HUBBALLI GANJA CASE: ಗಾಂಜಾ ವಿರುದ್ಧ ಸಮರಕ್ಕೆ ಸಿಕ್ಕ ಮತ್ತೊಂದು ಜಯ: ಗಾಂಜಾ ಪೆಡ್ಲರ್ ಗಳ ಬಂಧನ

ಹುಬ್ಬಳ್ಳಿ: ಗಾಂಜಾ ಮುಕ್ತ ಹುಧಾ ಅವಳಿನಗರಕ್ಕೆ ಪಣ ತೊಟ್ಟಿರುವ ಪೊಲೀಸ್‌ ಕಮೀಷನರೇಟ್ ಮತ್ತೊಂದು ಕಾರ್ಯಾಚರಣೆಯನ್ನು ಬೇಧಿಸಿದೆ. ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿ, 2.50ಲಕ್ಷ ರೂ. ಮೌಲ್ಯದ 2.5 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಓಡಿಸ್ಸಾ ಮೂಲದ ಕೇಶಬಚಂದ್ರ ನೀಲಾಂಬರ ರಾವುತ್, ಉತ್ತರಖಂಡದ ಮಹ್ಮದಲಿ, ಹಾವೇರಿಯ ತೌಸಿಫ್ ಅಹ್ಮದ್, ಹುಬ್ಬಳ್ಳಿಯ ಪವನ, ಸಿದ್ದಾರ್ಥ, ಮಂಜುನಾಥ, ನದೀಂ, ವಿಠಲ, ಶಾನವಾಜ, ಗಣಪತಸಾ, ಕಾರ್ತಿಕ ಸೇರಿ 12 ಜನರನ್ನು ಬಂಧಿಸಲಾಗಿದೆ. ಅವರಿಂದ 5ಲಕ್ಷ ರೂ. ಮೌಲ್ಯದ ಕಾರು, ಎರಡು ತಲ್ವಾರ್, ಡ್ರಾಗ‌ರ್, 10 ಮೊಬೈಲ್ ಪೋನ್‌ಗಳು ಹಾಗೂ 2ಸಾವಿರ ರೂ. ನಗದು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್‌ ಆಯುಕ್ತ ಎನ್. ಶಶಿಕುಮಾ‌ರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಬ್ಲೂರ ಕ್ರಾಸ್ ಬಳಿ ಆರೋಪಿಗಳನ್ನು ಕರೆದೊಯ್ದು ಪಂಚನಾಮೆ ನಡೆಸುತ್ತಿದ್ದಾಗ, ಕೇಶಬಚಂದ್ರ, ನೀಲಾಂಬರ ಮತ್ತು ತೌಸಿಫ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಆ ವೇಳೆ ಸಿಸಿಬಿ ವಿಭಾಗದ ಪಾಟೀಲ ಮತ್ತು ಹೆದ್ದೇರಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಿಮ್ಸ್‌ಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.

ಇನ್ನೂ ಧಾರವಾಡದ ಕೋಳಿಕೇರಿ ನುಂಚ್ಚಬ್ಲಿ ಬಾವಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಖಚಿತ ಮಾಹಿತಿ ಮೇರೆಗೆ ಧಾರವಾಡದ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆಂಬ ವಿಷಯದ ಕುರಿತು ವಿವರಿಸಿದ ಹು-ಧಾ ಪೊಲೀಸ್ ಕಮೀಷನ‌ರ್, ಕೊಲ್ಲಾಪೂರದ ಸೈಫಲ್ಲಿ ಶಬ್ಬಿರ್ ಸುತಾ‌ರ್, ಸಂಕೇಶ್ವರ ಹತ್ತಿರದ ಸೊಲ್ಲಾಪುರದ ಸಂಕೇತ್‌ ಬಾಳು ಕೋತ್, ಧಾರವಾಡದ ಸಂದೀಪ್‌ ದಯಾನಂದ ಸಳಕೆ, ಹಜರತಲಿ ಮಕಾನಾದಾರ ಎಂಬವರು ಬಂಧಿತ ಆರೋಪಿಗಳಾಗಿದ್ದಾರೆಂದರು.

ಇವರು ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಿದ್ದು, ಈ ನಿಟ್ಟಿನಲ್ಲಿ ಆರೋಪಿತರಿಂದ 1942 ಗ್ರಾಂ ನಿಷೇಧಿತ ಮಾದಕ ವಸ್ತು ಗಾಂಜಾ, 1200 ನಗದು, ಎರಡು ಸ್ಮಾರ್ಟ್ ಫೋನ್, ಒಂದು ಬ್ಯಾಗ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಧಾರವಾಡ ಶಹರ ಠಾಣೆಯ ಪೊಲೀಸ್‌ ಇನ್ಸೆಕ್ಟ‌ರ್ ಎನ್.ಸಿ.ಕಾಡದೇವರಮಠ ಇವರ ನೇತೃತದಲ್ಲಿ ಪ್ರಕರಣವನ್ನು ಬೇಧಿಸಲಾಗಿದೆ ಎಂದರು.

More News

You cannot copy content of this page