ಬೆಂಗಳೂರು:- ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ನಡೆಯಲಿರುವ ದೈವಾರ್ಷಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು (03-06-2024) 11 ಅಭ್ಯರ್ಥಿಗಳಿಂದ 26 ನಾಮಪತ್ರಗಳು ಸಲ್ಲಿಕೆಯಾಗಿದ್ದು, ನಾಮಪತ್ರ ಸಲ್ಲಿಕೆಯ ಆರಂಭದ ದಿನದಿಂದ ಒಟ್ಟು 12 ಅಭ್ಯರ್ಥಿಗಳಿಂದ ಒಟ್ಟು 27 ನಾಮಪತ್ರಗಳು ಸಲ್ಲಿಕೆಯಾಗಿವೆ.


ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಡಾ. ಯತೀಂದ್ರ.ಎಸ್ ಎರಡು ನಾಮಪತ್ರ, ಕೆ. ಗೋವಿಂದರಾಜು ಎರಡು ನಾಮಪತ್ರ, ಬಿಲ್ಕಿಸ್ ಬಾನೋ ಎರಡು ನಾಮಪತ್ರ, ಎನ್.ಎಸ್.ಭೋಸರಾಜು ಮೂರು ನಾಮಪತ್ರ, ಜಗದೇವ ಗುತ್ತೇದಾರ್ 1 ನಾಮಪತ್ರ, ಐವನ್ ಡಿಸೋಜಾ 3 ನಾಮಪತ್ರ ಹಾಗೂ ಎ.ವಸಂತ ಕುಮಾರ್ ಮೂರು ನಾಮಪತ್ರ ಸಲ್ಲಿಸಿದ್ದಾರೆ.

ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸಿ.ಟಿ.ರವಿ ಎರಡು ನಾಮಪತ್ರ, ಎನ್. ರವಿಕುಮಾರ್ ಎರಡು ನಾಮಪತ್ರ ಮತ್ತು
ಮುಳೆ ಮಾರುತಿರಾವ್ ಎರಡು ನಾಮಪತ್ರ ಹಾಗೂ ಜನತಾದಳ (ಜಾತ್ಯಾತೀತ) ಪಕ್ಷದ ಅಭ್ಯರ್ಥಿಯಾಗಿ ಟಿ.ಎನ್.ಜವರಾಯಿಗೌಡ ಮೂರು ನಾಮಪತ್ರ ಸಲ್ಲಿಸಿದ್ದಾರೆ.

ಮೇ 31 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಆಸಿಫ್ ಪಾಷಾ ಆರ್.ಎಂ ಅವರು ಒಂದು ನಾಮಪತ್ರ ಸಲ್ಲಿಸಿದ್ದರು.

ಜೂನ್ 4, 2024 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜೂನ್ 6, 2024 ರಂದು ಕೊನೆಯ ದಿನವಾಗಿದೆ.