Elephant Population: ಮೇ 23ರಿಂದ ರಾಜ್ಯದಲ್ಲಿ ಆನೆಗಳ ಗಣತಿ ಕಾರ್ಯ ಆರಂಭ

ಬೆಂಗಳೂರು: ರಾಜ್ಯದಲ್ಲಿ ಆನೆಗಳ ಗಣತಿ ಕಾರ್ಯಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಮೇ 23ರಿಂದ ರಾಜ್ಯದಲ್ಲಿ ಆನೆಗಳ ಗಣತಿ ಕಾರ್ಯ ಆರಂಭವಾಗಲಿದೆ. ಇಡೀ ದೇಶದಲ್ಲಿ ಅತ್ಯಧಿಕ ಆನೆಗಳು ಇರುವ ರಾಜ್ಯಗಳ ಪೈಕಿ ಕರ್ನಾಟಕ ಮುಂಚೂಣಿಯಲ್ಲಿದೆ.
ನಾಗರಹೊಳೆ ಅಭಯಾರಣ್ಯದಲ್ಲಿ ಮೇ 23ರಿಂದ ಆನೆಗಳ ಗಣತಿ ಕಾರ್ಯ ಆರಂಭವಾಗಲಿದೆ.ಆನೆಗಳ ಅಚ್ಚುಮೆಚ್ಚಿನ ತಾಣವಾಗಿರುವ ನಾಗರಹೊಳೆ ಅಭಯಾರಣ್ಯದಲ್ಲಿಮೂರು ದಿನಗಳ ಕಾಲ ಗಣತಿ ಕಾರ್ಯ ನಡೆಯಲಿದೆ ಆನೆಗಳ ಗಣತಿ ಕಾರ್ಯಕ್ಕೆ ಅರಣ್ಯ ಇಲಾಖೆಯಿಂದ ಸಕಲ ಸಿದ್ದತೆ ಮಾಡಲಾಗಿದೆ. ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ.
300ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ ಕೈ ಜೋಡಿಸಲಿದ್ದಾರೆ. ಆನೆಗಳ ಗಣತಿ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಆನೆಗಳ ಗಣತಿ ಕಾರ್ಯ ಮುಗಿದ ಬಳಿಕ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳಿಗೆ ವರದಿ ರವಾನೆಯಾಗಲಿದೆ.
ಇಡೀ ದೇಶದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಹೆಗ್ಗಳಿಕೆಗೆ ರಾಜ್ಯ ಪಾತ್ರವಾಗಿದೆ. ರಾಜ್ಯದಲ್ಲಿ 6395 ಆನೆಗಳಿವೆ ಎಂಬುದು ಕಳೆದ ವರ್ಷದ ಗಣತಿಯಲ್ಲಿ ದಾಖಲಾಗಿತ್ತು.

ಆನೆ ಮಾನವ ಸಂಘರ್ಷ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಆನೆ ಮಾನವ ಸಂಘರ್ಷ ತಾರಕಕ್ಕೆ ಏರಿದೆ. ಹೆಚ್ಚುತ್ತಿರುವ ಜನ ಸಂಖ್ಯೆಯಿಂದಾಗಿ ಮಾನವ ಕಾಡನ್ನು ಅತಿಕ್ರಮಣ ಮಾಡಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ರಾಜ್ಯದ ಹಾಸನ, ಕೊಡಗು, ಚಿಕ್ಕಮಗಳೂರು, ರಾಮ ನಗರ ಜಿಲ್ಲೆಗಳಲ್ಲಿ ಆನೆ ಮತ್ತು ಮಾನವ ಸಂಘರ್ಷ ದಿನನಿತ್ಯದ ಸುದ್ದಿಯಾಗಿದೆ.
ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಬೆಂಗಳೂರಿನ ಗ್ರಾಮಾಂತರ ಪ್ರದೇಶಗಳಲ್ಲಿ ಹಲವು ಬಾರಿ ಆನೆಗಳು ದಾಳಿ ನಡೆಸಿವೆ. ಆನೆ ದಾಳಿಗೆ ಸಿಲುಕಿ ಮನುಷ್ಯನ ಜೀವಹಾನಿ ಕೂಡ ಸಂಭವಿಸಿದೆ.

ಆನೆಗಳು ರಾಜ್ಯದ ಸಂಪತ್ತು
ಆನೆಗಳು ರಾಜ್ಯದ ಸಂಪತ್ತಾಗಿದೆ. ಆನೆಗಳ ವಾಸಸ್ಥಳವನ್ನು ಆನೆಗಳಿಗೆ ಮೀಸಲಿಡಬೇಕು. ಆನೆಗಳು ಸ್ವಚಂಧವಾಗಿ ವಿಹರಿಸಲು ಅವಕಾಶ ಕಲ್ಪಿಸಬೇಕು. ಆನೆಗಳ ಪ್ರದೇಶವನ್ನು ಅತಿಕ್ರಮಣ ಮಾಡಿ ಆನೆ ದಾಳಿಯಾಗಿದೆ ಎಂದು ಬೊಬ್ಬೆ ಹೊಡೆದರೆ ಆನೆಗಳು ಎಲ್ಲಿಗೆ ಹೋಗಬೇಕು.
ಭೀಕರ ಬರಗಾಲದಿಂದ ಆನೆಗಳು ಆಹಾರ ಹುಡುಕಿ ಗ್ರಾಮಗಳಿಗೆ ಲಗ್ಗೆ ಇಡುತ್ತವೆ. ರಾಜ್ಯದ ಆನೆ ಕಾರಿಡಾರ್‌ ಪ್ರದೇಶ ಕೂಡ ಅತಿಕ್ರಮಣಕ್ಕೆ ತುತ್ತಾಗಿದೆ ಎಂದು ವರದಿಯಾಗಿದೆ. ಆನೆಗಳು ನೆರೆಯ ರಾಜ್ಯಗಳಿಗೆ ವಲಸೆ ಹೋಗುವುದು ಸಾಮಾನ್ಯ. ಆನೆಗಳ ಈ ಚಟುವಟಿಕೆಗಳಿಗೆ ಇದರಿಂದ ಅಡ್ಡಿಯಾಗಿದೆ ಎಂದು ವರದಿಯಾಗಿದೆ.
ರಾಜ್ಯದಲ್ಲಿ ಆನೆಗಳ ಸಂತತಿ ಹೆಚ್ಚಾಗಲಿ. ಜೊತೆಗೆ ಆನೆಗಳ ಸಂರಕ್ಷಣೆ ಕಾರ್ಯ ಕೂಡ ಚುರುಕುಗೊಳ್ಳಲಿ. ಇದು ಆನೆ ಪ್ರಿಯರ ಕಳಕಳಿಯಾಗಿದೆ.

More News

You cannot copy content of this page