Search

BJP PROTEST: ಇಂದು ರಾಜ್ಯಾದ್ಯಂತ ಬಿಜೆಪಿ ಹೋರಾಟ ಹಮ್ಮಿಕೊಂಡಿದೆ: ವಿಜಯೇಂದ್ರ

ವಾಲ್ಮೀಕಿ ‌ನಿಗಮದಲ್ಲಿ ಭ್ರಷ್ಟಾಚಾರ ನಡೆದಿದ್ದು ಹೋರಾಟ ಮುಂದುವರಿಸುತ್ತೆವೆ. ನಾಗೇಂದ್ರ ‌ರಾಜೀನಾಮೆ ಕೊಟ್ಟಿದ್ದಾರೆ ಸರಿ. ಆದ್ರೆ ಪ್ರಕರಣ ಇಲ್ಲಿಗೆ ಮುಗಿದಿಲ್ಲ. ಅಧಿಕಾರಿ ಮೇಲೆ ಆರೋಪ ಹಾಕಿ ತೇಪೆ ಹಾಕಲು‌ ಸಿಎಂ ಹೊರಟಿದ್ದಾರೆ. ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದೇವೆ. ಬೆಲೆ ಏರಿಕೆಯಿಂದ ರೈತರಿಗೆ ಸಂಕಷ್ಟ ಹೆಚ್ಚಿದೆ. ಪೆಟ್ರೋಲ್ ,ಹಾಲಿನ ಬೆಲೆ ಎಲ್ಲಾ ಹೆಚ್ಚಾಗಿದೆ. ಡಿಕೆ ಶಿವಕುಮಾರ್ ಬಲಿ‌ ಹಾಕಬೇಕು ಅಂತ ಡಿಸಿಎಂ ಹುದ್ದೆಗಳ ಹೆಚ್ಚಳ ವಿಚಾರ ತಂದ್ರು ಈಗ ಸಿದ್ದರಾಮಯ್ಯ ಬುಡಕ್ಕೆ ಬಂದಿದೆಯಲ್ವಾ?. ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿರ್ತಾರೋ ಗೊತ್ತಿಲ್ಲ. ಬೆಲೆ ಏರಿಕೆ ಬಗ್ಗೆ ಮಾತಾಡಿದ್ರೆ ಉಡಾಫೆ ಮಾತಾಡ್ತಾರೆ. ಕಾಂಗ್ರೆಸ್ ವಿರುದ್ದ ಜನ ಬೇಸತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ವಿಶ್ವಾಸ ಕಡಿಮೆಯಾಗುತ್ತಿದೆ. ನಾಳೆ ಹಾಲಿನ ದರ ಏರಿಕೆ ಬಗ್ಗೆ ರೈತ ಮೋರ್ಚಾ ಹೋರಾಟ ಮಾಡ್ತಿದೆ.

*ನಾಗೇಂದ್ರ ಆಪ್ತರ ಬೆದರಿಕೆ ಬಗ್ಗೆ ಆರೋಪಿ ಸತ್ಯನಾರಾಯಣ ವರ್ಮಾ ಕೋರ್ಟ್‌ನಲ್ಲಿ ಹೇಳಿಕೆ ಕೊಟ್ಟ ವಿಚಾರ

ಸತ್ಯನಾರಾಯಣ ವರ್ಮಾ ಅವ್ರು ಬಹಳ ಗಂಭೀರವಾದ ಆರೋಪ ಮಾಡಿದ್ದಾರೆ. ಆದರೆ ಇವತ್ತಿನವರೆಗೂ ನಾಗೇಂದ್ರ ರನ್ನು ಕರೆದು ಎಸ್ಐಟಿ ವಿಚಾರಣೆ ಮಾಡುವ ಧೈರ್ಯ ತೋರಿಸಿಲ್ಲ. ನಿನ್ನೆ ಕೋರ್ಟ್ ಕೂಡ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಒಂದೇ ವರ್ಷದಲ್ಲಿ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ನಿನ್ನೆ ಸ್ವಾಮೀಜಿ ಗಳು ಹೇಳಿಕೆ ಕೊಟ್ಟಿದ್ದಾರೆ. ಅದಕ್ಕೆ ಪ್ರತ್ಯುತ್ತರ ವಾಗಿ ಸಚಿವ ರಾಜಣ್ಣ ಅವರು ಉತ್ತರ ಕೊಟ್ಟಿದ್ದಾರೆ .ಜನರ ಪಾಲಿಗೆ ಸರ್ಕಾರ ಬದುಕಿದೆಯಾ ಎಂಬ ಪ್ರಶ್ನೆ ಯನ್ನು ಜನರು ಮಾಡ್ತಿದ್ದಾರೆ. ಲೋಕಸಭಾ ಚುನಾವಣೆಗೂ ಮುಂಚೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಒಟ್ಟಿಗೆ ಕಾಣೋದು ಏನು..?, ಇಬ್ಬರು ಪರಸ್ಪರ ತಿಂಡಿ ತಿನ್ನಿಸೋದು ಏನು..?  ಹೆಗಲ ಮೇಲೆ ಕೈ ಹಾಕೋದು ಏನು..?

ನೋಡಿ ಈಗ ಒಬ್ಬರಿಗೊಬ್ಬರು ಬುಡ ಕುಯ್ದುಕೊಳ್ಳುವ ಕೆಲಸ ಮಾಡ್ಕೊಳ್ತಿದ್ದಾರೆ. ರಸ್ತೆಯಲ್ಲಿ ನಿಂತುಕೊಂಡು. ಹೊಡೆದಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಬರುವ ದಿನಗಳಲ್ಲಿ ಇನ್ನೂ ಏನೇನು ಆಗುತ್ತೆ ಕಾರಣ. ನಾವು ಒಪ್ಕೊಳ್ತೇವೆ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ಆದರೆ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಸ್ಐಟಿ ಮಾಜಿ ಮಂತ್ರಿ ಯನ್ನು ನೋಟಿಸ್ ಕೊಟ್ಟು ತನಿಖೆ ಮಾಡುತ್ತಿಲ್ಲ. ತೇಪೆ ಹಚ್ಚಿ ಸರ್ಕಾರವನ್ನು ಬಚಾವ್ ಮಾಡಲು ಅಧಿಕಾರಿಗಳು ಮಾಡಿದ್ದಾರೆ. ಇವತ್ತು ಅದಕ್ಕಾಗಿ ನಮ್ಮ ಕಾರ್ಯಕರ್ತರು ಎಲ್ಲಾ ಕಡೆ ಪ್ರತಿಭಟನೆ ಮಾಡ್ತಿದ್ದಾರೆ
ಇದರ ಜೊತೆಗೆ ಹಾಸ್ಯಾಸ್ಪದ ಅಂದರೆ ಮೂರು ಡಿಸಿಎಂ ಚರ್ಚೆ ನಡೀತಿದೆ. ಡಿಕೆ ಶಿವಕುಮಾರ್ ರನ್ನು ಬಲಿಯಾಗಬೇಕು ಎಂದು ಸಿಎಂ ಡಿಸಿಎಂ ಸಚಿವರ ಮೂಲಕ ಎತ್ತಿಸಿದ್ದಾರೆ. ಆದರೆ ರಾಜ್ಯದ ಜನರ ಅಭಿವೃದ್ಧಿ ಸಮಸ್ಯೆ ಕೇಳಬೇಕಲ್ಲ
ನಾವು ಇದನ್ನ ಕೇಳಿದ್ರೆ ಸಿಎಂ ಉಢಾಫೆ ಉತ್ತರ ಕೊಡ್ತಿದ್ದಾರೆ. ಈ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರು ವಿಶ್ವಾಸ ಕಳೆದುಕೊಳ್ತಿದ್ದಾರೆ. ಹಾದಿ ಬೀದಿಯಲ್ಲಿ ಸಿಎಂ, ಡಿಸಿಎಂ ಸಚಿವರು ಹೊಡೆದಾಡಿಕೊಳ್ತಿದ್ದಾರೆ. ಹೀಗಾಗಿ ನಮ್ಮ ಮುಂದೆ ಇರೋದು ಹೋರಾಟದ ದಿನಗಳು. ಮುಂದೆ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡ್ತೀವಿ

ಚನ್ನಪಟ್ಟಣದಿಂದ ತಮ್ಮ‌ ಕುಟುಂಬದವರ ಸ್ಪರ್ಧೆ ಇಲ್ಲ ಎಂಬ ಡಿಕೆಶಿ ಟ್ವೀಟ್ ವಿಚಾರ

ಚನ್ನಪಟ್ಟಣದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು ಆಗ್ತಾರೆ ಎಂಬುದು ನಮಗೆ ಮುಖ್ಯ ಅಲ್ಲ. ಅವರಿಂದ ಯಾರೇ ಅಭ್ಯರ್ಥಿ ಗಳು ಆದರೂ, ಜೆಡಿಎಸ್ ನಾವು ಒಟ್ಟಾಗಿ ಚುನಾವಣೆ ಎದುರಿಸಿ ಗೆಲ್ತೇವೆ. ಬೆಂ.ಗ್ರಾಮಾಂತರದಲ್ಲಿ ಏನು ಫಲಿತಾಂಶ ಬಂದಿದೆ ಎಂದು ಗೊತ್ತಿದೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಎಲ್ಲವನ್ನೂ ಗೆಲ್ತೇವೆ

ನಾವು ಶೀಘ್ರದಲ್ಲೇ ಕೋರ್ ಕಮಿಟಿ ಯನ್ನು ಕರೆಯುತ್ತಿದ್ದೇವೆ. ಅಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು ಸರ್ಕಾರದ ವಿರುದ್ಧ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇವೆ ಅಂತ ಹೇಳಿದರು

More News

You cannot copy content of this page