Rhythm Kannada Movie: ‘ರಿದಂ’ಗೆ ರಾಯರ ಆಶೀರ್ವಾದ, ಮಂತ್ರಾಲಯದಲ್ಲಿ ಟ್ರೈಲರ್ ಬಿಡುಗಡೆ

ಎಕ್ಸ್ ಕ್ಯೂಸ್ ಮಿ ನಂತರ ಎರಡು ದಶಕಗಳಾದ ಮೇಲೆ ಅಂಥದೇ ಮ್ಯೂಸಿಕಲ್ ಲವ್ ಸ್ಟೋರಿ ಹೊಂದಿರುವ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗಿದೆ. ಅದರ ಹೆಸರು ರಿದಂ. ಮಂಜು ಮೂವೀಸ್ ಬ್ಯಾನರ್ ಅಡಿ ನಟ, ನಿರ್ದೇಶಕ ಮಂಜು ಮಿಲನ್ ‌ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.‌ ಜತೆಗೆ ಚಿತ್ರದ ನಾಯಕನಾಗೂ ಕಾಣಿಸಿಕೊಂಡಿದ್ದಾರೆ.
ಇದೇ ತಿಂಗಳು 29ರಂದು ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ಟ್ರೈಲರನ್ನು ಇತ್ತೀ ಚೆಗಷ್ಟೇ ಮಂತ್ರಾಲಯದ ಶ್ರೀಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಗಳು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಹಿಂದೆ ಮುತ್ತಿನ ಮಳೆಯಲಿ, ಪ್ರೀತಿ ಎಂದರೇನು ಚಿತ್ರಗಳನ್ನು ನಿರ್ದೇಶಿಸಿದ್ದ ಮಂಜು ಮಿಲನ್ ಅವರ ನಿರ್ದೇಶನ ಹಾಗೂ ನಿರ್ಮಾಣದ 3ನೇ ಚಿತ್ರವಿದು. 9 ಸುಂದರ ಹಾಡುಗಳನ್ನು ಒಳಗೊಂಡ ರಿದಂ ಒಂದು ಮ್ಯೂಸಿಕಲ್ ಲವ್ ಸ್ಟೋರಿ ಒಳಗೊಂಡಿದ್ದರೂ ನೋಡುಗರಿಗೆ ಎಮೋಷನಲಿ ಕನೆಕ್ಟ್ ಆಗುತ್ತದೆ. ಅಲ್ಲದೆ ಈ ಚಿತ್ರದ 45% ಶೂಟಿಂಗ್ ಸಾಗರದಾಚೆಯ ಸಿಂಗಪೂರ್ ‌ನಲ್ಲೇ ನಡೆದಿರುವುದು ವಿಶೇಷ. ಉಳಿದಂತೆ ಬೆಂಗಳೂರು, ಮೈಸೂರು, ಶ್ರೀರಂಗಪಟ್ಟಣ ಹಾಗೂ ಮೇಲುಕೋಟೆಯ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಈಗಾಗಲೇ ಸೆನ್ಸಾರ್ ನಿಂದ U/A ಪ್ರಮಾಣ ಪತ್ರ ಪಡೆದಿರುವ
ರಿದಂ ಚಿತ್ರಕ್ಕೆ ಎ.ಟಿ.ರವೀಶ್ ಅವರು ಸಂಗೀತ ಸಂಯೋಜನೆ ಮಾಡಿದ್ದು, ಅಚ್ಚು ಸುರೇಶ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ 4 ಸಾಹಸ ದೃಶ್ಯಗಳಿದ್ದು ಅಲ್ಟಿಮೇಟ್ ಶಿವು, ಫಯಾಜ್ ಖಾನ್ ಸ್ಟಂಟ್ ಮಾಸ್ಟರ್ ಆಗಿ ಕೆಲಸ ಮಾಡಿದ್ದಾರೆ.
ಮಂಜು ಮಿಲನ್, ಮೇಘಶ್ರೀ ಚಿತ್ರದ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದು, ಉಳಿದ ತಾರಾಗಣದಲ್ಲಿ ಹಿರಿಯ ನಟರಾದ ಸುಮನ್, ಶ್ರೀನಿವಾಸಮೂರ್ತಿ, ಶಿವರಾಮ್, ವಿನಯ್ ಪ್ರಸಾದ್, ಭವ್ಯ, ಗಿರಿಜಾ ಲೋಕೇಶ್, ಮಿಮಿಕ್ರಿ ದಯಾನಂದ್ ಹಾಗೂ ಮುಖ್ಯ ಮಂತ್ರಿ ಚಂದ್ರು ನಟಿಸಿದ್ದಾರೆ

More News

You cannot copy content of this page