ಹುಬ್ಬಳ್ಳಿ: ಮುಡಾ ಹಗರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ಆಗಿದೆ. ಇದು ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ಗಮನಕ್ಕೆ ಇದ್ದೆ ಆಗಿರುವ ಹಗರಣ. ಇದು ನಿರ್ಧಾರ ಆಗಿದ್ದು 2017ರಲ್ಲಿ. ಆದ್ರೆ 2014ರಿಂದ 2018ರಲ್ಲಿ ಇದರ ಪ್ರಮುಖ ಬೆಳವಣಿಗೆ ನಡೆದಿದೆ. ಏನು ಮಾಡಿಲ್ಲ ಅಂದರೆ ತರಾತುರಿಯಲ್ಲಿ ಜಿಲ್ಲಾಧಿಕಾರಿಯನ್ನು ಏಕೆ ವರ್ಗಾವಣೆ ಮಾಡಿದ್ದೀರಿ. ಸಿಎಂ ಸಿದ್ದರಾಮಯ್ಯ ಮತ್ತು ಅವರ ಮಗನ ಅನುಮತಿ ಇಲ್ಲದೆ ಇದು ನಡೆಯಲು ಸಾಧ್ಯವಿಲ್ಲ. ಸ್ವಂತಕ್ಕೆ ಲಾಭ ಮಾಡಿಕೊಳ್ಳಲು ದೊಡ್ಡ ಪ್ರಮಾಣದಲ್ಲಿ ನಡೆದ ಭ್ರಷ್ಟಾಚಾರವಾಗಿದೆ. ಹೀಗಾಗಿ ಪ್ರಕರಣದ ತನಿಖೆಗೆ ಸಿಬಿಐ ಗೆ ವಹಿಸಿಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸದಿದ್ದರೆ ಸಿಎಂ ಸಿದ್ದರಾಮಯ್ಯ ಅವರನ್ನು ಲೋಹಿಯಾ ವಾದಿ, ಸಮಾಜವಾದಿ ಅಂತ ಹೇಳಿಕೊಳ್ಳಲು ಅರ್ಹರಲ್ಲ. ಮುಡಾ ಮತ್ತು ಎಸ್,ಎಸ್ ಹಗರಣದಲ್ಲಿ ನೇರವಾಗಿ ಸಿಎಂ ಭಾಗಿಯಾಗಿದ್ದಾರೆ ಎನ್ನುವುದು ನನ್ನದು ಕೂಡ ಬಲವಾದ ಆರೋಪ. ಪ್ರಕರಣ ಮುಚ್ಚಿ ಹಾಕಲು ತರಾತುರಿಯಲ್ಲಿ ಅವರನ್ನು ಎಸ್ಐಟಿ ಬಂಧನ ಮಾಡಲಾಗುತ್ತಿದೆ. ಇಷ್ಟು ದಿನ ನಾಗೇಂದ್ರ ತಪ್ಪಿಸಿಕೊಳ್ಳಲು ಅವಕಾಶ ನೀಡಿ ಈಗ ನೋಟಿಸ್ ನೀಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಅತ್ಯಂತ ಭ್ರಷ್ಟಾಚಾರದ ಸರ್ಕಾರ. ಭ್ರಷ್ಟಾಚಾರ ನಡೆಸಲು ಹೊಸ ಹೊಸ ಮಾರ್ಗ ಕಂಡುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯತ್ತ ಸಾಗುತ್ತಿದೆ. ಇದರಲ್ಲೂ ಭ್ರಷ್ಟಾಚಾರ ಹೇಗೆ ಮಾಡಬೇಕು ಅಂತ ಸಿಎಂ ಗೆ ಗೊತ್ತು ಎಂದು ವಾಗ್ದಾಳಿ ನಡೆಸಿದರು.
ಇನ್ನು ಬಣವೆಗೆ ಬೆಂಕಿ ಹತ್ತಿದಾಗ ಅದರಲ್ಲಿ ಬಿಡಿ ಅಥವಾ ಸಿಗರೇಟ್ ಹೇಗೆ ಹಚ್ಚಬೇಕು ಎನ್ನುವುದು ಸಿದ್ದರಾಮಯ್ಯ ಅವರಿ ಚೆನ್ನಾಗಿ ಗೊತ್ತು. ತಮ್ಮ ಕೊನೆಯ ಅವಧಿ ಅಂತ ತಿಳಿದು ಭ್ರಷ್ಟಾಚಾರದ ಪರಮಾವಧಿಗೆ ಸಿದ್ದರಾಮಯ್ಯ ತಲುಪುತ್ತಿದ್ದಾರೆ. ಡಿಸಿ ವರ್ಗಾವಣೆ ಮಾಡಿದ್ದು ಭ್ರಷ್ಟಾಚಾರಕ್ಕೆ ಸಾಕ್ಷಿ. ಸಿದ್ದರಾಮಯ್ಯ ಪರಿಹಾರ ಕಾನೂನು ಪ್ರಕಾರ ತೆಗೆದುಕೊಳ್ಳಬೇಕಿತ್ತು. ಸಿಬಿಐ ಬಗ್ಗೆ ಸಿದ್ದರಾಮಯ್ಯ ಅವರಿಗೆ ಅಷ್ಟು ಭಯ ಯಾಕೆ. ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಿದ್ದು ಇದೆ ಮೊದಲಲ್ಲ. ಸಿದ್ದರಾಮಯ್ಯ ಅವರು ಈ ಹಿಂದೆಯೂ ಡಿನೋಟಿಫಿಕೇಷನ್ ಮಾಡಿದ್ದರು. ಆದರೆ ಅದರಿಂದ ಅವರು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದರು.