MAHARASTRA: ಮಹಾರಾಷ್ಟ್ರದಲ್ಲಿ ಭಾರಿ ಗಾಳಿಗೆ ನದಿಯಲ್ಲಿ ಮಗುಚಿದ ದೋಣಿ 06 ಜನ ನೀರು ಪಾಲು..!

ಬೆಳಗಾವಿ: ಮಹಾರಾಷ್ಟ್ರದಲ್ಲಿ ಭಾರಿ ಗಾಳಿ ಬೀಸಿ ದೋಣಿ ಮುಗುಚಿ ಭೀಕರ ಅವಘಡ ಸಂಭವಿಸಿದ್ದು ಒಂದು ವರ್ಷದ ಮಗು ಸೇರಿ 06ಜನ‌ ನೀರು ಪಾಲಾಗಿರುವ ಘಟನೆ
ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ನಡೆದಿದೆ.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಫಾಲಘರ್ ತಾಲೂಕಿನ ಕಲಾಶಿ ಬಳಿ ದೋಣಿ ಮುಗುಚಿ 06ಜನರು ನೀರು ಪಾಲಾಗಿದ್ದಾರೆ. ಉಜ್ಜನಿ ಜಲಾಶಯದ ಹಿನ್ನೀರಿನಲ್ಲಿ ಕುಟುಂಬಸ್ಥರು ದೋಣಿ ವಿಹಾರಕ್ಕೆ ತೆರಳಿದ್ದರು.ಭೀಮಾ ನದಿಗೆ ಅಡ್ಡಲಾಗಿ ಕಟ್ಟಿರುವ ಉಜ್ಜನಿ ಜಲಾಶಯದಲ್ಲಿ ಗೋಕುಳ ಜಾಧವ್(೩೦) ಕೋಮಲ್ ಜಾಧವ್(೨೬) ಶುಭ ಜಾಧವ್(೧) ಮಾಹಿ ಜಾಧವ್(೩) ನೀರು ಪಾಲಾಗಿದ್ದಾರೆ.

ಇನ್ನೂ ಅದೇ ದೋಣಿಯಲ್ಲಿ ಮತ್ತಿಬ್ಬರು ವಿಹಾರಿಗಳು ಸಹ ಪಯಣಿಸುತ್ತಿದ್ದು ಅವರೂ ನೀರು ಪಾಲಾಗಿದ್ದಾರೆ. ಕುಗ್ಗಾಂವ್ ಗ್ರಾಮದ ಅನುರಾಗ್ ಅವಘಡೆ, ಗೌರವ್ ಡೋಂಗರೆ ನೀರುಪಾಲುದವರು. ನೀರುಪಾಲಾಗಿರುವರ ಹುಡುಕಾಟಕ್ಕೆ ಎನ್ ಡಿ ಆರ್ ಎಫ್ ತಂಡದ ಸಿಬ್ಬಂದಿಗಳು ಆಗಮಿಸಿದ್ದು ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಎನ್ ಡಿ ಆರ್ ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಹುಡುಕಾಟ ಮುಂದುವರೆಸಿದ್ದಾರೆ

More News

You cannot copy content of this page