ಹುಬ್ಬಳ್ಳಿ: ಅಣ್ಣಿಗೇರಿ ಪಟ್ಟಣದಲ್ಲಿನ ಸರಕಾರದ ಉಗ್ರಾಣದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಕಡಲೆ, ಹೆಸರು ಕಳ್ಳತನವಾದ ಪ್ರಕರಣದಲ್ಲಿ ಮ್ಯಾನೇಜರ್ ಅಶೋಕ ಮುಶಣ್ಣನವರ ಬಂಧನವಾಗಿದೆಯಷ್ಟೇ. ಆದರೆ, ಇದರ ಹಿಂದೆ ಕೈಗೂಡಿಸಿರುವ ಪ್ರತಿಯೊಬ್ಬರು ಬಂಧನವಾಗಬೇಕು ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಅವರು ಒತ್ತಾಯಿಸಿದ್ದಾರೆ.
ರೈತರು ತಮ್ಮ ಉಪಜೀವನಕ್ಕಾಗಿ ಉಗ್ರಾಣದಲ್ಲಿಟ್ಟಿದ್ದ 4150 ಚೀಲಗಳನ್ನ ಕದಿಯಲಾಗಿದೆ. ಈ ಕುರಿತು ಭೇಟಿ ನೀಡಿ, ತಪ್ಪಿತಸ್ಥರು ಬಂಧನವಾಗಬೇಕೆಂದು ಆಗ್ರಹಿಸಿದ್ದೆ.
ಈಗ ಮ್ಯಾನೇಜರ್ ಬಂಧನವಾಗಿದೆ. ಆದರೆ, ಇವುಗಳನ್ನ ಸಾಗಾಣೆ ಮಾಡಿದ, ಖರೀದಿಸಿದ ಮತ್ತೂ ಸಹಕಾರ ನೀಡಿದವರ ಬಂಧನ ಯಾವಾಗ ಎಂದು ಪ್ರಶ್ನಿಸಿರುವ ಮಾಜಿ ಸಚಿವರು, ರೈತರಿಗೆ ನ್ಯಾಯ ದೊರಕಿಸಿ ಕೊಡದೇ ಇದ್ದರೇ ಹೋರಾಟ ಅನಿವಾರ್ಯ ಎಂದಿದ್ದಾರೆ.