ಕುರಿಮಂದೆಯನ್ನು ಗಮನಿಸಿದ ಹೆಬ್ಬಾವೊಂದು ಮೇಕೆ ಮರಿಯನ್ನು ತಿನ್ನಲು ಬಂದಾಗ ಉರಗತಗಜ್ಞರ ಸಹಾಯದಿಂದ ಹೆಬ್ಬಾವನ್ನು ಸೇರಿಹಿಡಿಯಲಾಗಿರುವ ಘಟನೆ ಕೊರಟಗೆರೆ ತಾಲ್ಲೂಕಿನ ಕುರಂಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣುವಿನಕುರಿಕೆ ಗ್ರಾಮದಲ್ಲಿ ನಡೆದಿದೆ.
ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಸುಮಾರು 11 ಅಡಿ ಉದ್ದ, 16 ಕೆಜಿ ತೂಕದ ಬೃಹತ್ ಗಾತ್ರದ ಹೆಬ್ಬಾವು ಮೇಕೆಯ ಮೇಲೆ ದಾಳಿ ಮಾಡಿ ಮೇಕೆ ಮರಿ ನುಂಗಲು ಯತ್ನಿಸುತ್ತಿದ್ದ ವೇಳೆ ಇದನ್ನು ಗಮನಿಸಿದ ಮಾಲೀಕ ಮೇಕೆ ಮರಿ ಪ್ರಾಣ ಉಳಿಸಲು ಜೋರಾಗಿ ಕಿರುಚಾಡಿದ್ದಾರೆ.
ಜನರ ಕಿರುಚಾಟಕ್ಕೆ ಬೆದರಿದ ಹೆಬ್ಬಾವು ಅಲ್ಲೆ ಪಕ್ಕದಲ್ಲಿದ್ದ ಕತ್ತಾಳೆ ಗಿಡ ಸೇರಿ ಅವಿತುಕೊಂಡಿದೆ. ಕೂಡಲೇ ಸ್ಥಳೀಯರು ತುಮಕೂರು ವರಂಗಲ್ ಫೌಂಡೇಶನ್ ವನ್ಯಜೀವಿ ಹಾಗೂ ಉರಗ ರಕ್ಷಣಾ ಸಂಸ್ಥೆಗೆ ಮಾಹಿತಿ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ದಿಲೀಪ್ ಸುಮಾರು ಸಮಯ ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಸೆರೆ ಹಿಡಿದು ಹೊರ ತಂದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದೆ.
ಇನ್ನು ಈ ಕಾರ್ಯಾಚರಣೆಯಲ್ಲಿ ಆರ್‌ಎಫ್‌ಓ ರವಿಕುಮಾರ್ ನೇತೃತ್ವದಲ್ಲಿ ಡಿ ಆರ್ ಎಫ್ ಓ ದಿಲೀಪ್ ,ರಘು,ಗುರುಕಿರಣ್,ಹನುಮಯ್ಯ, ರಂಜನ್, ಕಿರಣ್ ಭಾರಿ ಗಾತ್ರದ ಹಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಸ್ಥೆಯ ಕಾಂಟಾಕ್ಟ್ ನಂಬರ್ 9916790692