Search

Virat Kohli Announced Retirement From T20I Cricket: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ವಿರಾಟ್​​ ಕೊಹ್ಲಿ

ಬೆಂಗಳೂರು: ಆಧುನಿಕ ಯುಗದ ಅತ್ಯಂತ ಪ್ರಭಾವಿ ಕ್ರಿಕೆಟಿಗ, ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್​ ಕೊಹ್ಲಿ (Virat Kohli) ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ಟಿ20 ವಿಶ್ವ ಕಪ್​ನ ಫೈನಲ್​​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ ಬಾರಿಸಿ ಗೆಲುವಿನ ಸೂತ್ರಧಾರ ಎನಿಸಿಕೊಳ್ಳುವ ಜತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಅವರು ಈ ಘೋಷಣೆಯನ್ನು ಮಾಡಿದರು. ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಬಳಿಕ ಮಾತನಾಡಿದ ಅವರು ಇದು ನನ್ನ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯ ಹಾಗೂ ಕೊನೇ ಟಿ20 ವಿಶ್ವ ಕಪ್ ಎಂದು ಹೇಳಿದರು. ಈ ಮೂಲಕ ಅವರು ದೀರ್ಘ ಕಾಲದ ಟಿ20 ಅಂತಾರಾಷ್ಟ್ರೀಯ ಅಭಿಯಾನವನ್ನು ಕೊನೆಗೊಳಿಸಿದ್ದಾರೆ.

ವಿರಾಟ್​ ಕೊಹ್ಲಿ ಕೇವಲ ಟಿ20 ಮಾತ್ರ ಎಂದು ಹೇಳಿರುವ ಕಾರಣ ಅವರು ಏಕ ದಿನ ಹಾಗೂ ಟೆಸ್ಟ್​ ಪಂದ್ಯಗಳಲ್ಲಿ ಆಡಲಿದ್ದಾರೆ. ಅದೇ ರೀತಿ ಅವರು ಅತಿ ಹೆಚ್ಚು ಆರಾಧಿಸಲ್ಪಡುವ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ತಮ್ಮ ಸೇವೆ ಮುಂದುವರಿಸಲಿದ್ದಾರೆ.

ಇದು ನನ್ನ ಕೊನೇ ಟಿ20 ಅಂತಾರಾಷ್ಟ್ರಿಯ ಪಂದ್ಯ. ಅದೇ ರೀತಿ ನನ್ನ ಟಿ20 ಅಂತಾರಾಷ್ಟ್ರೀಯ ಪಂದ್ಯ. ಇದು ಎಲ್ಲರಿಗೂ ಗೊತ್ತಿದ್ದ ಗುಟ್ಟಾಗಿತ್ತು. ನಾನು ಈ ಪಂದ್ಯದಲ್ಲಿ ಸೋತು ಟ್ರೋಫಿ ಗೆಲ್ಲದೇ ಹೋಗಿದ್ದರೂ ಕೊನೇ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಆದರೆ ಈ ಗೆದ್ದಿದ್ದೇನೆ . ಈ ಸಂತೋಷಕ್ಕೆ ಪಾರವೇ ಇಲ್ಲ. ಹೊಸ ಪೀಳಿಗೆಯ ಆಟಗಾರರಿಗೆ ನಾನು ಸ್ಥಳಾವಕಾಶ ಮಾಡಿಕೊಡಲೇಬೇಕು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇದು ನನ್ನ ಕೊನೆಯ ಟಿ 20 ವಿಶ್ವಕಪ್, ಇದನ್ನು ನಾವು ಸಾಧಿಸಲು ಬಯಸಿದ್ದೆವು. ದೇವರು ದೊಡ್ಡವನು. ಕೇವಲ ಭಾರತಕ್ಕಾಗಿ ಆಡುವ ನನ್ನ ಕೊನೆಯ ಟಿ 20 ಪಂದ್ಯವಾಗಿತ್ತು. ನಾವು ಆ ಕಪ್ ಅನ್ನು ಎತ್ತಲು ಬಯಸಿದ್ದೆವು. ಹೌದು, ಇದು ಬಹಿರಂಗ ರಹಸ್ಯವಾಗಿತ್ತು ಎಂದು ಕೊಹ್ಲಿ ಹೇಳಿದ್ದಾರೆ.

ನಾವು ಸೋತರೂ ನಾನು ಅದನ್ನು ಘೋಷಿಸಲು ಹೋಗುತ್ತಿರಲಿಲ್ಲ. ಮುಂದಿನ ಪೀಳಿಗೆಯು ಟಿ 20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ. ಐಸಿಸಿ ಪಂದ್ಯಾವಳಿಯನ್ನು ಗೆಲ್ಲಲು ಕಾಯುತ್ತಿರುವ ನಮಗೆ ಇದು ಬಹಳ ಸಮಯದ ಕಾಯುವಿಕೆಯಾಗಿತ್ತು. ನೀವು ರೋಹಿತ್ ಅವರನ್ನು ನೋಡಿ. ಅವರು 9 ಟಿ 20 ವಿಶ್ವಕಪ್​ಗಳನ್ನು ಆಡಿದ್ದಾರೆ ಮತ್ತು ಇದು ನನ್ನ ಆರನೇ ಪಂದ್ಯವಾಗಿದೆ. ಟ್ರೋಫಿಗೆ ಅವರು ಅರ್ಹರು. ಭಾವನೆಗಳನ್ನು ತಡೆಹಿಡಿಯುವುದು ಕಷ್ಟ ಎಂದು ನಾನು ಭಾವಿಸುತ್ತೇನೆ. ಇದು ಅದ್ಭುತ ದಿನ ಮತ್ತು ನಾನು ಕೃತಜ್ಞನಾಗಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.

ಕೊಹ್ಲಿಯ ಭರ್ಜರಿ ಬ್ಯಾಟಿಂಗ್​

ಫೈನಲ್ ಪಂದ್ಯದಲ್ಲ ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಆಧಾರವಾಗಿದ್ದರು. ಈ ಮೂಲಕ ಅವರು ಕೊನೇ ಪಂದ್ಯವನ್ನು ಸ್ಮರಣೀಯಗೊಳಿಸಿದರು. ಇಡೀ ಟೂರ್ನಿಯಲ್ಲಿ ವೈಫಲ್ಯ ಕಂಡಿದ್ದ ಅವರು ಫೈನಲ್​ನಲ್ಲಿ 59 ಎಸೆತಕ್ಕೆ 76 ರನ್ ಮಿಂಚಿದರು. ಅವರ ಕೊಡುಗೆಯಿಂದಾಗಿ ಭಾರತ 176 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು ಹಾಗೂ ಕೊನೇ ಹಂತದ ಬೌಲರ್​ಗಳ ಹೋರಾಟದಿಂದ ಗೆದ್ದಿತು.

More News

You cannot copy content of this page