SURAJ REVANNA CASE: ಹಣಕ್ಕಾಗಿ ಬ್ಲಾಕ್ ಮೇಲೆ ಆರೋಪ : ಸೂರಜ್ ರೇವಣ್ಣ ವಿರುದ್ಧ ದೂರು ಕೊಟ್ಟವನ ವಿರುದ್ಧವೇ ದೂರು

ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್ ಡ್ರೈವ್ ಪ್ರಕರಣ ಇನ್ನು ಕಂಡಿಲ್ಲ, ಇಡೀ ಕುಟುಂಬವೇ ಪ್ರಜ್ವಲ್ ಕೇಸ್ ನಲ್ಲಿ ತಲೆಕೆಡಿಸಿಕೊಂಡಿದೆ. ಪ್ರಜ್ವಲ್ ಸಹೋದರ ಸೂರಜ್ ರೇವಣ್ಣ ವಿರುದ್ಧ ಕೂಡ ಲೈಂಗಿಕ ಆರೋಪ ಕೇಳಿಬಂದಿದೆ.

ಜೆಡಿಎಸ್ ಕಾರ್ಯಕರ್ತನೊಬ್ಬ ದೂರು ನೀಡಿದ್ದು, ಸೂರಜ್ ರೇವಣ್ಣ ನನ್ನ ಮೇಲೆ ಸಲಿಂಗ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾನೆ. ಅದಕ್ಕೆ ಪ್ರತಿಯಾಗಿ ಸಂತ್ರಸ್ತನ ವಿರುದ್ಧವೇ ಕೇಸ್ ದಾಖಲಾಗಿದೆ..
ಸೂರಜ್ ವಿರುದ್ಧ ಬೆಂಗಳೂರಲ್ಲಿ ದೂರು ನೀಡಿದ್ದ ಸಂತ್ರಸ್ತನ ವಿರುದ್ಧವೇ ಕೇಸ್ ದಾಖಲಿಸಲಾಗಿದ್ದು, ಸುಳ್ಳು ಆರೋಪ ಮಾಡಿ ಹಣಕ್ಕಾಗಿ ಪೀಡಿಸಿದ ಆರೋಪದಲ್ಲಿ ಎಫ್ ಐಆರ್ ದಾಖಲಾಗಿದೆ.

ಸೂರಜ್ ಆಪ್ತ ಶಿವಕುಮಾರ್ ಹೊಳೆನರಸೀಪುರದ ಠಾಣೆಯಲ್ಲಿ ದೂರು ನೀಡಿದ್ದಾರೆ.. 5 ಕೋಟಿ ರೂಪಾಯಿ ಹಣ ನೀಡದಿದ್ದರೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದ ಆರೋಪ ದೂರು ಕೊಡಲಾಗಿದೆ. ಸುಳ್ಳು ದೂರು ನೀಡಿ ಬೆದರಿಕೆ ಹಾಕಿರೋ ಬಗ್ಗೆ ಉಲ್ಲೇಖಿಸಿ ದೂರು ಕೊಡಲಾಗಿದ್ದು, ಐಪಿಸಿ ಸೆಕ್ಷನ್ 384, 506 ರ ಅಡಿಯಲ್ಲಿ 168/2024 ರಡಿ ಕೇಸ್ ದಾಖಲಿಸಲಾಗಿದೆ.

ನಿಮ್ಮ ಬಾಸ್ ಬಳಿ ಕೆಲಸ ಕೊಡಿಸು ಎಂದು ಅರಕಲಗೂಡು ಮೂಲದ ಯುವ ಹೇಳಿಕೊಂಡಿದ್ದ, ನೈನ್ ಹೋಗಿ ಬಾಸ್ ನ ಭೇಟಿ ಮಾಡು ಎಂದು ಫೋನ್ ನಂಬರ್ ಕೊಟ್ಟಿದ್ದೆ ಎಂದು ಶಿವಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ..

More News

You cannot copy content of this page