CHANNAPATNA BY ELECTIONS: ಚನ್ನಪಟ್ಟಣ ಜೆಡಿಎಸ್ ಭದ್ರಕೋಟೆ : ನಾನೇ ಸ್ಪರ್ಧೆ ಮಾಡಬೇಕು ಅಂತೇನಿಲ್ಲ: ನಿಖಿಲ್ ಕುಮಾರಸ್ವಾಮಿ

ರಾಮನಗರ : ಚನ್ನಪಟ್ಟಣ ತಾಲ್ಲೂಕಿನ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರುಗಳ ಸಭೆಯಲ್ಲಿ ಕೇಂದ್ರ ಸಚಿವರಾದ H.D ಕುಮಾರಸ್ವಾಮಿ ಅವರು ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಭೆಗೂ ಮುನ್ನ ಬಿಡದಿಯ ತೋಟದ ಮನೆಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನಾಡಿನ ಜನತೆಗೆ ವಿಜಯದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು ತಿಳಿಸಿದರು.

ಚನ್ನಪಟ್ಟಣ ಟಿಕೆಟ್ ವಿಚಾರಕ್ಕೆ ಮಾತನಾಡಿದ ಅವರು, ಈಗಾಗಲೇ ಕುಮಾರಣ್ಣ ಅವರು ಐದು ಜಿಲ್ಲಾ ಪಂಚಾಯತಿ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ಪ್ರಮುಖ ಮುಖಂಡರಹಾಗೂ ಸರ್ವಜನಿಕರ ಸಭೆ ನಡೆಸಿದ್ದಾರೆ.ಅತೀ ಶೀಘ್ರದಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇರುತ್ತೆ. ಈ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರುಗಳು, ಮುಖಂಡರುಗಳು ಸಭೆ ನಡೆಸುತ್ತಿದ್ದಾರೆ.

ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ಭದ್ರಕೋಟೆ. ಈ ಬಾರಿ ಉಪಚುನಾವಣೆಯಲ್ಲಿ ಇಡೀ ರಾಷ್ಟ್ರದ ಗಮನ ಸೆಳೆದಿದೆ. ಇದಕ್ಕೆ ಕಾರಣ ಕುಮಾರಣ್ಣನ ಸ್ವ ಕ್ಷೇತ್ರ. ಆಗಾಗಿ ಕೆಲವೊಂದು ನಿರ್ಧಾರಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಈ ಸಭೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಚನ್ನಪಟ್ಟಣ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅನೇಕ ಸಂದರ್ಭದಲ್ಲಿ ಹೇಳೀದ್ದೇನೆ, ಇಲ್ಲಿ ಅಭ್ಯರ್ಥಿ ಯಾರಾದ್ರೂ ಇರಬಹುದು, ಯಾರೇ ಅಭ್ಯರ್ಥಿ ಆದ್ರೂ 80 ಸಾವಿರ ಮತ ಈ ಕ್ಷೇತ್ರದಲ್ಲಿ ನಿರಂತರವಾಗಿ ಕ್ಷೇತ್ರದ ಜನತೆ ಆಶೀರ್ವಾದ ಮಾಡಿದ್ದಾರೆ ಎಂದರು.

ಇಲ್ಲಿ ನಿಖಿಲ್ ಕುಮಾರಸ್ವಾಮಿನೇ ಬಂದು ಸ್ಪರ್ಧೆ ಮಾಡಬೇಕೆಂದಿಲ್ಲ, ಸಾಮಾನ್ಯ ಕಾರ್ಯಕರ್ತ ನಿಂತಾಗ ಕೂಡ 60 ಸಾವಿರ ಮತ ನೀಡಿದ್ರು, ಅನಿತಾ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿದಾಗ 73 ಸಾವಿರ ಮತಗಳು ನೀಡಿದ್ದರು, ಈಗಾಗಿ 80ಸಾವಿರ ಮತಜೆಡಿಎಸ್ ತೆಕ್ಕೆನಲ್ಲಿದೆ, ನಮ್ಮ ಹೋರಾಟ 20 ರಿಂದ 25 ಸಾವಿರ ಮತಗಳಿಗೆ, ಲೀಡ್ ಬರುವುದಕ್ಕೆ ನಮ್ಮ ಹೋರಾಟ ಆಗಾಗಿ ಅಂತಿಮವಾಗಿ NDA ಮಿತ್ರ ಪಕ್ಷವಾಗಿ ಲೋಕಸಭೆಯಲ್ಲಿ ಕೆಲಸ ಮಾಡಿದ್ದೇವೆ ನಮ್ಮ ಹೈಕಮಾಂಡ್ ಮತ್ತು ಬಿಜೆಪಿ ಹೈಕಮಾಂಡ್ ಚರ್ಚೆ ಮಾಡಿ ಅಭ್ಯರ್ಥಿ ಯಾರು ಅಂತ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

More News

You cannot copy content of this page