದಿಲ್ಲ ಎಂದು ಹೇಳಿದರು.
ಅಂಜಲಿ ಕುಟುಂಬಕ್ಕೆ ನೆರವಾದ ಲಾಡ್..
ಹತ್ಯೆಗೀಡಾದ ಅಂಜಲಿ ಕುಟುಂಬಕ್ಕೆ ಭೇಟಿ ನೀಡಿದ ಲಾಡ್ ಅವರು ಸಂತೋಷ್ ಲಾಡ್ ಅವರ ಫೌಂಡೇಶನ್ ನಿಂದ ೨ ಲಕ್ಷ ರೂ. ಚೆಕ್ ನೀಡಿದರು. ಅಂಜಲಿ ಅಜ್ಜಿ ಗಂಗಮ್ಮ ಹಾಗೂ ತಂಗಿಯರಿಗೆ ಚೆಕ್ ನೀಡಿ ಸಾಂತ್ವನ ಹೇಳಿದರು.