HD KUMARASWAMY ON PRAJWAL REVANNA: ಪ್ರಜ್ವಲ್..‌ ನೀನು ಎಲ್ಲೇ ಇದ್ದರೂ ವಾಪಸ್‌ ಬಾ.. ಎಂದು ಸಂದೇಶ ಕೊಟ್ಟ ಹೆಚ್.‌ಡಿ.ಕುಮಾರಸ್ವಾಮಿ

ಬೆಂಗಳೂರು: ಪ್ರಜ್ವಲ್‌, ನೀನು ಎಲ್ಲೇ ಇದ್ದರೂ ಕೂಡಲೇ ವಾಪಸ್‌ ಬಾ.. ತನಿಖಾ ತಂಡಕ್ಕೆ ಸಹಕಾರ ನೀಡು ಎಂದು ಮಾಜಿ ಮುಖ್ಯಮಂತ್ರಿ ಹೆಚ್.‌ಡಿ.ಕುಮಾರಸ್ವಾಮಿ ಅವರು ಮಾಧ್ಯಮಗಳ ಮೂಲಕ ಪ್ರಜ್ವಲ್‌ ರೇವಣ್ಣ ಅವರಿಗೆ ಸಂದೇಶ ನೀಡಿದರು.
ನಮ್ಮ ತಂದೆ ಆವರಿಗೆ ನಾನು ಹೇಳಿದ್ದೇನೆ.

ಈ ಸರಕಾರಕ್ಕೆ ಪ್ರಜ್ವಲ್ ಕರೆಸುವ ಶಕ್ತಿ ಇದ್ದಂತಿಲ್ಲ. ಅದಕ್ಕೆ ನಾನೇ ಕರೆ ಕೊಡುತ್ತಿದ್ದೇನೆ. ಮಾಧ್ಯಮಗಳ ಮೂಲಕ ಹೇಳುತ್ತಿದ್ದೇನೆ. ಕೂಡಲೇ ವಾಪಸ್‌ ಬಾ.. ದೊಡ್ಡವರು (ದೇವೇಗೌಡರು) ಮತ್ತು ಪಕ್ಷದ ಕಾರ್ಯಕರ್ತರಿಗೆ ಗೌರವ ಕೊಟ್ಟು ತಕ್ಷಣ ವಾಪಸ್‌ ಬಾ.. ತನಿಖಾ ತಂಡಕ್ಕೆ ಸಹಕರಿಸು. ಕಾನೂನು ಪ್ರಕಾರ ಪ್ರಕರಣವನ್ನು ಎದುರಿಸು ಎಂದು ಹೇಳಿದರು ಮಾಜಿ ಮುಖ್ಯಮಂತ್ರಿಗಳು.

ನಮ್ಮ ತಂದೆಯವರ ನೋವು ನೋಡಲಾಗದೆ ಈ ಮಾತನ್ನು ಹೇಳುತ್ತಿದ್ದೇನೆ. ಇತರೆ ಯಾರೂ ನಮ್ಮಿಂದ ನೋವಿಗೆ ತುತ್ತಾಗಬಾರದು. ನಾನೇ ಮಾಧ್ಯಮಗಳ ಮೂಲಕ ಮನವಿ ಮಾಡುತ್ತೇನೆ ಎಂದು ತಂದೆಯವರು ಹೇಳಿದರು. ನಾನೇ ವಾಪಸ್‌ ಬರುವಂತೆ ಸಂದೇಶ ಕೊಡುತ್ತೇನೆ ಎಂದು ನಿಮ್ಮಗಳ (ಮಾಧ್ಯಮಗಳು) ಮೂಲಕ ಬಹಿರಂಗವಾಗಿ ಹೇಳುತ್ತದ್ದೇನೆ ಎಂದರು ಕುಮಾರಸ್ವಾಮಿ ಅವರು.

ನಾನು ದಿನವೂ ಪದ್ಮನಾಭ ನಗರಕ್ಕೆ ಹೋಗುತ್ತೇನೆ. ಪ್ರಜ್ವಲ್ ರಕ್ಷಣೆ ಹೇಗೆ ಮಾಡಬೇಕು ಎಂದು ಚರ್ಚೆ ಮಾಡುವುದಕ್ಕೆ ನಾನು ಅಲ್ಲಿಗೆ ಹೋಗುತ್ತಿಲ್ಲ. ನಮ್ಮ ತಂದೆ-ತಾಯಿ ಅವರ ಜೀವಕ್ಕೆ ತೊಂದರೆ ಆಗಬಾರದು ಎಂದು ಅವರಿಗೆ ಧೈರ್ಯ ತುಂಬಲು ಹೋಗುತ್ತಿದ್ದೇನೆ. ಆದರೆ, ಇದನ್ನೇ ಬೇರೆಯವರು ಕಥೆ ಕಟ್ಟಿ ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

More News

You cannot copy content of this page