KH MUNIYAPPA: ಒಳಮೀಸಲಾತಿ ಕುರಿತು ಸರ್ವೋಚ್ಛ ನ್ಯಾಯಾಲಯದಿಂದ ಐತಿಹಾಸಿಕ ತೀರ್ಪುನ್ನು ಸ್ವಾಗತಿಸುತ್ತೇವೆ: ಆಹಾರ ಸಚಿವ: ಕೆ ಹೆಚ್. ಮುನಿಯಪ್ಪ

ಬೆಂಗಳೂರು: ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಒಳಮೀಸಲಾತಿ ನೀಡಲು ರಾಜ್ಯಗಳಿಗೆ ಸಂವಿಧಾನಾತ್ಮಕವಾಗಿ ಅಧಿಕಾರ ಇದೆ ಎಂದು ದಿನಾಂಕ: 01-08-2024ರಂದು ಸರ್ವೋಚ್ಛ ನ್ಯಾಯಾಲಯದ 7 ನ್ಯಾಯಾಧೀಶರ ಸಂವಿಧಾನ ಪೀಠ ಮಹತ್ವದ ಮತ್ತು ಐತಿಹಾಸಿಕ ತೀರ್ಪನ್ನು ನೀಡಿದೆ.

ಶೋಷಿತ ಸಮುದಾಯಗಳು ಮೀಸಲಾತಿ ಪ್ರಯೋಜನದಿಂದ ಮೀಸಲಾತಿ ಇರುವ ಜಾತಿಗಳಲ್ಲಿ ಅಸಮಾನತೆಗೆ ಒಳಗಾದವರಿಗೆ ಸಮಾನತೆ ಸಿಗಬೇಕೆಂದರೆ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಬೇಕು ಎನ್ನುವ 3 ದಶಕಗಳ ಬೇಡಿಕೆಗೆ ದಿನಾಂಕ: 01-08-2024ರಂದು ಸರ್ವೋಚ್ಛ ನ್ಯಾಯಾಲಯದ 7 ನ್ಯಾಯಾಧೀಶರ ಸಂವಿಧಾನ ಪೀಠ ಈ ಸಮುದಾಯಗಳಿಗೆ ನ್ಯಾಯ ದೊರಕಿಸುವ ಮಹತ್ವದ ತೀರ್ಪನ್ನು ನೀಡಿದೆ.

“ಪರಿಶಿಷ್ಟ ಜಾತಿಗಳು ಏಕರೂಪಿ ಸಮುದಾಯ ಅಲ್ಲ ಎಂದು ಐತಿಹಾಸಿಕ ಹಾಗೂ ಅನುಭವಕ್ಕೆ ಸಾಕ್ಷ್ಯ ಹೇಳುತ್ತವೆ. ಹೀಗಾಗಿ ರಾಜ್ಯಗಳು ಸಂವಿಧಾನದ 15(4), 16(4)ನೇಯ ವಿಧಿಯಡಿಯಲ್ಲಿ ಅಧಿಕಾರವನ್ನು ಬಳಸಿ, ರಾಜ್ಯಗಳು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಬಹುದು ಎಂದು ನೀಡಿರುವ ತೀರ್ಪು ನಮ್ಮ ತಳಸಮುದಾಯದ ಹಲವು ವರ್ಷಗಳ ಬೇಡಿಕೆಗೆ ನ್ಯಾಯ ಸಿಕ್ಕಿರುವುದನ್ನು ನಮ್ಮ ಸರ್ಕಾರ ಸ್ವಾಗತಿಸುತ್ತದೆ.
ಈ ನಿರ್ಣಯದಲ್ಲಿ ಸರ್ವೋಚ್ಛ ನ್ಯಾಯಾಲಯವು ಹಿಂದುಳಿದ ವರ್ಗಗಳಿಗೆ ಸಮಾನ ಪ್ರಾತ್ಯನಿಧ್ಯ ಹಾಗೂ ಅವಕಾಶ ಒದಗಿಸಲು ಒಳ ಮೀಸಲಾತಿಯ ಅವಶ್ಯಕತೆಯನ್ನು ಎತ್ತಿಹಿಡಿದಿದೆ.

ಸುಪ್ರೀಂ ಕೋರ್ಟಿನ ಈ ತೀರ್ಪಿನಿಂದಾಗಿ ಒಳಮೀಸಲಾತಿ ಅನುಷ್ಠಾನಕ್ಕೆ ಹಿಂದಿನ ಇ.ವಿ. ಚಿನ್ನಯ್ಯ ನಿರ್ಣಯದಿಂದ ಉಂಟಾದ ತೊಡಕು ನಿವಾರಣೆಯಾಗಿದೆ.

The holding in Chinnaiah (supra) that sub-classification of the Scheduled Castes in impermissible is overruled. The scope of sub-classification of the Scheduled Castes is summarized below:-

The objective of any form of affirmative action including sub-classification is to provide substantive quality of opportunity for the backward classes. The State can sub-classify, inter alia, based on inadequate representation of certain castes. However, the State must establish that the inadequacy of representation of caste/ group is because of its backwardness:

2023ನೇ ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಾಣಾಳಿಕೆಯಲ್ಲಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಲು ಭರವಸೆ ನೀಡಲಾಗಿತ್ತು. ಅದರಂತೆ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ರವರ ನೇತೃತ್ವ ನಮ್ಮ ಸರ್ಕಾರವು ಒಳಮೀಸಲಾತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
ಮಾನ್ಯ ಮುಖ್ಯಮಂತ್ರಿಗಳು ಶ್ರೀ ಸಿದ್ಧರಾಮಯ್ಯರವರು ಈ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿದ್ದಾರೆ ಹಾಗೂ ಒಳಮೀಸಲಾತಿ ಕಲ್ಪಿಸುವ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಶಿಫಾರಸ್ಸುಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ, ಇತ್ತಿಚೀನ ಬೆಳವಣಿಗೆಗಳನ್ನು ಪರಿಗಣನಿಗೆ ತೆಗೆದುಕೊಂಡು ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ, ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿ ಬಡವರ, ತುಳಿಕ್ಕೆ ಒಳಗಾದವರ ಅಸಹಕಾರ ಧ್ವನಿ ಇಲ್ಲದವರ ಪರವಾಗಿ ತನ್ನ ಸಿದ್ಧಾಂತ ಮತ್ತು ಬದ್ಧತೆಯನ್ನು ಅನುಷ್ಠಾನ ಮಾಡುತ್ತಾ ಬಂದಿದೆ. ನಾವು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆರ್ಥಿಕವಾಗಿ, ಸಾಮಾಜಿಕವಾಗಿ ಸಧೃಡವಾಗಿ ಬದುಕಲು ಅವಕಾಶ ಕಲ್ಪಿಸಿದ್ದೇವೆ.

ಈ ವಿಷಯದ ಕುರಿತು ಬೇಗನೆ ಆದರಣೀಯ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳ ಹಾಗೂ ಸಂಪುಟದ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ, ಶೀಘ್ರದಲ್ಲಿಯೇ ನಮ್ಮ ಸರ್ಕಾರ ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಪರಿಶಿಷ್ಟ ಜಾತಿ ಸಮುದಾಯದಕ್ಕೆ ಒಳಮೀಸಲಾತಿ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ಈ ಸಂದರ್ಭದಲ್ಲಿ ಅಬಕಾರಿ ಸಚಿವರಾದ ಆರ್ ಬಿ.ತಿಮ್ಮಾಪುರ, ಮಾಜಿ ಸಚಿವರಾದ ಹೆಚ್ ಆಂಜನೇಯ, ಮಾಜಿ ಸಂಸದರಾದ ಎಲ್ ಹನುಮಂತಯ್ಯ, ಚಂದ್ರಪ್ಪ,ಶಾಸಕ ಬಸವಂತಪ್ಪ,ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ,ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

More News

You cannot copy content of this page