KH MUNIYAPPA MEET PRAHLAD JOSHI: ರಾಜ್ಯಕ್ಕೆ ಬೇಕಾದ ಅಕ್ಕಿ ಸರಬರಾಜು ಕುರಿತು ಕೇಂದ್ರ ಸರ್ಕಾರದ ಸಚಿವರನ್ನು ಬೇಟಿ ಮಾಡಿದ ಆಹಾರ ಸಚಿವ ಮುನಿಯಪ್ಪ

ನವದೆಹಲಿ: ಕೇಂದ್ರ ಆಹಾರ ಸಚಿವರಾದ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ತಿಂಗಳಿಗೆ ಎಷ್ಟು ಅಕ್ಕಿ ವಿತರಿಸುತ್ತೀರಾ , ವರ್ಷಕ್ಕೆ ಎಷ್ಟು ಅಕ್ಕಿ ಬೇಕಾಗುತ್ತದೆ ಎಂಬುದನ್ನು ಅವರ ಮುಂದೆ ಪ್ರಸ್ತಾಪಿಸಿದ ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ.

ಬಿಪಿಎಲ್ ಪಡಿತರ ಚೀಟಿಯಲ್ಲಿ ಎರಡು ಭಾಗ ಇದೆ ಒಂದು ಕೇಂದ್ರ ಸರ್ಕಾರ ಕೊಡುತ್ತದೆ. ಅದು ನಾಲ್ಕು ಕೋಟಿ ಜನಕ್ಕೆ ಕೊಡುತ್ತದೆ. ನಮ್ಮ ರಾಜ್ಯ ಸರ್ಕಾರ 4 ಕೋಟಿ 50 ಲಕ್ಷ ಬಿಪಿಎಲ್ ಪಡಿತರದಾರರಿಗೆ ಅಕ್ಕಿ ಕೊಡುತ್ತಿದ್ದೇವೆ.

ರಾಜ್ಯ ಸರ್ಕಾರ ಕರ್ನಾಟಕದಲ್ಲಿ 13 ಲಕ್ಷ ಬಿಪಿಎಲ್ ಪಡಿತರ ಕಾರ್ಡ್ಗಳನ್ನು ಹೊಂದಿದ್ದು ಅಂದರೆ 40 ರಿಂದ 50 ಲಕ್ಷ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಅಕ್ಕಿಯನ್ನು ಕೊಡುತ್ತಿದ್ದೆ.

ಅದಕ್ಕೆ ನಾವು ಕೇಂದ್ರ ಸ್ವಾಮ್ಯದ ಕೇಂದ್ರೀಯ ಭಂಡಾರ ಎನ್.ಸಿ.ಸಿ.ಎಫ್ ಅವರ ಮುಖಾಂತರ ಅಕ್ಕಿಯನ್ನು ಖರೀದಿ ಮಾಡುತ್ತಿದ್ದೇವೆ. ಈಗ ಕೇಂದ್ರ ಸರ್ಕಾರ ಮುಂದೆ ಬಂದಿದ್ದು 28 ರೂಪಾಯಿಗೆ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದಾರೆ.

ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (FCI) 34 ರೂಪಾಯಿಯಂತೆ ಇಂದಿನ ರೇಟ್ ಅಲ್ಲಿ ನೀಡಲಾಗುತ್ತಿತ್ತು. ಈಗ 28 ರೂಪಾಯಿಗೆ ಅಕ್ಕಿ ಕೊಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ನಾನು ಆದಷ್ಟು ಬೇಗ ಸಚಿವರಾದ ಪ್ರಹ್ಲಾದ್ ಜೋಶಿಯವರನ್ನು ಮಾತನಾಡಿ ನಮ್ಮ ರಾಜ್ಯಕ್ಕೆ ಬೇಕಾಗಿರುವ ಅಕ್ಕಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಇನ್ನುಳಿದ 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರಕ್ಕೆ ಮೊದಲು ಕೇಳಿದ್ದೆವು ಕೊಡಲಿಲ್ಲ,…… ಈಗ ಮುಂದೆ ಬಂದಿರೋದು ಸ್ವಾಗತ.

ಆದರೆ ನಾವು ರಾಜ್ಯದಲ್ಲಿ ಸರ್ವೇ ಮಾಡಿರುವ ಪ್ರಕಾರ ಗ್ರಾಹಕರು ಐದು ಕೆಜಿ ಅಕ್ಕಿ ಜೊತೆಗೆ ಬೇಳೆ, ಎಣ್ಣೆ ,ಸಕ್ಕರೆ ಮುಂತಾದ ಆಹಾರ ಸಾಮಗ್ರಿಗಳನ್ನು (ಪದಾರ್ಥಗಳನ್ನು) ಕೊಟ್ಟರೆ ಅನುಕೂಲವಾಗುತ್ತದೆ ಎಂದು ರಾಜ್ಯದ 93 ಪರ್ಸೆಂಟ್ ಜನ ಅಭಿಪ್ರಾಯಪಟ್ಟಿದ್ದಾರೆ.

ನಾನು ಇದನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ,ಹಾಗೂ ಉಪ ಮುಖ್ಯಮಂತ್ರಿ ,ಕೆಪಿಸಿಸಿ ಅಧ್ಯಕ್ಷರಾದ ಡಿಕೆ. ಶಿವಕುಮಾರ್ ಅವರ ಜೊತೆ ಚರ್ಚಿಸಿ ಯಾವ ರೀತಿ ಮಾಡಬೇಕು ಅನ್ನೋದನ್ನು ತೀರ್ಮಾನಿಸಲಾಗುವುದು ಎಂದರು.

ಒಟ್ಟಾರೆ ರಾಜ್ಯ ಸರ್ಕಾರ ನೇರವಾಗಿ ಅಕ್ಕಿಯನ್ನು ಕೊಡುವುದರ ಬದಲಾಗಿ ಹಕ್ಕಿಯ ಜೊತೆ ಬೇಳೆ ಸಕ್ಕರೆ ಎಣ್ಣೆ ಮುಂತಾದ ಪದಾರ್ಥಗಳನ್ನು ನೀಡಿ ಎಂದು ಗ್ರಾಹಕರು ಕೇಳುತ್ತಿದ್ದು. ಇದರ ಅಂತಿಮ ತೀರ್ಮಾನ ಸರ್ಕಾರ ಕೈಗೊಳ್ಳಬೇಕಾಗುತ್ತದೆ ಎಂದರು.

ರಾಜ್ಯದಲ್ಲಿ 13 ಲಕ್ಷ ಬಿಪಿಲ್ ಕಾರ್ಡ್ಗಳಿದ್ದು 45 ರಿಂದ 55 ಲಕ್ಷ ಪಡಿತರದಾರರಿದ್ದಾರೆ. ಅದಕ್ಕೆ ಪ್ರತಿ ತಿಂಗಳಿಗೆ 20 ಸಾವಿರ ಮೆಟ್ರಿಕ್ ಟನ್ ಬೇಕಾಗುತ್ತದೆ ಎಂದು ಸಚಿವರಲ್ಲಿ ಪ್ರಸ್ತಾಪಿಸಿದರು.

More News

You cannot copy content of this page