ಹುಬ್ಬಳ್ಳಿ: ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಕಾನ್ಸ್ಟೇಬಲ್ ಒಬ್ಬ ಅದೇ ಮಹಿಳೆಯ ಜೊತೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಾನಂದ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ ಹೆಸರೂರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ.ಚೇತನಾ ಕಾಲೇಜು ಬಳಿಯ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದ ವಿಜಯಲಕ್ಷ್ಮೀ ವಾಲಿ ಎಂಬಾಕೆಯ ಜೊತೆ ಅನೈತಿಕ ಸಂಬಂಧ ಬೆಳೆದಿತ್ತು.ಈ ವಿಷಯ ಮಹೇಶನ ಕುಟುಂಬದವರಿಗೆ ಜಗಳ ಆಗಿ ರಾಜಿ ಪಂಚಾಯತಿ ಕೂಡಾ ಆಗಿತ್ತು.

ಆತ್ಮಹತ್ಯೆ ಮಾಡಿಕೊಂಡ ಮಹೇಶ ವಿವಾಹಿತನಾಗಿದ್ದ ವಿಜಯಲಕ್ಷ್ಮೀ ಕೂಡಾ ವಿವಾಹ ಆಗಿದ್ದು ಎರಡು ಮಕ್ಕಳ ತಾಯಿಯಾಗಿದ್ದಳು.ಕಳೆದ 15 ದಿನಗಳ ಹಿಂದೆ ಶಿವಾನಂದ ನಗರದಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಂಡು ವಾಸವಿದ್ದರು. ಇಲ್ಲಿದ್ದ ಸ್ಥಳೀಯರು ಕೂಡಾ ಇವರನ್ನು ಗಂಡ ಹೆಂಡತಿ ಅಂತಾ ತಿಳಿದಿದ್ದರೂ.
ಇಂದು ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆ ಸ್ಥಳೀಯರು ಮನೆ ಕಿಡಕಿ ತೆಗೆದು ನೋಡಿದಾಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.ಘಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.