ಬೆಂಗಳೂರು : ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಡಾ.ಮಂಜುನಾಥ್ ಹಾಗೂ ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭರ್ಜರಿ ಗೆಲುವು ಸಾಧಿಸಿದ್ದು ದೇವೇಗೌಡ ಕುಟುಂಬ ಹಾಗೂ ಡಿ ಕೆ ಸಹೋದರ ನಡುವಿನ ಕದನ ರಂಗೇರುವಂತೆ ಮಾಡಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಡಿಕೆ ಬ್ರದರ್ಸ್ ಮತ್ತು ದೇವೇಗೌಡರ ಕುಟುಂಬ ಎಂಬ ವಾತಾವರಣ ಇದಿದ್ದು ಹಳೆ ಮೈಸೂರು ರಾಜಕೀಯ ಗಮನ ಸೆಳೆದಿತ್ತು.ಕುಮಾರಸ್ವಾಮಿ ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಕೆಲವೇ ದಿನಗಳಲ್ಲಿ ರಾಜೀನಾಮೆ ಖಚಿತ ಆಗಿದೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಬಗ್ಗೆ ದೊಡ್ಡ ಚರ್ಚೆ ಪ್ರಾರಂಭ ಆಗಿದೆ.

ಈ ಪೈಕಿ ಲೋಕಸಭೆಯಲ್ಲಿ ಪರಾಜಯ ಹೊಂದಿದ ಡಿಕೆ ಸುರೇಶ್ ಕಾಂಗ್ರೆಸ್ ನಿಂದ ಅಭ್ಯರ್ಥಿ ಆಗುತ್ತಾರಾ ? ಎಂಬ ಚರ್ಚೆ ಮುನ್ನಲೆಗೆ ಬಂದಿದೆ. ಮತ್ತೊಂದು ಕಡೆ ಜೆಡಿಎಸ್ ಪಾಲಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಪುತ್ರ ನಿಖಿಲ್ ರನ್ನ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಮಾತುಕತೆ ಶುರುವಾಗಿದೆ. ಈ ಕಾರಣ ಲೋಕಸಭೆಯಲ್ಲಿ ಶುರುವಾಗಿದ್ದ ಗೌಡರ ಗದ್ದಲ ಇನ್ನೂ ಮುಂದುವರೆಯುವ ಲಕ್ಷಣ ಕಾಣಿಸುತ್ತಿದೆ.
ಮತ್ತೆ ಹಣಾಹಣಿಗೆ ದೇವೇಗೌಡರ ಕುಟುಂಬ ವರ್ಸಸ್ ಡಿಕೆ ಬ್ರದರ್ಸ್? ಕಾರ್ಯಕರ್ತರ ಜೋಶ್!:

ಲೋಕಸಭಾ ಚುನಾವಣೆ ನಂತರ ಮತ್ತೆ ಎರಡು ಕುಟುಂಬಗಳ ಪೈಪೋಟಿಗೆ ಸಾಕ್ಷಿಯಾಗುತ್ತಾ ಚನ್ನಪಟ್ಟಣ ಉಪ ಚುನಾವಣೆ ಕಣ? “ಅಭಿಮನ್ಯು” ವಿರುದ್ಧ ಕಣಕ್ಕೀಳಿಯಲು ಸುರೇಶ್ ಗೆ ಕಾರ್ಯಕರ್ತರ ಸಲಹೆ ನೀಡಿದ್ದು ಸೋತರೂ ವಿಚಲಿತರಾಗದ ಡಿಕೆ ಬ್ರದರ್ಸ್ ಕಣ್ಣು ಚನ್ನಪಟ್ಟಣ ಬೈ ಎಲೆಕ್ಷನ್ ಮೇಲೆ ಎಂಬ ಅಭಯ ಕೈ ಕಾರ್ಯಕರ್ತರಲ್ಲಿದೆ.
ಇತ್ತಾ ಜೆಡಿಎಸ್ ಕಾರ್ಯಕರ್ತರು ಕೋಲಾರ , ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಗೆಲುವು ಪಕ್ಷಕ್ಕೆ ಮರು ಜೀವ ತಂದಿದೆ ಎಂಬ ಲೆಕ್ಕಾಚಾರ ಹಾಕಿದ್ದಾರೆ. ಮತ್ತೆ ಪಕ್ಷ ಗಟ್ಟಿಯಾಗಿ ಬೆಳೆದಿರುವ ಜೊತೆಗೆ ಒಕ್ಕಲಿಗ ಮತ ದಳಕ್ಕೆ ಗಟ್ಟಿಯಾಗಿದೆ ಎಂದು ಅಂದಾಜಿಸಿದ್ದಾರೆ.ಇದಲ್ಲದೆ ಬಿಜೆಪಿಯ ಸಾಥ್ ಇದ್ದ ಸಂದರ್ಭದಲ್ಲಿ ನಿಖಿಲ್ ಗೆ ಗೆಲುವು ಸುಲಭ ಎಂಬ ಲೆಕ್ಕಾ ಎಷ್ಟು ನಿಜ ಆಗಲಿದೆ?ಚನ್ನಪಟ್ಟಣದಲ್ಲಿ ಮತ್ತೆ ಮುನ್ನಲೆಗೆ ಬರುತ್ತಾ ಮಹಾನಾಯಕ ಅಥವಾ ಮಣ್ಣಿನ ಮಗ? ಎಂಬ ಸ್ಲೋಗನ್ ಕಾದು ನೋಡಬೇಕಿದೆ.