ಬೆಂಗಳೂರು: ಧ್ರುವ ಸರ್ಜಾ ಅವರ ಮಾರ್ಟಿನ್’ ಸಿನಿಮಾ ಇದೇ ಅಕ್ಟೋಬರ್ 11ರಂದು ಭರ್ಜರಿಯಾಗಿ ರಿಲೀಸ್ ಆಗುತ್ತಿದೆ. ಟ್ರೀಲರ್ ಎಲ್ಲರಿಗೂ ಕಿಕ್ಕೇರಿಸಿತ್ತು. ಇದೀಗ ಸಾಂಗ್ 5 ಭಾಷೆಗಳಲ್ಲಿ ಇಂದು ರಿಲೀಸ್ ಆಗಿದ್ದು ಭರ್ಜರಿಯಾಗಿ ಖುಷಿ ಕೊಟ್ಟಿದೆ.
ಟ್ರೇಲರ್ ನಲ್ಲಿ ಭರ್ಜರಿ ಆ್ಯಕ್ಷನ್ ಇತ್ತು. ಈಗ ‘ಜೀವ ನೀನೆ..’ ಹೆಸರಿನ ರೊಮ್ಯಾಂಟಿಕ್ ಹಾಡನ್ನು ರಿಲೀಸ್ ಮಾಡಲಾಗಿದೆ. ಇದರಲ್ಲಿ ಧ್ರುವ ಸರ್ಜಾ ಹಾಗೂ ವೈಭವಿ ಶಾಂಡಿಲ್ಯ ಅವರ ಕೆಮಿಸ್ಟ್ರಿ ಫ್ಯಾನ್ಸ್ ಗೆ ಇಷ್ಟ ಆಗಿದೆ.
ಮಾರ್ಟಿನ್’ ಚಿತ್ರದ ಹಾಡುಗಳಿಗೆ ಮಣಿ ಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಮಣಿ ಶರ್ಮಾ ಅವರು ತೆಲುಗು ಸಿನಿಮಾಗಳಲ್ಲಿ ಕೆಲಸ ಮಾಡಿ ಫೇಮಸ್ ಆಗಿದ್ದಾರೆ. ಅವರ ಸಂಗೀತ ಸಂಯೋಜನೆಯಲ್ಲಿ ‘ಜೀವ ನೀನೆ..’ ಹಾಡು ಮೂಡಿ ಬಂದಿದೆ. ಈ ಹಾಡನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.ಐದು ಭಾಷೆಗಳಲ್ಲೂ ಹಾಡು ಸೂಪರ್ ಆಗಿ ಮೂಡಿ ಬಂದಿದ್ದು ಹಿಂದಿ ಭಾಷೆಯ ಈ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಜೀವ ನೀನೇ ಹಾಡು ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೇ ವ್ಯೂಸ್ ಆಗಿದೆ.
#JeevaNene #JeevanNeeye #Adhanthaele #VaramPolae