BBMP SCHOOL TEACHERS: ಶಿಕ್ಷಕರ ಸೇವೆ ಪೂರೈಸಲು ಸೆಕ್ಯೂರಿಟಿ ಏಜೆನ್ಸಿಗೆ ಗುತ್ತಿಗೆ

ಈ ಹಿಂದೆಯೂ ಈ ವಿಚಾರವನ್ನು ರಾಜ್ಯದ ಉಪಮುಖ್ಯಮಂತ್ರಿಗಳ ಗಮನಕ್ಕೆ ಹಾಗೂ ಬಿಬಿಎಂಪಿಯ ಮುಖ್ಯ ಆಯುಕ್ತರ ಗಮನಕ್ಕೆ ತಂದಿದ್ದೆ. ಆಗ ಅದನ್ನು ಪರಿಶೀಲಿಸುವುದಾಗಿ ಹೇಳಿ ಪ್ರಕ್ರಿಯೆಯನ್ನು ಸ್ಥಗಿತ ಸ್ಥಗಿತಗೊಳಿಸಲಾಯಿತು.

ಇದೀಗ ಮತ್ತೆ ಅದೇ ಹುಚ್ಚು ಅಥವಾ ಹಾಸ್ಯಾಸ್ಪದ ಪ್ರಯತ್ನ.

  • ಬಿಬಿಎಂಪಿ ಹೊರ ಗುತ್ತಿಗೆ ಶಿಕ್ಷಕರ ಸೇವಾ ಪೂರೈಕೆ ಮಾಡಲು 3 ಸೆಕ್ಯೂರಿಟಿ ಏಜೆನ್ಸಿ ಪರವಾನಗಿ.
  • ಶಿಕ್ಷಕರ ನೇಮಕಾತಿ ಮತ್ತು ಸೇವಾ ಪೂರೈಕೆ ಮಾಡಲು ಸೆಕ್ಯೂರಿಟಿ ಏಜೆನ್ಸಿ ಗುತ್ತಿಗೆ, ಎಂತಹ ಸ್ಥಿತಿ ತಲುಪಿತು ಶಿಕ್ಷಣ ಕ್ಷೇತ್ರ.
  • ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರ ಸೇವಾ ಪೂರೈಕೆ ಮಾಡಲು ಮೂರು ಸೆಕ್ಯೂರಿಟಿ ಏಜೆನ್ಸಿ ಗುತ್ತಿಗೆ ನೀಡಿದೆ.
  • ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳು ಸರ್ಕಾರಿ ಶಾಲೆ ಮತ್ತು ಬಿಬಿಎಂಪಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲು ಬರುತ್ತಾರೆ.
  • ಬಿಬಿಎಂಪಿ 700ಕ್ಕೂ ಹೆಚ್ಚು ಹೊರಗುತ್ತಿಗೆ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ.
  • ಹೊರಗುತ್ತಿಗೆ ಶಿಕ್ಷಕರ ಸರಬರಾಜು ಮಾಡಲು ಈ ಬಾರಿ ಮೂರು ಸೆಕ್ಯೂರಿಟಿ ಏಜೆನ್ಸಿರವರಿಗೆ ಗುತ್ತಿಗೆ.
  • ಭದ್ರತಾ ಸಿಬ್ಬಂದಿ ನೇಮಿಸುವ ಮೂರು ಸೆಕ್ಯೂರಿಟಿ ಏಜೆನ್ಸಿಗಳಿಗೆ ಯಾವ ಮಾನದಂಡ ಅನುಸಾರ ಗುತ್ತಿಗೆ ನೀಡಿದರು ಎಂಬುದು ಯಕ್ಷ ಪ್ರಶ್ನೆಯಾಗಿದೆ.
  • ಶಿಕ್ಷಕರು ನೇಮಿಸಿಕೊಳ್ಳಲು ಸೇವೆ ಒದಗಿಸಲು ಶಿಕ್ಷಣ ಕ್ಷೇತ್ರದ ಅರಿವು ಇರುವವರು ಮತ್ತು ನುರಿತ ಏಜೆನ್ಸಿರವರಿಗೆ ನೀಡಬೇಕು.
  • ಅದರೆ ಶಿಕ್ಷಕ ಸೇವಾ ಪೂರೈಕೆ ಮಾಡಲು ಸೆಕ್ಯೂರಿಟಿ ಏಜೆನ್ಸಿ ನೀಡಿರುವುದು ಬಿಬಿಎಂಪಿಯ ವಿಚಿತ್ರ ವೈಖರಿ.
  • ಈ ಹಿಂದೆ ಸೆಕ್ಯೂರಿಟಿ ಏಜೆನ್ಸಿಗೆ ಗುತ್ತಿಗೆ ನೀಡುವುದಿಲ್ಲ ಎಂದು ಹೇಳಿದ್ದರು. ಅದರೆ ಇಂದು ತರಾತುರಿಯಲ್ಲಿ ಅನುಮತಿ ನೀಡಿರುವುದು ಅಧಿಕಾರಿಗಳ ಬೇಜವಾದ್ದಾರಿ ಎದ್ದು ಕಾಣುತ್ತದೆ.
  • ಸೆಕ್ಯೂರಿಟಿ ಸರ್ವಿಸಸ್ ಸಂಸ್ಥೆಗಳು ಶಿಕ್ಷಕರ ಅರ್ಹತೆ ಮತ್ತು ಶಿಕ್ಷಕರು ಶಾಲೆಯಲ್ಲಿ ಪಾಠ ಮಾಡುವುದು ಮತ್ತು ನಡವಳಿಕೆ ಮಾಪನ ಮಾಡಲು ಸಾಧ್ಯವೇ?
  • ಈ ಹಿಂದೆ ರಾಜ್ಯ ಶಿಕ್ಷಣ ಇಲಾಖೆಯ ವತಿಯಿಂದ ಹೊರಗುತ್ತಿಗೆ ಮೇಲೆ ಶಿಕ್ಷಕರನ್ನ ನೇಮಿಸಿಕೊಳ್ಳಲಾಗುವುದು ಎಂದು ಹೇಳಿದ್ದರು ಅದರೆ ಅದು ನಡೆಯಲಿಲ್ಲ
  • ಸೆಕ್ಯೂರಿಟಿ ಏಜೆನ್ಸಿಗೂ ಶಿಕ್ಷಕರ ಸೇವಾ ಪೂರೈಕೆಗೆ ಎತ್ತಣ ಸಂಬಂಧ.
  • ರಸ್ತೆ ಕಾಮಗಾರಿ ಮಾಡಲು ಮತ್ತು ಕ್ರೀಡಾ ಸಲಕರಣೆ ಸರಬರಾಜು ಮಾಡಲು ನಿರ್ದಿಷ್ಟ ಗುತ್ತಿಗೆದಾರರಿಗೆ ನೀಡುತ್ತಾರೆ. ಅದರೆ ಶಿಕ್ಷಕರ ಸೇವಾ ಪೂರೈಕೆ ಮಾಡಲು ಸೆಕ್ಯೂರಿಟಿ ಏಜೆನ್ಸಿ ನೀಡಲು ಯಾವ ಮಾನದಂಡ ಉಪಯೋಗಿಸಿದರು ಎಂಬುದು ನಿಗೂಢವಾಗಿದೆ.
  • ಈ ಹಿಂದೆ ಗುತ್ತಿಗೆ ಪಡೆದ ಕ್ರಿಸ್ಟಲ್ ಸಂಸ್ಥೆಯಲ್ಲಿರುವ ಶಿಕ್ಷಕರನ್ನ ಮುಂದು ವರಿಸಲು ಹೊಸದಾಗಿ ಗುತ್ತಿಗೆ ಪಡೆದ ಸೆಕ್ಯೂರಿಟಿ ಅರ್ಜಿ ಆಹ್ವಾನ ಮಾಡಿದ್ದಾರೆ ಮತ್ತು ಹೊಸ ಶಿಕ್ಷಕರನ್ನ ನೇಮಿಸಿಕೊಳ್ಳಲು ಸೆಕ್ಯೂರಿಟಿ ಏಜೆನ್ಸಿಗಳಿಗೆ ಶಿಕ್ಷಣ ಕ್ಷೇತ್ರ ಕುರಿತು ಅನುಭವವಿರಬೇಕು ಈ ಏಜೆನ್ಸಿಗಳಿಗೆ ಇದ್ದೀಯ ಎಂದು ನೋಡಿಲ್ಲ.
  • ಶಾರ್ಪ್ ವಾಚ್ ಇನ್ ವೆಸ್ಟಿಂಗ್ ಸೆಕ್ಯೂರಿಟಿ ಸರ್ವಿಸಸ್ ಪ್ರೈ ಲಿಮಿಟಿಡ್ ಮೈಸೂರು ನಗರದಲ್ಲಿ ಕಛೇರಿ ಹೊಂದಿದೆ. ಶಿಕ್ಷಕರು ಇ.ಎಸ್.ಐ.ಮತ್ತು ಪಿ.ಎಫ್ ಏನಾದರು ಸಹಿ, ಸಮಸ್ಯೆ ಬಗೆಹರಿಸಲು ಮೈಸೂರಿಗೆ ಹೋಗುವ ಪರಿಸ್ಥಿತಿ ಬರುತ್ತದೆ ಇದು ಸಾಧ್ಯವೇ!

1)ದಕ್ಷಿಣ ವಲಯ ಮತ್ತು ಆರ್.ಆರ್
ನಗರ ವಲಯಕ್ಕೆ ಅಪ್ಪು ಡಿಟೆಕ್ಟಿವ್ ಆಂಡ್ ಸೆಕ್ಯೂರಿಟಿ ಸರ್ವೀಸ್.

2)ಪೂರ್ವ ವಲಯ ಡಿಟೆಕ್ಷವೆಲ್ ಅಂಡ್ ಸೆಕ್ಯೂರಿಟಿ ಸರ್ವಿಸಸ್ ಪ್ರೈ ಲಿ.

3)ಪಶ್ಚಿಮ ವಲಯ: ಶಾರ್ಪ್ ವಾಚ್ ಇನ್ ವೆಸ್ಟಿಂಗ್ ಸೆಕ್ಯೂರಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟಿಡ್

ಒಟ್ಟಿನಲ್ಲಿ ಶಿಕ್ಷಣ ಕ್ಷೇತ್ರವನ್ನೂ “ಗುತ್ತಿಗೆ” ಕೊಡ ಹೊರಟಿರುವ ಬಿಬಿಎಂಪಿ !

More News

You cannot copy content of this page