ಕುಖ್ಯಾತ ಕಳ್ಳನನ್ನು ಫಿಲ್ಮ್ ಸ್ಟೈಲ್ ನಲ್ಲಿ ಬಂಧನ: ಜೀವ ಪಣಕ್ಕಿಟ್ಟು ಪೈರಿಂಗ್ ಮಾಡಿದ ಪಿಎಸ್ಐ

ಹುಬ್ಬಳ್ಳಿ:ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಪೊಲೀಸರು ಈಗ ಸಾಕಷ್ಟು ಆ್ಯಕ್ಟಿವ್ ಆಗಿದ್ದು, ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ‌. ಅಂತರ ರಾಜ್ಯ ಕುಖ್ಯಾತ ದರೋಡೆಕೋರ ಫರಾನ್ ಶೇಖ್ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಯತ್ನಿಸಿರುವ ಘಟನೆ ನಡೆದಿದೆ.

ಹೌದು.. ಬಂಧನದ ವೇಳೆಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದ ರೌಡಿ ಫರಾನ್ ಮೇಲೆ‌ ಸಬ್ ಇನ್ಸ್ಪೆಕ್ಟರ್ ಕವಿತಾ ಮಾಡಗ್ಯಾಳ ಪೈರಿಂಗ್ ಮಾಡಿ ಬಂಧಿಸಿದ್ದಾರೆ. ಗಾಯಳು ಫರಾನ್ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಚಿನ್ನದ ಅಂಗಡಿ ದರೋಡೆ ಪ್ರಕರಣದಲ್ಲಿ ಬಂಧಿಸಲು ತೆರಳಿದ್ದ ಹುಬ್ಬಳ್ಳಿ ಪೊಲೀಸರು, ಕರ್ನಾಟಕ ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಿಗೆ ಬೇಕಾಗಿದ್ದ ಫರಾನ್ ಶೇಖ್ ನನ್ನು ಫಿಲ್ಮ್ ಸ್ಟೈಲ್ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದಿದ್ದು, ಫರಾನ್ ಶೇಖ್ ವಿರುದ್ಧ ಒಟ್ಟು 15 ಪ್ರಕರಣಗಳಿವೆ.‌ಹೈದರಾಬಾದ್ ಮೂಲದ ಫರಾನ್ ಶೇಖ್ ಕೊಲೆ, ದರೋಡೆ, ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

More News

You cannot copy content of this page